14ರಂದು ರಾಜ್ಯಮಟ್ಟದ ಲಿಂಗಾಯತ ವಧು-ವರ, ಪಾಲಕರ ಸಮ್ಮೇಳನ

14ರಂದು ರಾಜ್ಯಮಟ್ಟದ ಲಿಂಗಾಯತ ವಧು-ವರ, ಪಾಲಕರ ಸಮ್ಮೇಳನ State-level Lingayat brides, grooms, and parents' conference on the 14th

ಬೆಳಗಾವಿ, 10 ; ಇದೆ ಡಿಸೆಂಬರ್  ರವಿವಾರ ದಿನಾಂಕ 14 ರಂದು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಎಸ್‌.ಜಿ. ಬಾಳೆಕುಂದ್ರಿ ಇಂಜಿನಿಯರಿಂಗ್ ಕಾಲೇಜ್ ಸಭಾಗ್ರಹದಲ್ಲಿ ರಾಜ್ಯಮಟ್ಟದ ವಧು-ವರರ ಮತ್ತು ಪಾಲಕರ ಸಮ್ಮೇಳನ ನಡೆಯಲಿದೆ ಎಂದು ಶ್ರೀ. ಮಠದ ಪ್ರಕಟಣೆ ತಿಳಿಸಿದೆ. ಮಹಾತ್ಮಾ ಬಸವೇಶ್ವರ ವಧು-ವರ ಸೂಚಕ ಕೇಂದ್ರ ಕುಪವಾಡ ಸಾಂಗ್ಲಿ, ಬೆಳಗಾವಿ ನಾಗನೂರು ರುದ್ರಾಕ್ಷಿ ಮಠ ಮತ್ತು ಜಾಗತೀಕ ಲಿಂಗಾಯತ ಮಹಾಸಭೆ ಬೆಳಗಾವಿ ಜಿಲ್ಲಾ ಘಟಕ ಸಂಯುಕ್ತವಾಗಿ ಹಮ್ಮಿಕೊಂಡಿರುವ ಈ ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಜಿಯವರು ವಹಿಸಲಿದ್ದು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಸಮ್ಮುಖದಲ್ಲಿ ಉಪಸ್ಥಿತರಿರಲಿದ್ದಾರೆ.  

ಅಧ್ಯಕ್ಷತೆಯನ್ನು ಜಾಗತೀಕ ಲಿಂಗಾಯತ ಮಹಾಸಭೆಯ ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ವಹಿಸಲಿದ್ದು, ಮಹಾಸಭೆಯ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷ ರಾಜಶೇಖರ್ ತಂಬಾಕೆ ಮತ್ತು ಮಹಾರಾಷ್ಟ್ರ ರಾಜ್ಯದ ಮಹಾಸಭೆಯ ಕಾರ್ಯಾಧ್ಯಕ್ಷ ವಿಜಯ್ ಕುಮಾರ್ ಹತೂರೆ ಆಗಮಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಾಗತಿಕ ಲಿಂಗಾಯಿತ ಮಹಾಸಭೆಯ ಜಿಲ್ಲಾ ಉಪಾಧ್ಯಕ್ಷ ಮುರುಗೇಶ ಶಿವಪೂಜಿ, ಪ್ರಧಾನ ಕಾರ್ಯದರ್ಶಿ ಸಿ.ಎಂ. ಬೂದಿಹಾಳ, ಕೋಶಾಧಿಕಾರಿ ಮುರಿಗೆಪ್ಪ ಬಾಳಿ, ಬೆಳಗಾವಿ ಮಹಾನಗರದ ಅಧ್ಯಕ್ಷ ಎಸ್‌.ಜಿ. ಸಿದನಾಳ, ಲಿಂಗಾಯಿತ ಮಹಾಸಭೆಯ ಸೊಲ್ಲಾಪುರ ಜಿಲ್ಲಾಧ್ಯಕ್ಷ ಶಿವಾನಂದ್ ಗೋಗಾವ ಸರ್, ಎಸ್ ಜಿ ಬಾಳೆಕುಂದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಆರ್‌.ಪಟಗುಂದಿ, ಸಾಂಗ್ಲಿ ಜಿಲ್ಲಾ ಉಪಾಧ್ಯಕ್ಷರುಗಳಾದ ರಾಜಾರಾಮ್ ಪಾಟೀಲ್ ಮತ್ತು ತುಕಾರಾಮ ಮಾಳಿ ಆಗಮಿಸಲಿದ್ದಾರೆ.  

ಈ ಸಮ್ಮೇಳನದಲ್ಲಿ ಭಾಗವಹಿಸುವ ವಧು- ವರರಿಗೆ ರೂ. 600/- ಗಳ ನೋಂದಣಿ ಶುಲ್ಕ ಇರುತ್ತದೆ. ಆಸಕ್ತಿ ಇರುವವರು  ಅಪ್ಪಾ ಸಾಹೇಬ ಶೆಗಾವೆ 9975185511 ಮತ್ತು ಪ್ರಿಯಾಂಕ ಶೆಗಾವೆ 8482802734 ಮೊಬೈಲ್ ನಂಬರ್ ಗಳ ಮೂಲಕ ಸಂಪರ್ಕಿಸುವಂತೆ ಈ ಮೂಲಕ ಕೋರಲಾಗಿದೆ.ಈ ಸಮ್ಮೇಳನದಲ್ಲಿ ಲಿಂಗಾಯತ ಸಮಾಜದ ಉಪಪಂಗಡಗಳಾದ ವಾಣಿ, ಪಂಚಮ್, ಬಣಜಿಗ, ಶೀಲವಂತ, ಮಾಳಿ, ತೇಲಿ, ಕೋಷ್ಠಿ, ಕುಂಬಾರ, ದಿಕ್ಸಾನ್ವತ್, ಗವಳಿ, ಗುರವ, ಪರೀಟ್, ಲಿಂಗಾಯತ ಮಡಿವಾಳ ಮತ್ತು ಇತರ ಎಲ್ಲ ಒಳಪಂಗಡಗಳ ವಧು-ವರರು ಈ ಸಮ್ಮೇಳನದಲ್ಲಿ ಭಾಗವಹಿಸಬಹುದೆಂದು ತಿಳಿಸಲಾಗಿದೆ.