ಶಿಕ್ಷಕರ ಸೇವಾ ಮನೋಭಾವಕ್ಕೆ ಸನ್ಮಾನ

 ಶಿಕ್ಷಕರ ಸೇವಾ ಮನೋಭಾವಕ್ಕೆ ಸನ್ಮಾನ Teachers' service spirit honored

 ಶಿಕ್ಷಕರ ಸೇವಾ ಮನೋಭಾವಕ್ಕೆ ಸನ್ಮಾನ 

 ಧಾರವಾಡ  03:  ಯಾವುದೇ ಅಪೇಕ್ಷೆ ಇಲ್ಲದೆ ಅಗತ್ಯ ಇರುವ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗೆ ಸಹಕಾರ ನೀಡುವ ಉದ್ದೇಶವಾಗಿದೆ ಎಂದು ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್‌ನ ಅಧ್ಯಕ್ಷರಾದ ನಾಗರಾಜ್ ತಾಯನ್ನವರ್ ಹೇಳಿದರು 

ಅವರು ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್(3170) ವತಿಯಿಂದ ಶಿಕ್ಷಣ ಮತ್ತು ಸಮುದಾಯದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಇನಸ್ಟೂಟ್ ಆಫ್ ಇಂಜನೀಯರ​‍್ಸ‌ ಧಾರವಾಡದಲ್ಲಿ ಐವರು ಸರಕಾರಿ ಶಾಲಾ ಶಿಕ್ಷಕರಿಗೆ ನೇಷನ್ ಬಿಲ್ಡರ್ಸ್‌ ಪ್ರಶಸ್ತಿಯನ್ನು ನೀಡಿ ಗೌರವಿಸಿ ಮಾತನಾಡುತ್ತಾ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರು ಮಹತ್ತರ ಪಾತ್ರವಹಿಸುತ್ತಾರೆ. ಮಕ್ಕಳಿಗೆ ಉತ್ತಮ ರೀತಿ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿ ಈ ಪ್ರಶಸ್ತಿ ಕೊಡುವ ಮೂಲಕ ಹೆಚ್ಚುತ್ತದೆ  ಎಂದು ಹೇಳಿದರು. 

ರತನ್ ಗುರುರಾಜ ಹಡಗಲಿ ಉಪನ್ಯಾಸ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಉಪನ್ಯಾಸ ನೀಡುತ್ತಾ ಸೇವಾ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸೇವಾ ಮನೋಭಾವ, ನಾಯಕತ್ವ ಗುಣ ಬೆಳೆದು ವ್ಯಕ್ತಿತ್ವ ವಿಕಸನ ಆಗುತ್ತದೆ. ಸಮಾಜದಲ್ಲಿ ಅನೇಕ ಬದಲಾವಣೆ ಆಗಲು ಜನರಿಗೆ ಸೇವೆ ಹಾಗೂ ಅರಿವು ಮೂಡಿಸಬೇಕು ಎಂದರು. 

ಧಾರವಾಡ ಗ್ರಾಮೀಣದ ಬಿಆರಸಿ ಸಮನ್ವಯಾಧಿಕಾರಿ ಕುಮಾರ ಕೆ ಫ್ ಮಾತನಾಡುತ್ತಾ ಸಮಾಜದಲ್ಲಿ ಸೇವೆ ಮಾಡುವ ಹಾಗೂ ಪಡೆದುಕೊಳ್ಳುವ ಅನೇಕರು ಇದ್ದಾರೆ. ಆದರೆ ಇದು ಸಾಕಾರ ಆಗಬೇಕಾದರೆ ಒಂದು ಸಂಸ್ಥೆ ಅಗತ್ಯ ಇರುತ್ತದೆ. ಇಂತಹ ಅನೇಕ ಸೇವಾ ಸಂಸ್ಥೆಗಳಲ್ಲಿ ರೋಟರಿ ಸಂಸ್ಥೆ ವಿಶ್ವದಲ್ಲೆಯೇ ಅತ್ಯಂತ ದೊಡ್ಡದು. ಈ ಸಂಸ್ಥೆಯಲ್ಲಿರುವ ಸೇವಾ ಮನೋಭಾವದ ವ್ಯಕ್ತಿಗಳು ಸಮಾಜಕ್ಕೆ ಬೇಕಾದ ಸೇವೆ ನೀಡುವ ಜತೆಗೆ ಪ್ರಗತಿಗೆ ಕೈಜೋಡಿಸುತ್ತಾರೆ ಎಂದರು. 

ಮುಗದ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೃಷ್ಣಾಬಾಯಿ ವಡೆಯರ್,ಚಂದನಮಟ್ಟಿ ಗ್ರಾಮದ  ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಎಸ್‌.ಎಸ್‌.ಜೋರಮ್ಮನವರ್, ಕೆಜಿಬಿವಿ ಅಳ್ನಾವರದ ದೀಪಾ ಲಾಡ್, ಕೆಪಿಎಸ ಪ್ರೌಢಶಾಲಾ ವಿಭಾಗದ ಪ್ರೇಮಾ ಯಲಿಗಾರ್, ಕಲಕೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಪ್ರಶಾಂತ್ ಝಳಕಿ ಇವರ ಶಿಕ್ಷಕರ ಸೇವಾ ಮನೋಭಾವಕ್ಕೆ ಸಂದ ಗೌರವವಾಗಿದೆ.ಇವರಿಗೆ ಪ್ರಶಸ್ತಿ ನೀಡಿ ಸನ್ಮಾನ ಮಾಡಲಾಯಿತು.ಇದೇ ಸಂದರ್ಭದಲ್ಲಿ ಉತ್ತಮ ಉಪನ್ಯಾಸ ನೀಡಿದೆ ರತನ್ ಗುರುರಾಜ ಹಡಗಲಿ ಮತ್ತು ಧಾರವಾಡ ಗ್ರಾಮೀಣದ ಬಿಆರಸಿ ಸಮನ್ವಯಾಧಿಕಾರಿ ಕುಮಾರ ಕೆ ಫ್ ಇವರಿಗೆ ಸನ್ಮಾನ ಮಾಡಲಾಯಿತು. 

ಸಭೆಯಲ್ಲಿ ನಾಗರಾಜ್ ತಾಯನ್ನವರ್ ಅಧ್ಯಕ್ಷರು, ಕಾರ್ಯದರ್ಶಿ ವಾಮನ್ ಪಿಡಿಜಿ ಗಣೇಶ್ ಭಟ್, ಸಂಜಯ್ ಇಂಗಳೆ, ಜಯಂತಿಲಾಲ್ ಲಾಲ್ ಜಿಡಿನ್, ಉಪಾಧ್ಯಕ್ಷರು, ಆರ್ಟಿಎನ್ ನಜೀರ್ ದೇಸಾಯಿ, ಆರ್ಟಿಎನ್ ಶಿವರಡ್ಡಿ ಸೋಮಾಪುರ, ಆರ್ಟಿಎನ್ ಎಸ್ ವಿ ತಟವಟಿ (ಕವಿತಾ ತಾಯನ್ನವರ). ಮತ್ತು ರತನ್ ಗುರುರಾಜ ಹಡಗಲಿ, ಬಿಆರಸಿ ಸಮನ್ವಯಾಧಿಕಾರಿ ಕುಮಾರ ಕೆಫ್ ಉಪಸ್ಥಿತರಿದ್ದರು. ಕಾರ್ಯದರ್ಶಿ ವಾಮನ್ ಮೊದಲಿಗೆ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.