ಶಿಕ್ಷಕರು ಸೇವೆಯಿಂದ ನಿವೃತ್ತರಾಗುತ್ತಾರೆ; ಜ್ಞಾನ ನೀಡುವುದರಿಂದಲ್ಲ: ಆರ್.ಎಸ್. ಪಾಟೀಲ
Teachers retire from service, not from imparting knowledge: R.S. Patil
ಲೋಕದರ್ಶನ ವರದಿ
ಕಾಗವಾಡ 03 : ಶಿಕ್ಷಕರು ತಮ್ಮ ಕೆಲಸದಿಂದ ಮಾತ್ರ ನಿವೃತ್ತರಾಗುತ್ತಾರೆ. ಜ್ಞಾನವನ್ನು ನೀಡುವ ಕೆಲಸದಿಂದ ಎಂದಿಗೂ ಅವರು ನಿವೃತ್ತರಾಗುವುದಿಲ್ಲ. ಸಿದ್ಧೇಶ್ವರ ವಿದ್ಯಾಲಯದ ಶಿಕ್ಷಕ ಶಂಕರ್ ಪವಾರ್ ಶಾಲಾ ಸೇವೆಯಿಂದ ನಿವೃತ್ತರಾಗುತ್ತಿದ್ದರೂ, ಅವರು ಸಮಾಜಕ್ಕೆ ಜ್ಞಾನವನ್ನು ನೀಡುವುದನ್ನು ಮುಂದುವರಿಸಬೇಕೆಂದು ಪ್ರಥಮ ದರ್ಜೆ ಗುತ್ತಿಗೆದಾರ ರುದ್ರಗೌಡ ಪಾಟೀಲ ಹೇಳಿದ್ದಾರೆ. ಅವರು ಸೋಮವಾರ ದಿ. 29 ರಂದು ತಾಲೂಕಿನ ಶಿರಗುಪ್ಪಿ ಗ್ರಾಮದ ಶ್ರೀ ಸಿದ್ಧೇಶ್ವರ ವಿದ್ಯಾಲಯದಲ್ಲಿ ಶಂಕರ ಪವಾರ ಅವರು ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾದ ಪ್ರಯುಕ್ತ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ನಿವೃತ್ತ ಶಿಕ್ಷಕ ಶಂಕರ ಪವಾರ ಮತ್ತು ಅವರ ಪತ್ನಿ ಅಂಬಿಕಾ ಪವಾರ್ ಅವರನ್ನು ಗಣ್ಯರು ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು.
ಈ ವೇಳೆ ದತ್ತ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಜ್ಯೋತಿಕುಮಾರ ಪಾಟೀಲ, ಸಂಸ್ಥೆಯ ಅಧ್ಯಕ್ಷ ಸಾತಗೌಡಾ ಪಾಟೀಲ, ಮುಖಂಡರಾದ ಐ.ಎ. ಪಾಟೀಲ, ಎಂ.ಕೆ. ಪಾಟೀಲ, ಸುಭಾಶ ಪಾಟೀಲ, ಅಶೋಕ ಕಾತ್ರಾಳೆ, ಮುಖ್ಯೋದ್ಯಾಪಕ ಎಸ್.ಡಿ ಬುವಾ, ಎ.ಬಿ ಶಹಾಪುರೆ, ಎ.ಎಸ್ ಪಾಟೀಲ, ಬಸವರಾಜ ಕಾಡದೇವರ, ಡಾ. ಲಕ್ಷ್ಮಣ ಪವಾರ್, ಎ.ಬಿ. ಉದಗಾವೆ, ಆರ್.ಎ. ಪಾಟೀಲ, ಆರ್.ಎನ್. ಚೌಗುಲಾ, ಆರ್.ಎ. ಪಾಟೀಲ, ಆರ್.ಬಿ. ಪಾಟೀಲ, ಋಷಭ ಡಿಗ್ರಜೆ, ರಾವಸಾಹೇಬ ಶಿಂಧೆ ಸೇರಿದಂತೆ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು, ಪಾಲಕರು, ಅಭಿಮಾನಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 