ರಾಜ್ಯ ಖೋಖೋ ಪುರುಷರ ಹಾಗೂ ಮಹಿಳಾ ತಂಡಗಳು ಸೆಮಿಫೈನಲ್ ಹಂತಕ್ಕೆ
State Khokho men's and women's teams advance to semifinals
ಬ್ಯಾಡಗಿ 02: ತಾಲೂಕಾ ಕ್ರೀಡಾಂಗಣದಲ್ಲಿ ಕಳೆದ ತಿಂಗಳು ಸ್ಥಳೀಯ ಸಿಟಿ ಖೋಖೋ ತಂಡದ ಆಶ್ರಯದಲ್ಲಿ 10 ದಿನಗಳವರೆಗೆತರಬೇತಿ ಪಡೆದ ರಾಜ್ಯ ಖೋಖೋ ತಂಡದ ಪುರುಷ ಹಾಗೂ ಮಹಿಳಾ ತಂಡಗಳು ಸೋಮವಾರ ತುಮಕೂರಿನಲ್ಲಿ ನಡೆದ ರಾಷ್ಟ್ರೀಯ ಖೋಖೋ ಪಂದ್ಯಾವಳಿಗಳಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಹಂತ ತಲುಪಿವೆ ಎಂದು ಪಟ್ಟಣದ ರಾಷ್ಟ್ರೀಯ ಖೋಖೋ ತೀಪುಗಾರ ಜೀತೇಂದ್ರ ಸುಣಗಾರ ತಿಳಿಸಿದ್ದಾರೆ.ತುಮಕೂರು ವಿಶ್ವವಿದ್ಯಾಲಯದ ಮಣ್ಣಿನ ಅಂಕಣದಲ್ಲಿ ಖೋ ಖೋ ಇಂಡಿಯಾ ವತಿಯಿಂದ ಆಯೋಜಿಸಿರುವ ಪುರುಷರ ಹಾಗೂ ಮಹಿಳೆಯರ ರಾಷ್ಟ್ರೀಯ ಖೋ ಖೋ ಚಾಂಪಿಯನ್ಷಿಪ್ ಪಂದ್ಯಾವಳಿಯ ಲೀಗ್ ಗುಂಪಿನ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಪುರುಷರ ಹಾಗೂ ಮಹಿಳೆಯರ ತಂಡಗಳು ಸೆಮಿಫೈನಲ್ ಹಂತ ತಲುಪಿದ್ದಕ್ಕೆ ತಂಡದ ಕೋಚ್ ಸಂಜಯಕುಮಾರ ಸಂತೋಷ ಹಂಚಿಕೊಂಡಿದ್ದಾರೆ.ಕರ್ನಾಟಕ ಪುರುಷರ ಖೋಖೋ ಪರ ಮೌನೇಶ್, ಆಕಾಶ್ ಉತ್ತಮ ಆಟದ ಪ್ರದರ್ಶನ ನೀಡಿದರು. ಮಲ್ಲಿಕಾರ್ಜುನ್ 3 ಓಟ್ಗಳನ್ನು ಪಡೆದು ಸೆಮಿಫೈನಲ್ ಹಂತ ತಲುಪಲು ಕಾರಣರಾಗಿದ್ದಾರೆ.ಲೀಗ್ ಪಂದ್ಯಗಳು ನಡೆದಿದ್ದು 8 ಗುಂಪುಗಳಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ನಂತರ ನಾಕೌಟ್ ಮಾದರಿ ಪ್ರವೇಶ ಪಡೆಯಲಿವೆ ಎಂದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 