ರಾಣೇಬೆನ್ನೂರಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ: ಫಕ್ಕೀರ​‍್ಪ ಇಂಗಳಗಿ

ರಾಣೇಬೆನ್ನೂರಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ: ಫಕ್ಕೀರ​‍್ಪ  ಇಂಗಳಗಿ  Sir M. Visvesvaraya's birth anniversary celebrated in Ranebennur: Fakirpa Ingalagi

ರಾಣೇಬೆನ್ನೂರಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ: ಫಕ್ಕೀರ​‍್ಪ  ಇಂಗಳಗಿ  

 ರಾಣೇಬೆನ್ನೂರು 15;  ಸಾಧನೆ ಯಾರೊಬ್ಬರ ಸ್ವತ್ತಲ್ಲ. ಸಾಧನೆ ಮಾಡಬೇಕೆನ್ನುವ ಸಂಕಲ್ಪ ಮತ್ತು ಗುರು ಮಾರ್ಗದರ್ಶನ ಅಗತ್ಯ ಮತ್ತು ಅವಶ್ಯವಾಗಿದೆ ಎಂದು ನಗರಸಭೆ ಆಯುಕ್ತ ಫಕ್ಕೀರ​‍್ಪ ಇಂಗಳಗಿ ಹೇಳಿದರು. ಅವರು ಸೋಮವಾರ, ಇಲ್ಲಿನ ಶ್ರೀ ಆದಿಶಕ್ತಿ  ಸಮುದಾಯ ಭವನದಲ್ಲಿ,  ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ, ಆಯೋಜಿಸಿದ್ದ, ಭಾರತದ ಶ್ರೇಷ್ಠ ಅಭಿಯಂತ ಸರ್ ಎಂ. ವಿಶ್ವೇಶ್ವರಯ್ಯ ಅವರ165 ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.  

ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟೆ ಕಟ್ಟಿದ ಮಹಾನ್ ಸಾಧಕ. ಅಂದು ಅವರು ಕನ್ನಂಬಾಡಿ ಕಟ್ಟದೇ ಇದ್ದಿದ್ದರೆ ಲಕ್ಷಾಂತರ ರೈತರ ಬದುಕು ಹಸನಾಗುತ್ತಿರಲಿಲ್ಲ ಎಂದರು. ಅವರು ಹಾಕಿಕೊಟ್ಟ ದಾರಿಯಲ್ಲಿ, ಇಂದಿನ ಯುವ ಜನಾಂಗ  ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನ ಸಮರ್ಥವಾಗಿ ಬಳಸಿಕೊಂಡು ದೇಶದ ಅಭಿವೃದ್ಧಿಗೆ ಮುಂದಾಗಬೇಕಾದ ಅಗತ್ಯವಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ನಗರಸಭಾ ಅಧ್ಯಕ್ಷ ಚಂಪಕ್ಕ ರ. ಬಿಸಲಹಳ್ಳಿ ಅವರು ದಿನಾಚರಣೆಗೆ ಚಾಲನೆ ನೀಡಿ, ಶುಭ ಕೋರಿದರು.     ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷ ಪ್ರಭುದೇವ ಮುಂಡಾಸದ ಅವರು, ಅಭಿಯಂತರ ಕ್ಷೇತ್ರಕ್ಕೆ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡಿದ ವಿಶ್ವೇಶ್ವರಯ್ಯನವರ ಆದರ್ಶಗಳನ್ನು ಮೈಗೂಡಿಸಿಕೊಂಡು, ಸಂಘಟನೆ ಆರಂಭಿಸಲಾಗಿದೆ. ನಮ್ಮ ಪೂರ್ವಜ ಪ್ರಾಥಸ್ಮರಣೀಯರ ದಿನಾಚರಣೆ ನಿಮಿತ್ತ, ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಎಂದರು.      

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ್ ಮೋಟಗಿ, ನಗರಸಭೆ ಉಪಾಧ್ಯಕ್ಷ ನಾಗರಾಜ ಪವಾರ, ರಾಜಕೀಯ ಯುವ ಮುಖಂಡ ಸಂತೋಷ್ ಕುಮಾರ ಪಾಟೀಲ, ನಾರಾಯಣ ಹೃದಯಾಲಯದ ವೈದ್ಯ ರಾಕೇಶ ತಿಲಕ್, ನಗರಸಭೆ ಗುತ್ತಿಗದಾರ ಸಂಘದ ಅಧ್ಯಕ್ಷ ಮಧು ಕೋಳಿವಾಡ, ಮತ್ತಿತರರು ಮಾತನಾಡಿದರು. ಸುಪ್ರೀತ್ ಸಂಗಡಿಗರು ಪ್ರಾರ್ಥಿಸಿದರು. ಗೋಪಿ ಕದರಮಂಡಲಗಿ ಸ್ವಾಗತಿಸಿದರು. ವಿನಾಯಕ ಹರಿಹರ ಪ್ರಾಸ್ತಾವಿಕ ಮಾತನಾಡಿದರು. ನಗರಸಭೆಯ ಮಾರುತಿ ಪಾಟೀಲ್ ನಿರೂಪಿಸಿ, ಅಮೃತ್ ಸಣ್ಣಿಂಗಣ್ಣನವರ ವಂದಿಸಿದರು. ದಾವಣಗೆರೆಯ ಎಸ್‌. ಎಸ್‌. ನಾರಾಯಣ ಹೃದಯಾಲಯವು, ಸ್ವಯಂ ಪ್ರೇರಿತ ರಕ್ತದಾನ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಆಯೋಜಿಸಿತ್ತು. ನಗರ ಮತ್ತು ತಾಲೂಕಿನ ಮುನ್ನೂರಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಂಡಿದ್ದರು.