ಕ್ರೀಡೆ ಮಕ್ಕಳ ದೈಹಿಕ ಸಾಮರ್ಥ್ಯದ ಬೆಳವಣಿಗೆಗೆ ಸಹಕಾರಿ-ಶಿವಾಜಿ ಕಾಂಬಳೆ
Sports contribute to the development of children's physical fitness - Shivaji Kambale
ಕ್ರೀಡೆ ಮಕ್ಕಳ ದೈಹಿಕ ಸಾಮರ್ಥ್ಯದ ಬೆಳವಣಿಗೆಗೆ ಸಹಕಾರಿ-ಶಿವಾಜಿ ಕಾಂಬಳೆ
ಬೀಳಗಿ:ಅಕ್ಷರ ಜ್ಞಾನ ಮಕ್ಕಳ ಭೌತಿಕ ಸಾಮರ್ಥ್ಯದ ಬೆಳವಣಿಗೆಗೆ ಸಹಕಾರಿಯಾದರೆ,ಕ್ರೀಡೆ ದೈಹಿಕ ಸಾಮರ್ಥ್ಯದ ಬೆಳವಣಿಗೆಗೆ ಅತ್ಯಂತ ಪರಿಣಾಮಕಾರಿ ಆಗಿರುವಂತದ್ದು ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಶಿವಾಜಿ ಕಾಂಬಳೆ ಹೇಳಿದರು, ತಾಲೂಕಿನ ಸ,ಹಿ,ಪ್ರಾ,ಶಾಲೆ ಕೊರ್ತಿ ಪು ಕೇ,ಯಲ್ಲಿ ನಡೆದ 2025-26 ನೇ ಸಾಲಿನ ಮನ್ನಿಕೇರಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು,ಕ್ರೀಡೆಗಳ ಅತ್ಯಂತ ಯಶಸ್ವಿಯಾಗಬೇಕಾದರೆ ನಿರ್ಣಾಯಕರ ಪಾತ್ರ ಮಹತ್ವದ್ದಾಗಿದ್ದು,ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಸ್ಪರ್ಧಾ ಮನೋಭಾವನೆಯಿಂದ ಭಾಗವಹಿಸಬೇಕು,ಮಕ್ಕಳ ಸರ್ವೋತ್ತಮ ಬೆಳವಣಿಗೆಗೆ ಕ್ರೀಡೆಗಳ ಮಹತ್ವ ಇದೆ, ಶಿಕ್ಷಕರು ಮಕ್ಕಳಿಗೆ ಸೂಕ್ತ ಮಾರ್ಗವನ್ನು ನೀಡಿ ಪ್ರೋತ್ಸಾಹಿಸಬೇಕು,ಈ ಕ್ಲಸ್ಟರ್ ನಿಂದ್ ಆಯ್ಕೆ ಆಗುವ ಮಕ್ಕಳು ತಾಲೂಕು,ಜಿಲ್ಲೆ ರಾಜ್ಯದ ಕೀರ್ತಿಯನ್ನು ತರುವಂಥವರು ಆಗಬೇಕು ಎಂದರು, ಕ್ರೀಡಾ ಜ್ಯೋತಿಯನ್ನು ಪಿಕೆಪಿಎಸ್ ನ ಅಧ್ಯಕ್ಷ ಎಚ್‌ಎಸ್ ಪಾಟೀಲ್ ಅವರು ಬರಮಾಡಿಕೊಂಡರೆ,ಕ್ರೀಡಾ ಧ್ವಜಾರೋಹಣ ಗ್ರಾಂ.ಪಂ ಅಧ್ಯಕ್ಷ ಪ್ರೇಮಾ ಮಾದರ ನೇರವೇರಿದರು,ಕಾರ್ಯಕ್ರಮ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಬಸಪ್ಪ ಜರಾಳಿಯವರು ವಹಿಸಿದ್ದರು,ಕೊರ್ತಿ ಶಾಲೆ ಮಕ್ಕಳಿಗೆ ಸಮವಸ್ತ್ರ ಕೊಡುಗೆಯನ್ನು ಎಚ್ ವೈ ಜರಾಳಿ (ನಿರ್ದೇಶಕರು ಬಾಲ ವಿಕಾಸ ಅಕಾಡೆಮಿ ಕರ್ನಾಟಕ ಸರ್ಕಾರ ಧಾರವಾಡ)ನೀಡಿದರು.ಈ ಸಂದರ್ಭದಲ್ಲಿ ಮನ್ನಿಕೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಎ ಬಿ ಪಾಟೀಲ,ಸ,ಹಿ,ಪ್ರಾ,ಶಾಲೆ ಮುಖ್ಯೋಪಾಧ್ಯಾಯ ಎ ಆರ್ ಭಜಂತ್ರಿ,ದೈಹಿಕ ಪರೀವೀಕ್ಷಕ ಎಸ್ ಎ ಎತ್ತಿಮನಿ,ಎಸ್ ಡಿ ಎಂ ಸಿ ಉಪಾಧ್ಯಕ್ಷೇ ವಿಜಯಲಕ್ಷ್ಮಿ ದೇಸಾಯಿ,ಸದಸ್ಯರಾದ ಕಲ್ಲವ್ವ ದಳವಾಯಿ, ಮಾಳಪ್ಪ ಅಂಬಿಗೇರ,ಹಣಮಂತ ಮಳಗಾವಿ,ಪರಮಾನಂದ ಕಡಿವಾಲ,ರೇವಣಪ್ಪ ಅಂಬಿಗೇರ,ಪಿ ಕೆ ಪಿ ಎಸ್ ನ ಸಂಸ್ಥಾಪಕ ಅಧ್ಯಕ್ಷರು ಹಾಗೂ ನಿರ್ದೇಶಕರಾದ ಸಿದ್ದು ಗಿರಗಾಂವಿ,ಪಿಕೆ ಪಿ ಎಸ್ ನಿರ್ದೇಶಕ ಶಿವನಗೌಡ ಪಾಟೀಲ,ಗ್ರಾಮದಲ್ಲಿ ಹಿರಿಯರಾದ ಪ್ರಕಾಶ್ ಚೂರಿ,ಗೌಡಪ್ಪಗೌಡ ಪಾಟೀಲ ರಾಚಪ್ಪ ಪತ್ತಾರ,ಗೋವಿಂದಪ್ಪ ಜರಾಳಿ,ಶಂಕ್ರ್ಪ ಪತ್ತಾರ,ದುರಗಪ್ಪ ವಾಲಿಕಾರ,ಗ್ರಾಂ. ಪಂ.ಪಿಡಿಓ ಲಕ್ಷ್ಮಣ ಪಾಟೀಲ,ಶಿಕ್ಷಕ ಎಸ್ ಎಸ್ ಬಡಿಗೇರ,ಎಸ್ ಆರ್ ಹೂಗಾರ್,ದೈಹಿಕ ಶಿಕ್ಷಕ ಎಸ್ ಎಚ್ ಲಮಾಣಿ,ಬಸವರಾಜ್ ನಾಯಕ ಶಿಕ್ಷಕಿ,ಲಕ್ಷ್ಮಿ ಕೊಪ್ಪ,ಎಸ್ ಪಿ ಕುಂಬಾರ,ಸೇರಿ ಅನೇಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 