ದಕ್ಷಿಣ ಕ್ಲಸ್ಟರ್ ಮಟ್ಟದ ಪ್ರಸಕ್ತ ಸಾಲಿನ ಎಫ್‌ಎಲ್‌ಏನ್ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮ

ದಕ್ಷಿಣ ಕ್ಲಸ್ಟರ್ ಮಟ್ಟದ ಪ್ರಸಕ್ತ ಸಾಲಿನ ಎಫ್‌ಎಲ್‌ಏನ್ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮ South Cluster Level FLN Children's Learning Festival Program for the Current Year

                    ಸವದತ್ತಿ 02: ಪಟ್ಟಣದ ಸವಳಭಾವಿ ಓಣಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ 4 ರಲ್ಲಿ ನಡೆದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಜಿಲ್ಲಾ ಪಂಚಾಯತ್ ಬೆಳಗಾವಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ   ಕಾರ್ಯಾಲಯ ಸವದತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ  ಸವದತ್ತಿ ದಕ್ಷಿಣ ಕ್ಲಸ್ಟರ್ ಮಟ್ಟದ ಪ್ರಸಕ್ತ ಸಾಲಿನ ಎಫ್‌ಎಲ್‌ಏನ್ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಶಿಕ್ಷಣ ಇಲಾಖೆಯು ಮಕ್ಕಳಿಗೆ ಎಲ್ಲ ರೀತಿ ಎಂದಲೂ ಸಹಾಯ ಸೌಲಭ್ಯಗಳನ್ನು ನೀಡಿ ಜನಿಸಿದ ಎಲ್ಲ ಮಕ್ಕಳು ವಿದ್ಯಾವಂತರಾಗಿ ಬಾಳಬೇಕು

                     ಆ ಒಂದು ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಾಕಿಕೊಂಡು  ಆ ಯೋಜನೆಗಳ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಿ  ಆ ಎಲ್ಲ ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವುದೇ ಸರ್ಕಾರದ ಮುಖ್ಯ ಉದ್ದೇಶ ವಾಗಿದೆ  ಅದರ ನಂತರ ಜನಿಸಿದ ಎಲ್ಲ ಮಕ್ಕಳು ಕೂಡ ವಿದ್ಯಾವಂತರಾಗಿ ಬಾಳಬೇಕು ಎಂಬ ಮುಖ್ಯ ಉದ್ದೇಶ ಸರ್ಕಾರದ್ದಾಗಿದೆ ಎಂದು ಹೇಳಿದರು. ಅವರು  ನಮ್ಮ ಶಿಕ್ಷಣ ಇಲಾಖೆಯೂ  ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ರೂಪಿಸಿರುವ ಕಾರ್ಯಕ್ರಮಗಳಾದ  ಮಕ್ಕಳ ಕಲಿಕಾ ಹಬ್ಬ ಮಕ್ಕಳ ಶಿಕ್ಷಣ ಮಟ್ಟ ಹೆಚ್ಚಿಸುವಲ್ಲಿ ಕಾರ್ಯಗಾರಗಳು ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ತುಂಬುವ ಕಾರ್ಯಕ್ರಮ  ಮಕ್ಕಳಲ್ಲಿ ಶಿಸ್ತು ಆದರ್ಶಕತೆ ಉತ್ತಮ ಸಂಸ್ಕಾರ  ಮಕ್ಕಳಲ್ಲಿ ದೇಶಾಭಿಮಾನ ಹೆಚ್ಚಿಸುವುದು

                  ದೈಹಿಕ ಚಟುವಟಿಕೆಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಇವುಗಳು ನಿರಂತರವಾಗಿ ತಾಲೂಕಿನಲ್ಲಿ ನಡೆಯುತ್ತಿವೆ ಈ ಎಲ್ಲ ಸರ್ಕಾರದ ಸೌಲಭ್ಯಗಳನ್ನು ಈಡೇರಿಸುವಲ್ಲಿ ನಮ್ಮ ಶಿಕ್ಷಕ ಶಿಕ್ಷಕಿಯರು ಹಾಗೂ ನಮ್ಮ ಕಾರ್ಯಾಲಯದ ಸಿಬ್ಬಂದಿಗಳು ಬಹಳಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಶ್ರಮಕ್ಕೆ ಪಾಲಕರು ಹಾಗೂ ಎಸ್ ಡಿ ಎಂ ಸಿ ಸದಸ್ಯರು ಕೈ ಜೋಡಿಸಿದರೆ ಅವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತದೆ  ತಾಲೂಕಿನಲ್ಲಿ ಮಕ್ಕಳು ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯ ಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ನಾನು ತಾಲೂಕಿನ ಪ್ರತಿಯೊಂದು ಶಾಲೆಗಳಿಗೆ ಭೇಟಿ ನೀಡಿ  ಅಲ್ಲಿನ ಮಕ್ಕಳ ಕಲಿಕೆ ಹಾಗೂ ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಎಲ್ಲವನ್ನು ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿರುವೆ ಎಂದರು.

              ಈ ಸಂದರ್ಭದಲ್ಲಿ  ಶಿಕ್ಷಕರಾದ ಪ್ರಕಾಶ ಹೆಮ್ಮರಡಿ ಮಾತನಾಡಿ ಮಕ್ಕಳಲ್ಲಿ ಕಲಿಕೆ ಎಂಬುದು ರಕ್ತಗತವಾಗಿ ಬೆಳೆಯಬೇಕು. ಕಲಿಕಾ ಹಬ್ಬದಲ್ಲಿ ಎಲ್ಲವೂ ಕೂಡ ಮಕ್ಕಳಿಂದಲೇ ಆಗಬೇಕು ಕ್ಯಾಸೆಟ್ ಹಾಗೂ ಮೊಬೈಲ್ ಗಳ ಮುಖಾಂತರ ಗೀತೆಗಳು ಹಾಡಿಸುವುದು ಸಂಪೂರ್ಣವಾಗಿ ನಿಲ್ಲಬೇಕು.  ಸಂಗೀತ ಕಲೆ ಹಾಗೂ ನೃತ್ಯ ಈ ಎಲ್ಲಾ ಕಲೆಗಳು ಮಕ್ಕಳಲ್ಲಿ ಇರುವಂತೆ ನಾವೆಲ್ಲರೂ  ಹಾಗೂ ಪಾಲಕರು ಶ್ರಮವಹಿಸಿ ಕಾರ್ಯನಿರ್ವಹಿಸಿದರೆ ಮಾತ್ರ  ಇವುಗಳನ್ನು ಅನುಷ್ಠಾನಗೊಳಿಸಲು ಸಾಧ್ಯ ಎಂದರು.     ಮುಖ್ಯ ಶಿಕ್ಷಕ ಎಚ್ ಆರ್ ಪೆಟ್ಲೂರ,ಮಾರುತಿ ಕರಡಿಗುಡ್ಡ, ಆಯ್‌.ಎಸ್‌.ಮುಳ್ಳೂರ, ಬಿ. ಎನ್‌. ಬ್ಯಾಳಿ,  ಹೆಚ್‌.ಎಲ್ ನದಾಫ, ಮಲ್ಲಿಕಾರ್ಜುನ ಮುದೇನೂರ, ಸಿ.ವಿ.ಬಾರ್ಕಿ, ಶಾಲೆಯ ಮುಖ್ಯ ಶಿಕ್ಷಕಿ ಆರ್‌. ಎಚ್‌. ನಾಗನೂರ, ಎ.ಎಮ್, ಕೆರೂರ, ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕ  ಶಿಕ್ಷಕಿಯರು ಎಸ್ಡಿಎಂಸಿ ಸದಸ್ಯರು  ಉಪಸ್ಥಿತರಿದ್ದರು.