ಶಾಲೆಗಳ ಉನ್ನತಿಕರಣದಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ : ಬಾಬಾಸಾಹೇಬ ಪಾಟೀಲ
Students' future will be bright with the upgradation of schools: Babasaheb Patil
ನೇಸರಗಿ 23: .ಕ್ಷೇತ್ರದ ಶಾಲಾ ಕಾಲೇಜುಗಳ ಉನ್ನತಿಕರಣದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಭವಿಷ್ಯ ಉಜ್ಜಲ ಆಗುತ್ತದೆ ಮತ್ತು ದುರಸ್ತಿ ಇರುವ ಶಾಲಾ, ಕಾಲೇಜುಗಳ ಹೊಸ ಕಟ್ಟಡಗಳ ನಿರ್ಮಾಣಕ್ಕೆ ನಾನು ಸದಾ ಪ್ರಯತ್ನ ಮಾಡಿ ಶಿಕ್ಷಣ ಕ್ಷೇತ್ರದ ವ್ಯವಸ್ಥೆಗೆ ಕೆಲಸ ಮಾಡುತ್ತಿದ್ದು ಅದರ ಸದುಪಯೋಗ ವಿದ್ಯಾರ್ಥಿಗಳು ಹಾಗೂ ಪಾಲಕರು ಪಡೆದುಕೊಳ್ಳಬೇಕೆಂದು ಕಿತ್ತೂರು ಚನ್ನಮ್ಮನ ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು. ಅವರು ಸಮೀಪದ ಮಾಸ್ತಮರಡಿ ಗ್ರಾಮದಲ್ಲಿ ಮಂಗಳವಾರದಂದು 2024-25 ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕೊಠಡಿ ನಿರ್ಮಾಣದ ರೂ. 14,50,109-29 ಗಳ ಮೊತ್ತದಲ್ಲಿ ನಿರ್ಮಾಣ ಆಗಲಿರುವ ಶಾಲಾ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಿಂಗಪ್ಪ ಅರಿಕೇರಿ, ಶಿವಾನಂದ ಕುಂಕುರ, ಎಸ್ ಡಿ ಎಮ್ ಸಿ ಅಧ್ಯಕ್ಷ ಸಿದ್ದಪ್ಪ ಮಿಂಡ್ರೋಳಿ,ಮಂಜುನಾಥ ಹುಲಮನಿ, ಮಲ್ಲೇಶ ಚಿಕ್ಕೋಡಿ, ಯಲ್ಲಪ್ಪ ಚಿಕ್ಕೋಪ್ಪ, ಸದೆಪ್ಪಾ ಬಸರಿಮರದ, ನಿಲ್ಲಪ್ಪ ಕಾಣಪ್ಪನವರ, ಮುಖ್ಯ್ಯೊಪಾಧ್ಯಾಯರಾದ ಭೀಮನಗೌಡ ನಾಯ್ಕರ, ಮಲ್ಲಪ್ಪ ತಿಗಡಿ, ಸೋಮಪ್ಪ ಸುಲದಾಳ, ಎ ಇ ಇ ಮಹೇಶ ಹೊಲಿ, ಮಾಲಾ ಬಡಿಗೇರ, ಪಿ ಡಿ ಓ ಶಿವಾನಂದ ಕಲ್ಲೂರ,ಸಿದ್ದಮಲ್ಲಪ್ಪ ಆಡಿನ ಸೇರಿದಂತೆ ಗ್ರಾಮದ ಮುಖಂಡರು, ಎಲ್ಲ ಸಮಾಜದ ಮುಖಂಡರು,ಗ್ರಾಮ ಪಂಚಾಯತ ಸದಸ್ಯರು, ಎಸ್ ಡಿ ಎಮ್ ಸಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 