ಕೊರಗಜ್ಜ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ
Song release program of the film 'Koragajja'
ಜೀ ಮ್ಯೂಸಿಕ್ ನಲ್ಲಿ ’ಕೊರಗಜ್ಜ’ನ ಆರು ಭಾಷೆಯ ಹಾಡುಗಳು ತಂಡದಿಂದ ಮಂಗಳೂರಿನಲ್ಲಿ ಅದ್ದೂರಿ ಕೊರಗಜ್ಜ ಕೋಲ ಸುದೀರ್ ಅತ್ತಾವರ್ ನಿರ್ದೇಶನ, ತ್ರಿವಿಕ್ರಮ ಸಪಲ್ಯ ನಿರ್ಮಾಣದ ಬಹು ನೀರೀಕ್ಷಿತ ’ಕೊರಗಜ್ಜ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಮಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದರಾದ ಭವ್ಯ, ಶ್ರುತಿ, ಸಂದೀಪ್ ಸೋಪರ್ಕರ್, ಕಾರ್ಯಕಾರಿ ನಿರ್ಮಾಪಕ ವಿದ್ಯಾದರ್ ಶೆಟ್ಟಿ ಮುಂತಾದವರು ಹಾಜರಿದ್ದರು. ಈ ಚಿತ್ರದ ಹಾಡುಗಳ ಹಕ್ಕನ್ನು ಜೀ ಮ್ಯೂಸಿಕ್ ಪಡೆದಿದ್ದು, ಸಂಸ್ಥೆಗೆ ಕೊರಗಜ್ಜ ಮೊದಲ ಕನ್ನಡ ಸಿನಿಮಾ. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಹಿರಿಯ ನಟ ಜೈ ಜಗದೀಶ್, ’ಕೊರಗಜ್ಜ ಸಿನಿಮಾ ನಾನು ಮಾಡಲು ಹೊರಟಿದ್ದೆ. ದೈವದ ಚಿತ್ರ ಮಾಡಲು ಧೈರ್ಯ ಬರಲಿಲ್ಲ. ಹಾಗಾಗಿ ಸುಮ್ಮನಾದೆ. ಈ ಚಿತ್ರತಂಡಕ್ಕೆ ಚನ್ನಾಗಿ ಹಣ ಬರಲಿ’ ಎಂದರು. ನಂತರ ನಟಿ, ನಿರ್ದೇಶಕಿ, ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್, ’2019-20ರಲ್ಲಿ ನಾವು ಕೊರಗಜ್ಜ ಸಿನಿಮಾ ಮಾಡಲು ಹೊರಟ್ವಿ. ಅದು ಮುಂದುವರೆಯಲಿಲ್ಲ. ನಂತರ ನಾವು ದೈವ ಕೇಳಿದಾಗ ನಿಮಗೆ ಆಗಿ ಬರಲ್ಲ ಎಂದು ಹೇಳಿದರು. ಸುದೀರ್ ಮಾಡಲು ಹೊರಟಾಗ ನಮ್ಮ ಸಪೋರ್ಟ್ ನೀಡಿದೆವು. ಈ ಚಿತ್ರ ಶುರುವಾದಾಗ ಕಾಂತಾರ ಕೂಡ ರೀಲೀಸ್ ಆಗಿರಲಿಲ್ಲ. ಇತ್ತೀಚೆಗೆ ನಮ್ಮ ಹೆಸರಿನಲ್ಲಿ ಇದ್ದ ಶೀರ್ಷಿಕೆಯನ್ನು ತಂಡಕ್ಕೆ ಬಿಟ್ಟು ಕೊಟ್ಟಿದ್ದೇವೆ’ ಎಂದು ಹೇಳಿದರು.
ನಂತರ ಚಿತ್ರದ ಮೊದಲ ಗೀತೆಯನ್ನು ವಿಭಿನ್ನವಾಗಿ ಬಿಡುಗಡೆ ಮಾಡಿದ ನಟಿ ಶ್ರುತಿ, ’ನಂಗೆ ಈ ಚಿತ್ರ ವಿಶೇಷವಾದ ಅನುಭವ ನೀಡಿದೆ. ಇದರಲ್ಲಿ ಭೈರಕ್ಕಿ ಪಾತ್ರ ಮಾಡಲು ಅವಕಾಶ ಸಿಕ್ಕಾಗ ತುಂಬಾ ಖುಷಿ ಆಯ್ತು. ನಮ್ಮ ನಾಡಿನ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ಕೊಂಡೋಯುವ ಪ್ರಯತ್ನ ಆಗುತ್ತಿದೆ. ಒಳ್ಳೆಯ ತಂಡ ಕಟ್ಟಿಕೊಂಡು ಸಿನಿಮಾ ಮಾಡಲಾಗಿದೆ. ನಾವು (ಕನ್ನಡಿಗರು) ಭಾಷಾ ಬೇದ ಇಲ್ಲದೆ ಆಯಾ ಭಾಷೆಯಲ್ಲಿಯೇ ಸಿನಿಮಾ ನೋಡುತ್ತೇವೆ. ಹಾಗೆಯೇ ನಮ್ಮ ಕನ್ನಡ ಭಾಷೆಯಲ್ಲಿಯೇ ಬೇರೆ ಭಾಷೆಯವರು ಸಿನಿಮಾ ನೋಡಿದಾಗ ಖುಷಿ ಇರುತ್ತೆ. ಕೊರಗಜ್ಜ ಎಲ್ಲ ಭಾಷೆಯಲ್ಲಿ ರೀಲೀಸ್ ಆದರೂ ಕನ್ನಡದಲ್ಲಿ ನೋಡಿದರೆ ಚನ್ನಾಗಿ ಅರ್ಥ ಆಗುತ್ತದೆ’ ಎಂದರು. ಮತ್ತೋರ್ವ ನಟಿ ಭವ್ಯ, ’ಇಂದು ಚಿತ್ರದ ಹಾಡುಗಳು ರೀಲೀಸ್ ಆಗಿದ್ದು, ಸಂಜೆ ಕೊರಗಜ್ಜ ಕೊಲ ಕೂಡ ನಡಿತಾ ಇದೆ. ನಮ್ಮ ಕಲೆ ಸಂಸ್ಕೃತಿ ನಶಿಸಿ ಹೋಗುವ ಕಾಲದಲ್ಲಿ ಇಂತಹ ಚಿತ್ರ ಬರತಾ ಇರೋದು ಖುಷಿ ಇದೆ. ಮೂರು ವರ್ಷ ನಿಧಾನವಾಗಿ ಕೊರಗಜ್ಜನ ಆಶಿರ್ವಾದದಿಂದ ದೊಡ್ಡ ಮಟ್ಟದಲ್ಲಿ ಬರತಾ ಇದೆ. ಈ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸುವೆ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸುದೀರ್ ಅತ್ತಾವರ್ ’ಈ ಸಿನಿಮಾ ಜರ್ನಿ ಕಷ್ಟದಿಂದ ಕೂಡಿತ್ತು. ಸಾಕಷ್ಟು ಕಷ್ಟಗಳನ್ನು ದಾಟಿ ಈಗ ರೀಲೀಸ್ ಹಂತಕ್ಕೆ ಬಂದಿದ್ದೇವೆ.
ಶೂಟಿಂಗ್ ಸಂದರ್ಭದಲ್ಲಿ 2-3 ಬಾರಿ ಅಟ್ಯಾಕ್ ಕೂಡ ಆಗಿತ್ತು. ಆ ಎಲ್ಲ ಕಷ್ಟಗಳನ್ನು ಕೊರಗಜ್ಜ ದೂರ ಮಾಡಿದರು’ ಎಂದು ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿದರು. ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ’ಕೊರಗಜ್ಜ ಪ್ಯಾನ್ ಇಂಡಿಯಾ ರೀಲೀಸ್ ಆಗಿದ್ದು, ನಮ್ಮ 3ಡಿ ಮೋಷನ್ ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗ ಹಾಡುಗಳ ಬಿಡುಗಡೆ ಸಮಯ. ನಿಮ್ಮಗಳ ಸಹಕಾರ ಇರಲಿ’ ಎಂದು ಕೇಳಿಕೊಂಡರು. ವಿಶೇಷ ಎನ್ನುವಂತೆ ಯಕ್ಷಗಾನ ವಾದ್ಯ, ಕುಣಿತದಿಂದ ಕಾರ್ಯಕ್ರಮ ನಡೆಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 