ಕಲಾವಿದರ ತವರೂರಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ
State-level night-light kabaddi tournament in the artist's hometown
ರಾಣೇಬೆನ್ನೂರು 17: ಮಾನಸಿಕ ದೈಹಿಕ ಬೌದ್ಧಿಕ ಬೆಳವಣಿಗೆಗೆ ದೇಶಿಯ ಕ್ರೀಡೆಗಳು ತುಂಬಾ ಸಹಕಾರಿಯಾಗಿವೆ ಎಂದು ನ್ಯಾಯವಾದಿ ಮಾಲತೇಶ ಮಣಕೂರು ಹೇಳಿದರು. ಅವರು ತಾಲೂಕಿನ ಬೆಳಗೇರಿ ಗ್ರಾಮದಲ್ಲಿ, ಡಾ: ಪುನೀತ್ ರಾಜಕುಮಾರ ಯೂಥ್ ಕ್ಲಬ್ ಜೀವ ಫ್ರೆಂಡ್ಸ್ ಗ್ರೂಪ್, ಪುನೀತ್ ರಾಜಕುಮಾರ್ ಸ್ಮರಣಾರ್ಥವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತಿಹಾಸದ ಗ್ರಾಮೀಣ ಮತ್ತು ನೈಜ ಕಸರತ್ತಿನ ಕಲೆಗಳು ಆಧುನಿಕ ವ್ಯವಸ್ಥೆಯಲ್ಲಿ ಮರೆಯಾಗುತ್ತಿರುವುದು ಅತ್ಯಂತ ವಿಷಾದಕರ ಸಂಗತಿ. ಇಂತಹ ಸಂದರ್ಭದಲ್ಲಿ ಗ್ರಾಮಾಂತರದ ಯುವಕರು ಕ್ರಿಯಾಶೀಲ ಚಟುವಟಿಕೆ ಮೂಲಕ ಸ್ಪರ್ಧೆ ಆಯೋಜಿಸಿರುವುದು ಯುವ ಜನಾಂಗಕ್ಕೆ ಮಾದರಿಯಾಗಿದೆ ಎಂದರು. ರಾಜ್ಯಮಟ್ಟದ ಕ್ರೀಡಾಕೂಟ ಉದ್ಘಾಟಿಸಿದ ಹಿರಿಯ ನ್ಯಾಯವಾದಿ, ಕಲಾವಿದ ನಾಗರಾಜ ಕುಡುಪಲಿ ಅವರು, ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರ ಯುವಕರು ಅಳವಡಿಸಿಕೊಂಡಾಗ ಮಾತ್ರ ನಮ್ಮ ಪರಂಪರೆಯ ಕುಸ್ತಿ, ಕಬಡ್ಡಿ, ಲಗೂರಿ, ಗೋಲಿ ಗುಂಡ,ಹಗ್ಗ ಜಗ್ಗಾಟ, ಭಾರ ಎತ್ತುವ ಕಸರತ್ತು ಸೇರಿದಂತೆ ಮತ್ತಿತರ ಗ್ರಾಮೀಣ ಕಲೆಗಳು ಉಳಿದು ಬೆಳೆಯಲು ಸಾಧ್ಯವಾಗುವುದು ಎಂದರು.
ಕರೂರು ಗ್ರಾಮವು ಇತಿಹಾಸದಿಂದಲೂ ಜನಪದ ಕಲಾವಿದರ ತವರೂರೂ ಎಂದು ಗುರುತಿಸಿಕೊಂಡು ತನ್ನ ಇತಿಹಾಸ ಉಳಿಸಿಕೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಯುವ ಜನಾಂಗ ತಮ್ಮ ಬದುಕಿನಲ್ಲಿ ಕ್ರಿಯಾಶೀಲತೆ ಅಳವಡಿಸಿಕೊಂಡು ಸಾಗಿದಾಗ ಮಾತ್ರ ವ್ಯಕ್ತಿತ್ವ ನಿರೂಪಿಸಿಕೊಳ್ಳಲು ಸಾಧ್ಯವಾಗುವುದು ಎಂದರು. ವೇದಿಕೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಚೋಳಪ್ಪ ಕಚ್ಚರಬಿ, ಅವರು ಡಾ: ಪುನೀತ್ ರಾಜ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಚಾಲನೆ ನೀಡಿದರು. ವೇದಿಕೆಯಲ್ಲಿ ಗ್ರಾಮದ ಗಣ್ಯರಾದ ಮಂಜಪ್ಪ ಅಗಡಿ, ಕಲ್ಲೇಶ್ ಬ್ಯಾಡಗಿ, ಚಂದ್ರಶೇಖರ ಮುಡದೇವಣ್ಣನವರ, ಶಾಂತಪ್ಪ ಕೊಳಜಿ, ಹನುಮಂತಪ್ಪ ಕೊಳಜಿ, ನಾಗರಾಜ್ ಬಕ್ಕಜ್ಜಿ, ಗುರುರಾಜ ಡೊಳ್ಳೇರ, ಅಶೋಕ ಪವಾರ, ಮಹೇಶ ಪೋರಮ್ಮನವರ, ಕಿರಣ್ ಕಚ್ಚರಬಿ, ಕಿರಣ್ ಬಾರ್ಕಿ, ಹೇಮಂತ್ ಬಾರ್ಕಿ, ಸುಲ್ತಾನ್ ದೊಡ್ಮನಿ, ರವಿ ಹರನಗಿರಿ, ಮಂಜುನಾಥ್ ಅಂತರವಳ್ಳಿ ವಿನಾಯಕ ಅಂತರವಳ್ಳಿ, ಶರತ್ ಸುರ್ವೆ, ರಾಜು ಕಚರಬಿ, ಇಮ್ರಾನ್ ಮತ್ತಿತರರು ಉಪಸ್ಥಿತರಿದ್ದರು. ಸ್ಪರ್ಧಾ ವಿಜೇತರು :- ವೈಸಳ ನೆಲವಾಗಲ ತಂಡ ( ಪ್ರಥಮ) ಸೃಷ್ಟಿ ಕಬ್ಬಡ್ಡಿ ತಂಡ ( ದ್ವಿತೀಯ ) ಡಿ. ವೈ.ಇ.ಎಸ್ ತಂಡ (ತೃತಿಯ ) ಜೀವ ಫ್ರೆಂಡ್ಸ್ ಗ್ರೂಪ್ ಉತ್ತಮ ತಂಡ. ವೈಯಕ್ತಿಕ ಬಹುಮಾನ, ಉತ್ತಮ ರೈಡರ್ ನೆಲವಾಗಲ ತಂಡದ ಮನೋಜ್, ಉತ್ತಮ ಆಲ್ ರೌಂಡರ್ ದಾವಣಗೆರೆ ದಿವೈಇಎಸ್ ತಂಡದ ಹನುಮಂತ. ಉತ್ತಮ ಡಿಫೆಂಡರ್ : ಕಿರಣ ನರಸನಾಯಕರ ಅವರುಗಳು ಬಹುಮಾನ ಗಳಿಸಿದರು. ಯಲ್ಲಪ್ಪ ಹಲವಾಗಲ, ಪರಶುರಾಮ್ ಸುರ್ವೆ, ಉಮೇಶ್ ಪೋರಮ್ಮನವರ, ಅವರು ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ಜಮಾಲ ಸಾಬ್ ತಾವರಗೊಂದಿ ನಿರೂಪಿಸಿ, ಸ್ವಾಗತಿಸಿದರು. ಸಂತೋಷ್ ಮುಡದೇವಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರ ಸಣ್ಣಬೊಮ್ಮಾಜಿ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 