ಭಾರತದ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯನ್ನು ಬಲಿಷ್ಠಗೊಳಿಸಿ : ಶಿವಾನಂದ ಶಿವಾಚಾರ್ಯರು

ಭಾರತದ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯನ್ನು ಬಲಿಷ್ಠಗೊಳಿಸಿ : ಶಿವಾನಂದ ಶಿವಾಚಾರ್ಯರು Strengthen India's culture, history and heritage: Shivanand Shivacharya

ರಾಣೇಬೆನ್ನೂರು 09:  ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶವು ತನ್ನದೆ ಆದ ಭವ್ಯ ಇತಿಹಾಶ ಹೊಂದಿದೆ. ಇಂತಹ ಭವ್ಯ ಇತಿಹಾಸ ಸಂಸ್ಕೃತಿ ಮತ್ತು ಪರಂಪರೆ ಹೊಂದಿರುವ ಭಾರತದಲ್ಲಿ ಹುಟ್ಟಿರುವುದೇ ನಮ್ಮೆಲ್ಲರ ಪುಣ್ಯ ವಿಶೇಷ ಭಾಗ್ಯವಾಗಿದೆ ಎಂದು ದಿಂಡದಹಳ್ಳಿ ಪಶುಪತಿ ಶಿವಾನಂದ ಶಿವಾಚಾರ್ಯರು ನುಡಿದರು.  ಅವರು ರವಿವಾರ ರಾತ್ರಿ ಎಪಿಎಂಸಿ ಆವರಣದಲ್ಲಿ ಅದ್ದೂರಿಯಾಗಿ ಜರುಗಿದ ಹಿಂದೂ ಸಮಾಜೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.  

 ಭಾರತ ಮತ್ತು ಭಾರತೀಯರು ವಿಶ್ವಕ್ಕೆ ಮಾದರಿಯಾಗಿದ್ದಾರೆ ಭಾರತದ ಸಂಸ್ಕೃತಿ ಇತಿಹಾಸ ಮತ್ತು ಪರಂಪರೆ ಇಂದು ವಿಶ್ವದ ಎಲ್ಲಾ ರಾಷ್ಟ್ರಗಳು ಅನುಸರಿಸುತ್ತಿವುದು ಭಾರತದ ಹೆಮ್ಮೆ ಆದ್ದರಿಂದ ನಾವೆಲ್ಲರೂ ಪಾಚ್ಚಿ  ಸಂಸ್ಕೃತಿಯ  ಅಂಧಾನುಕರಣೆಗೆ ಅನುಸರಿಸದೇ ನಮ್ಮದು, ನಮ್ಮತನ ನಮ್ಮ ಸಂಸ್ಕೃತಿ ಮತ್ತಷ್ಟು ಬಲಿಷ್ಠಗೊಳಿಸಲು ಮುಂದಾಗಬೇಕಾದ ಇಂದಿನ ಅಗತ್ಯವಿದೆ  ಎಂದರು. ಹಿರಿಯ ಸಮಾಜ ಸೇವಕ ವಕ್ತಾರರಾದ ಸು ರಾಮಣ್ಣ ಅವರು ಸಮಾಜದಲ್ಲಿ ಬದುಕಿ ಬಾಳುವ ಮನುಷ್ಯ, ಎಲ್ಲ ರೀತಿಯ ಸಮಾನತೆಯಿಂದ ಜೀವನ ಸಾಗಿಸಲು ಮುಂದಾಗಬೇಕು ಎಂದ ಅವರು,  ಹಿಂದೂ ಸಮಾವೇಶ ಯಾವ ಸಮುದಾಯದ ವಿರೋಧಿಯಲ್ಲ. ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಾ ಬಂದಿರುವ ಭಾರತದ ಸಂಸ್ಕೃತಿ, ಪರಂಪರೆ ಮತ್ತಷ್ಟು ಬಲಿಷ್ಠ  ಗೋಳಿಸುವ ಸದುದ್ದೇಶ ಇದಾಗಿದೆ ಎಂದರು. 

ಎಲ್ಲಾ ಧರ್ಮಿಯರು ಪ್ರೀತಿಸುವ ಏಕೈಕ ಧರ್ಮ ಏಕೈಕ ಹಿಂದು ಧರ್ಮವಾಗಿದೆ ಎಂದು ವಿಶ್ಲೇಷಿಸಿ ಮಾತನಾಡಿದ ಸು ರಾಮಣ್ಣ ಅವರು, ಜಾತಿ ಮತ ಭೇದ ಭಾವ ಮತ್ತು ರಾಜಕೀಯ ಕಚ್ಚಾಟ ಭಾರತದ ಬಲಿಷ್ಠ ತೆಗೆ ಕೊಡಲಿ ಏಟು ಬಿದ್ದಂತೆ ಎನ್ನುವುದನ್ನು ಅರ್ಥ ಮಾಡಿಕೊಂಡರೆ ಬಲಿಷ್ಠ ಭಾರತವಾಗಲಿದೆ ಎಂದರು.  ದೊಡ್ಡಪೇಟೆ ಆವರಗೊಳ್ಳ ಹಿರೇಮಠದ  ಓಂಕಾರ ಶಿವಾಚಾರ್ಯರು ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೊಡ್ಡಪೇಟೆ ಗುರುಬಸವ ಮಹಾಸ್ವಾಮಿಗಳವರು ತಮ್ಮ ಸಂದೇಶಾಮೃತ ನೀಡಿದರು.  ಮಾಜಿ ಶಾಸಕ ಅರುಣ ಕುಮಾರ ಪೂಜಾರ ಅವರು ಸ್ವಾಗತಿಸಿ ಪ್ರಾಥಮಿಕವಾಗಿ ಮಾತನಾಡಿದರು.  ಸಂಚಾಲನಾ ಸಮಿತಿ ಅಧ್ಯಕ್ಷ ಜಿ.ಜಿ. ಹೊಟ್ಟಿ ಗೌಡ್ರ ಅವರು ಅಧ್ಯಕ್ಷತೆ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಮುಖಂಡರಾದ ಶುಭಾಶ ಸಿರಗೇರಿ, ಮಂಜುನಾಥ ಕಾಟಿ, ಕೆ. ಶಿವಲಿಂಗಪ್ಪ ಸಂಜಯ ನಾಯಕ, ಎ. ಬಿ. ಪಾಟೀಲ, ಪವನ್ ಮಲ್ಲಾಡದ,ತ್ತಾತ್ರೇಯ ನಾಡಗೆರೆ, ಅಮೋಘ ಬಾದಾಮಿ, ಕೆ. ಸಿ. ಎಮ್ಮಿ, ಶ್ರೀಧರ್ ಪಾಸ್ತೆ, ಪವನ್ ಜನ್ನು, ಭಾರತಿ ಜಂಬಗಿ, ಅರುಣಾ ಕಬಾಡಿ,  ರೂಪಾ ಬಾಕಳೆ, ಮೈತ್ರಾ ಹದಡಿ, ಮಮತಾ ಜಾಧವ, ಸುಮಾ ಉಪ್ಪಿನ, ವಿಜಯಲಕ್ಷ್ಮಿ ಮುಂಡಾಸದ, ವಸಂತ ಹುಲ್ಲತ್ತಿ, ರಾಜೇಶ್ವರಿ ಪಾಟೀಲ, ಸುಮಾ ಹಿರೇಮಠ, ವಿಜಯಲಕ್ಷ್ಮಿ ಬೆಟಿಗೇರಿ, ವೀರಣ್ಣ ಅರ್ಕಾಚಾರಿ, ಸಂಜಯ್ ಹಿರೇಮಠ, ಸಂತೋಷ್ ಮಾಳೋದೆ, ಶ್ರೀಪಾದ ಕುಲಕರ್ಣಿ, ಜಗದೀಶ್ ಪ್ರತಾಪ,ಸೇರಿದಂತೆ ಮತ್ತಿತರಗಣ್ಯರು ಪಾಲ್ಗೊಂಡಿದ್ದರು. ಸಮಾರಂಭಕ್ಕೆ ಮುನ್ನ ಸಾವಿರಾರು ಯುವಕರಿಂದ ಬೈಕ್ ರ್ಯಾಲಿ ನಡೆದು ಸಾರ್ವಜನಿಕರ ಗಮನ ಸೆಳೆಯಿತು.