ಸಾರ್ವಜನಿಕ ಶಿಕ್ಷಣ ಉಳಿಸಲು ಮತ್ತು ಸರಕಾರಿ ಶಾಲೆಗಳನ್ನು ಬಲಪಡಿಸುವ ಸಂಕಲ್ಪದೊಂದಿಗೆ ಎಐಡಿಎಸ್‌ಓ ನೇತೃತ್ವದಲ್ಲಿ ವಿದ್ಯಾರ್ಥಿಗಳ ಸಮಾವೇಶ
Students' conference led by AIDSSO with the resolve to save public education and strengthen governm
ಕಾರಟಗಿ 10: ತಾಲ್ಲೂಕಿನ ಉಳೇನೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ಅಖಿಲ ಭಾರತ ಪ್ರಜಾಸತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಓ)ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಲು ಮತ್ತು ಸರಕಾರಿ ಶಾಲೆಗಳನ್ನು ಬಲಪಡಿಸುವ ಘೋಷ ವಾಕ್ಯದೊಂದಿಗೆ ವಿದ್ಯಾರ್ಥಿಗಳ ಸಮಾವೇಶವನ್ನು ನಡೆಸಿತು.ಸಮಾವೇಶದ ಮುಖ್ಯ ಭಾಷಣಕಾರರಾಗಿ ಎಐಡಿಎಸ್‌ಓ ವಿದ್ಯಾರ್ಥಿಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ತುಳಜಾರಾಮ್ ಏನ್.ಕೆ ಮಾತನಾಡಿ ವಿದ್ಯಾರ್ಥಿಗಳಿಗೆ ಇಂದು ಭಗತ್ ಸಿಂಗ್ ನೇತಾಜಿ, ಖುದಿರಾಮ್ ಬೋಸ್, ಮಾಸ್ಟರ್ ದಾ ಸೂರ್ಯ ಸೇನ್ ಜ್ಯೋತಿಬಾ ಪುಲೆ,ಸಾವಿತ್ರಿ ಬಾಯಿ ಫುಲೆ ವಿದ್ಯಾಸಾಗರ್ ರಂತಹ ಮಹಾನ್ ವ್ಯಕ್ತಿಗಳು ಆದರ್ಶ ವಾಗಬೇಕಿದೆ. ಭಗತ್ ಸಿಂಗ್ ನೇತಾಜಿಯವರು ತಮ್ಮ ಶಾಲಾ ವಿದ್ಯಾರ್ಥಿಗಳಾಗಿರುವಾಗಲೇ ಅವರು ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ್ದಾರೆ. ಸ್ವಾತಂತ್ರ ಹೋರಾಟದ ಧೀರ ಹುತಾತ್ಮ ಖುದಿರಾಮ್ ಬೋಸ್ 16 ನೇ ವಯಸಿನಲ್ಲೇ ದೇಶಕ್ಕಾಗಿ ಪ್ರಾಣವನ್ನೇ ಅರ್ಿಸಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಹೇಳುವಂತೆ ನಿಜವಾದ ಒಳ್ಳೆಯ ವಿದ್ಯಾರ್ಥಿಗಳು ಅಂದ್ರೆ ಕೇವಲ ಪಠ್ಯ ಪುಸ್ತಕ ಗಳನ್ನು ಓದಿ ಹೆಚ್ಚು ಅಂಕ ಮತ್ತು ರ್ಯಾಂಕ್ ಪಡೆದವರಲ್ಲ, ಏಕೆಂದರೆ ಒಳ್ಳೆಯ ಅಂಕಗಳಿಸಿ ರಾಂಕ್ ಪಡೆದವರು ಒಂದು ಉನ್ನತ ಹುದ್ದೆಯನ್ನು ಪಡೆಯಬಹುದಷ್ಟೇ, ಅಂದ ಮಾತ್ರಕ್ಕೆ ಅವರನ್ನು ಒಳ್ಳೆಯ ವಿದ್ಯಾರ್ಥಿಗಳಿಂದ ಕರೆಯಲು ಹೇಗೆ ಸಾಧ್ಯ? ಯಾವ ವಿದ್ಯಾರ್ಥಿ ತನ್ನ ಓದಿನ ಜೊತೆಗೆ ಶಾಲೆಯಲ್ಲಾಗಲಿ, ಮನೆಯಲ್ಲಿ ಎಲ್ಲೇ ಆಗಲಿ ನಡೆಯುವ ಅನ್ಯಾಯವನ್ನು ಪ್ರಶ್ನಿಸ ಬೇಕು ಮತ್ತು ದೇಶಕ್ಕಾಗಿ ಸಮಾಜದ ಬದಲಾವಣೆಗಾಗಿ ಬದುಕಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು, ಶೋಷಿತರ ಪರವಾಗಿ ಧ್ವನಿ ಎತ್ತಬೇಕು. ಅಂಥವರನ್ನು ಮಾತ್ರ ನಾವು ನಿಜವಾದ ಒಳ್ಳೆಯ ಆದರ್ಶ ವಿದ್ಯಾರ್ಥಿಗಳೆಂದು ಹೇಳಬಹುದು ಎಂದು ಹೇಳುತ್ತಾರೆ. ಹಾಗೆಯೇ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಈ ದೇಶದಲ್ಲಿನ ರೈತ ಕಾರ್ಮಿಕರ ನೆಮ್ಮದಿಯ ಜೀವನ ನಡೆಸಬೇಕು ಅವರ ಮಕ್ಕಳು ಉನ್ನತ ಮತ್ತು ಮೌಲ್ಯಯುತ ಶಿಕ್ಷಣವನ್ನು ಪಡೆಯಬೇಕೆಂಬುದು ಅವರ ಕನಸಾಗಿತ್ತು. ಆದರೆ ಅವರ ಕನಸು ಇಂದು ನನಸಾಗದೆ ಉಳಿದಿದೆ. ಸರ್ಕಾರಗಳು ಕೆಪಿಎಸ್ ಮ್ಯಾಗ್ನೆಟ್ ನಂತಹ ಹಲವು ಶಿಕ್ಷಣ ವಿರೋಧಿ ಯೋಜನೆಗಳ ಮೂಲಕ ಸರ್ಕಾರಿ ಶಾಲೆಗಳನ್ನೇ ಮುಚ್ಚುವ ಹಂತಕ್ಕೆ ಹೊರಟಿವೆ.
ಈಗ ಅವರ ಕನಸನ್ನು ನನಸಾಗಿಸುವ ಜವಾಬ್ದಾರಿ ವಿದ್ಯಾರ್ಥಿಗಳೆಲ್ಲರ ಮೇಲಿದೆ. ಅವರ ಆದರ್ಶಗಳನ್ನು ಬೆಳೆಸಿಕೊಂಡು ನೀವೆಲ್ಲರೂ ಕೂಡ ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಸಾರ್ವಜನಿಕ ಶಿಕ್ಷಣವನ್ನು ಉಳಿಸುವ ಸಂಕಲ್ಪವನ್ನು ತೊಡಬೇಕೆಂದು ಕರೆಕೊಟ್ಟರು.ಎಐಡಿಎಸ್‌ಓ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಎಐಡಿಎಸ್‌ಓ ರಾಜ್ಯ ಸಮಿತಿ ಸದಸ್ಯರಾದ ಸಿಂಧು ಕೌದಿ, ಉಳೇನೂರಿನ ಮುಖಂಡರಾದ ಬಸವರಾಜಪ್ಪ, ಅಂಜಿನಪ್ಪ ಮತ್ತು ದೇವರಾಜ್ ಕಟ್ಟಿಮನಿ ಉಪಸ್ಥಿತರಿದ್ದರು.ನಂತರದಲ್ಲಿ ನೂತನವಾದ ಎಐಡಿಎಸ್‌ಓ ಗ್ರಾಮ ಘಟಕವನ್ನು ರಚಿಸಲಾಯಿತು. ಘಟಕದ ಅಧ್ಯಕ್ಷರಾಗಿ ವಿಜಯ ಲಕ್ಷ್ಮಿ,ಕಾರ್ಯದರ್ಶಿಯಾಗಿ ಭವಾನಿ, ಉಪಾಧ್ಯಕ್ಷರುಗಳಾಗಿ ಸಾಕ್ಷಿ, ಸರಸ್ವತಿ, ದೇವರಾಜ್, ಮೌನೇಶ್,ಅನಿತಾ,ಸಂಗೀತ. ಜಂಟಿ ಕಾರ್ಯದರ್ಶಿಗಳಾಗಿಅಂಕಿತ,ತೇಜಸ್ವಿನಿ,ಗಾಯತ್ರಿ,ಕಲ್ಪನಾ ಙ, ಕಲ್ಪನಾ ಖ, ಪವಿತ್ರ, ಅನುಸೂಯ,ನಂದಿನಿ.ಸಮಿತಿಯ ಸದಸ್ಯರಾಗಿ ಸಂಜನಾ,ಸ್ಪಂದನ,ಭೂಮಿಕ, ರಾಜ,ವಿಜಯ್, ಸೃಷ್ಟಿ ಉಮಾದೇವಿ ಸೇರಿದಂತೆ 35 ವಿದ್ಯಾರ್ಥಿ ಸದಸ್ಯರನ್ನು ಒಳಗೊಂಡ ನೂತನ ಗ್ರಾಮ ಘಟಕವು ರಚನೆಯಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 