ನ್ಯೂಯಾರ್ಕ , ಏ 22 ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರದಂದು ನಡೆದ ದಾಳಿಯನ್ನು ಮಾನವೀಯತೆಯ ಮೇಲಿನ ಬರ್ಬರ ದಾಳಿ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಖಂಡಿಸಿದ್ದಾರೆ.
'ಪ್ರೀತಿ, ವಿಮೋಚನೆಯ ದಿನದಂದು ದುಷ್ಕೃತ್ಯ ನಡೆದಿದ್ದು ಶ್ರೀಲಂಕಾ ಜನತೆಯೊಂದಿಗೆ ನಿಲ್ಲುವುದುದಾಗಿ ಘಟನೆಗೆ ಅವರು ಶೋಕ ವ್ಯಕ್ತಪಡಿಸಿದ್ದಾರೆ. 32 ವಿದೇಶಿಯರು ಸೇರಿದಂತೆ ಕನಿಷ್ಠ 228 ಜನರು ಈಸ್ಟರ್ ಭಾನುವಾರದಂದು ನಡೆದ ಸರಣಿ ಬಾಂಬ್ ದಾಳಿಗೆ ಬಲಿಯಾಗಿದ್ದು 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆ ನಂತರ ರಾಷ್ಟ್ರಾದ್ಯಂತ 12 ಗಂಟೆಗಳ ಕರ್ಫ್ಯೂ ವಿಧಿಸಲಾಗಿತ್ತು. ಫೇಸ್ಬುಕ್, ವಾಟ್ಸ್ ಅಪ್ ಮೊದಲಾದ ಸಾಮಾಜಿಕ ಜಾಲತಾಣಗಳ ಸೇವೆ ಸ್ಥಗಿತಗೊಳಿಸಲಾಗಿತ್ತು.