ಭ್ರಷ್ಟ್ರಾಚಾರ, ಹಗರಣಗಳ ಸರಮಾಲೆ, ಹಳಿ ತಪ್ಪಿದ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟ ಆಡಳಿತ ಅರಸು ದಾಖಲೆ ಮುರಿದ ಸಿದ್ದರಾಮಯ್ಯರ ಕೊಡುಗೆಗಳು
Siddaramaiah's record-breaking contributions as a ruler rife with corruption, a string of scandals,
ಬೆಂಗಳೂರು: ದೇವರಾಜ ಅರಸು ಅವರ ದಾಖಲೆ ಮುರಿದಿರುವುದಾಗಿ ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ನೀಡಿದ ಕೊಡುಗೆಗಳು ಏನು? ಭ್ರಷ್ಟ್ರಾಚಾರ, ಹಗರಣಗಳ ಸರಮಾಲೆ, ಹಳಿ ತಪ್ಪಿದ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟ ಆಡಳಿತ; ಇವೇ ಇವರು ಸೃಷ್ಟಿಸಿರುವ ದಾಖಲೆಗಳು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದರು.
ಅರಸು ಅವರ ಜತೆ ಯಾವುದೇ ರೀತಿಯಲ್ಲೂ ಹೋಲಿಸಲು ಸಾಧ್ಯವಿಲ್ಲ. ಅರಸು ಧ್ವನಿ ಇಲ್ಲದವರ ಧ್ವನಿಯಾಗಿದ್ದರು. ಹಲವು ಕ್ರಾಂತಿಕಾರಿ ಕಾನೂನುಗಳನ್ನು ಜಾರಿ ತಂದರು. ಆದರೆ, ಅವರನ್ನು ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಸ್ಥಾನದಿಂದ ಹೊರದಬ್ಬಿ ಅಪಮಾನ ಮಾಡಿತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೋತು ಸುಣ್ಣವಾಗಿದ್ದ ಇಂದಿರಾಗಾಂಧಿಗೆ ರಾಜಕೀಯ ಮರುಜನ್ಮ ನೀಡಿದವರೇ ದೇವರಾಜ ಅರಸು. ಆದರೆ, ಅವರಿಗೆ ಎರಡನೇ ಅವಧಿ ಪೂರ್ಣಗೊಳಿಸಲು ಬಿಡದೇ ಅವರ ರಾಜಕೀಯ ಜೀವನ ಮುಗಿಸಿದ್ದು ಕಾಂಗ್ರೆಸ್ನ ಇತಿಹಾಸ. ಹೀಗಾಗಿ ಅರಸು ದಾಖಲೆ ಮುರಿದರು ಎಂದು ಸಂಭ್ರಮಿಸುವುದು ಹಾಸ್ಯಾಸ್ಪದ. ಸಿದ್ದರಾಮಯ್ಯ ಎಷ್ಟು ವರ್ಷ ಮುಖ್ಯಮಂತ್ರಿ ಆಗಿದ್ದರು ಎಂಬುದು ಮುಖ್ಯವಲ್ಲ ರಾಜ್ಯಕ್ಕೆ ಏನು ಮಾಡಿದರು ಎಂಬುದು ಮುಖ್ಯ ಎಂದರು.
ದೇವರಾಜ ಅರಸು ಅವರು 1962 ರಲ್ಲಿ ಹುಣಸೂರು ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದರು. ಸಿದ್ದರಾಮಯ್ಯ 2013 ರಿಂದ 2018 ರವರೆಗೆ ಮುಖ್ಯಮಂತ್ರಿಯಾಗಿ 2018 ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತು ಜನರ ವಿಶ್ವಾಸ ಕಳೆದುಕೊಂಡರು ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಹೋರಾಟಗಳಿಂದ ಬಂದು ಮುಖ್ಯಮಂತ್ರಿ ಆಗಲಿಲ್ಲ. ಅದೃಷ್ಟದ ಮೂಲಕ ಮತ್ತು ಅವಕಾಶವಾದಿತನದಿಂದ ಮುಖ್ಯಮಂತ್ರಿ ಆದರು. ತಮ್ಮ ಎರಡನೇ ಅವಧಿಯಲ್ಲಿ ಮುಡಾ ನಿವೇಶನ ಹಗರಣದಲ್ಲಿ ಸಿಕ್ಕಿಕೊಂಡು 14 ನಿವೇಶಗಳನ್ನು ಹಿಂತಿರುಗಿಸಿದರು. ಇವರ ಸರ್ಕಾರದ ಮಂತ್ರಿ ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನವನ್ನು ಅಕ್ರಮವಾಗಿ ಸಾಗಿಸಿ ತೆಲಂಗಾಣ ಚುನಾವಣೆಯಲ್ಲಿ ಬಳಸಿದರು. ಇವರ ಪ್ರಚಾರದ ಹುಚ್ಚಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ 11 ಮಂದಿ ಅಮಾಯಕರು ಬಲಿಯಾದರು. ಕೋಗಿಲು ಬಡಾವಣೆ ಪ್ರಕರಣದಲ್ಲಿ ಅಕ್ರಮ ವಲಸಿಗರಿಗೆ ಮನೆಗಳನ್ನು ಹೊರಟಿದ್ದಾರೆ. ಸಿದ್ದರಾಮಯ್ಯ ಸಾಧನೆಯ ಪಟ್ಟಿ ಬಹಳ ಉದ್ದವಿದೆ ಎಂದು ವಿಜಯೇಂದ್ರ ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 