ಪ್ರಗತಿಪರ ಕೃಷಿಕರ ತೋಟಕ್ಕೆ ವಿದ್ಯಾರ್ಥಿಗಳ ಭೇಟಿ! ಪರಿಸರ ಅರಿವು ಹೆಚ್ಚಿಸಿದ ‘ನೇಸರ ಇಕೋ ಕ್ಲಬ್’
Students visit progressive farmers' farm! 'Nesara Eco Club' increases environmental awareness
ಮುಂಡಗೋಡ 20: ತಾಲೂಕಿನ ಬೆಡಸಗಾಂವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ನೇಸರ ಇಕೋ ಕ್ಲಬ್’ ವತಿಯಿಂದ ರಾಷ್ಟ್ರೀಯ ಹಸಿರು ಪಡೆಯ ಅಂಗವಾಗಿ “ಮಕ್ಕಳ ನಡೆಗೆ ಪರಿಸರದ ಕಡೆಗೆ” ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳು ಬೆಡಸಗಾಂವ ಗ್ರಾಮದ ಪ್ರಗತಿಪರ ಕೃಷಿಕರಾದ ವಿಜಯ ಶಾಂತು ನಾಯಕ, ಅವರ ತೋಟಕ್ಕೆ ಭೇಟಿ ನೀಡಿದರು. ತೋಟದಲ್ಲಿ ವಿವಿಧ ಗಿಡಮರಗಳ ಬೆಳೆ, ಜೇನು ಕೃಷಿ, ಪರಿಸರ ಸಂರಕ್ಷಣೆ ವಿಧಾನಗಳು ಹಾಗೂ ನೈಸರ್ಗಿಕ ಕೃಷಿಯ ಮಹತ್ವ ಕುರಿತು ಕೃಷಿಕರು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.
ವಿದ್ಯಾರ್ಥಿಗಳು ಕೃಷಿಯ ಪ್ರಾಯೋಗಿಕ ಜ್ಞಾನವನ್ನು ನೇರವಾಗಿ ಪಡೆದು ಪರಿಸರ ಸಂರಕ್ಷಣೆ ಬಗ್ಗೆ ಅರಿವು ಹೆಚ್ಚಿಸಿಕೊಂಡರು. ಜೇನು ಕೃಷಿ ವಿಧಾನ, ವಿವಿಧ ಹಣ್ಣು-ತರಕಾರಿ ಬೆಳೆಗಳ ಬೆಳವಣಿಗೆ ಹಾಗೂ ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕುವ ಕ್ರಮಗಳ ಕುರಿತು ಮಾಹಿತಿ ಪಡೆದ ಮಕ್ಕಳು ಖುಷಿ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲೆಯ ವತಿಯಿಂದ ವಿಜಯ ಶಾಂತು ನಾಯಕ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸ್ಮೀತಾ ಕುರ್ಡೇಕರ, ಶಿಕ್ಷಕಿಯರಾದ ರೂಪಾ ಶೆಟ್ಟಿ, ಯಶೋಧಾ ಎಸ್, ಎಸ್ಡಿಎಂಸಿ ಸದಸ್ಯ ಸಂಜೀವ ನಾಯ್ಕ (ಬೆಡಸಗಾಂವ), ಶಾಲಾ ಬಿಸಿಯೂಟ ಸಹಾಯಕಿ ಸುಜಾತಾ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 