ಸಿಂದಗಿಯ ಅಕ್ಷರ ಮಾಂತ್ರಿಕ ಎಚ್‌.ಟಿ.ಕುಲಕರ್ಣಿ ಇನ್ನಿಲ್ಲ

   ಸಿಂದಗಿಯ ಅಕ್ಷರ ಮಾಂತ್ರಿಕ ಎಚ್‌.ಟಿ.ಕುಲಕರ್ಣಿ ಇನ್ನಿಲ್ಲ Sindagi's 'Wizard of Letters' H.T. Kulkarni is no more

ಲೋಕದರ್ಶನ ವರದಿ 

             ಸಿಂದಗಿ 01: ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಗಿದ ಅಕ್ಷರ ಮಾಂತ್ರಿಕ ಎಚ್‌.ಟಿ.ಕುಲಕರ್ಣಿ 76 ವರ್ಷ ಅವರು ಇಂದು ಬೆಳಗಿನ ಜಾವ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ ಪತ್ನಿ, 2 ಇರ್ವರು ಹೆಣ್ಣು ಮಕ್ಕಳು, ಒರ್ವ ಗಂಡು ಮಗ ಹಾಗೂ ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ. ಜೀವನುದ್ದಕ್ಕೂ ಮಕ್ಕಳ ಬಾಳು ಬೆಳಗಿ ಸಾವನ್ನಪ್ಪಿದರು ಕೂಡಾ ದೇಹದಾನ ಮಾಡಿ ಸಮಾಜದ ಕಳಕಳಿ ಮೆರೆದ ಶಿಕ್ಷಕರು. 

            ಸಂತಾಪ; ಅವಿಸ್ಮರಣೀಯ ವ್ಯಕ್ತಿತ್ವ ಹೊಂದಿರುವಂತ ಶಿಕ್ಷಕ ಎಚ್‌.ಟಿ.ಕುಲಕರ್ಣಿ ಅವರು ಒಂದು ಟುಟೋರಿಯಲ್ ಸ್ಕೂಲ ತೆಗೆದು ಮರೆಯದ ಶಿಕ್ಷಕರಾಗಿ ಗುರುವಾಗಿ ವಿಜ್ಞಾನ, ಗಣಿತ ಭೋದನೆ ಮಾತ್ರ ಮಾಡಲಿಲ್ಲ ಜೀವನಕ್ಕೆ ಬೇಕಾಗಿರುವಂತ ನೈತಿಕ ಮೌಲ್ಯಗಳನ್ನು ಭೋದನೆ ಮಾಡಲು ಶಿಕ್ಷಕ ಹೇಗೆ ಆಚರಣೆ ಮಾಡಬೇಕು ಎನ್ನುವ ಜಿವಂತ ಉದಾರಣೆ ಆಗುವ ಮೂಲಕ ಕಲಿಸಬೇಕು ಎನ್ನುವ  ಎಚ್‌.ಟಿ.ಕುಲಕರ್ಣಿಯವರು ಅಂತಹ ಪುಣ್ಯತ್ಮಾ ಶಿಕ್ಷಕರು ಅಗಲಿದೆ ತುಂಬಾ ನೋವು ಉಂಟು ಮಾಡಿದೆ. ಅವರ ಆತ್ಮಕ್ಕೆ ಸದ್ಗತಿ ಕೊಡಲಿ. ಎಂದು ಮಾಜಿ ಎಂಎಲ್ಸಿ ಅರುಣ ಶಹಾಪುರ ಸಂತಾಪ ಸೂಚಿಸಿದರು. 

            ನಗರದ ಪದ್ಮರಾಜ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಚೇರಮನ್ ಡಾ. ಪ್ರಭೂ ಸಾರಂಗದೇವ ಶಿವಾಚಾರ್ಯರು, ಆಸಂಗಿಹಾಳ ಆರೂಢಮಠದ ಶ್ರೀಗಳು, ಆಲಮೇಲ ವೀರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಶ್ರೀಗಳು, ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಶರಣಪ್ಪ ಸುಣಗಾರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ವ್ಹಿ.ಬಿಕುರುಡಿ, ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ ಸೇರಿದಂತೆ ದೇಶ, ವಿದೇಶಗಳಲ್ಲಿ ಇವರಿಂದ ವಿಧ್ಯಾಪಡೆದ ವಿದ್ಯಾರ್ಥಿ ಸಮೂಹ ಸಂತಾಪ ಸೂಚಿಸಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.