ಶಿವಶರಣ ಹೇರೂರು ವಿರುಪಣ್ಣ ತಾತನವರ ಮಹಾರಥೋತ್ಸವ
Shivasharan Herour Virupanna's Maharathotsava
ಲೋಕದರ್ಶನ ವರದಿ
ಕಂಪ್ಲಿ 09: ಪಟ್ಟಣದ ಶಿವಾಧ್ವೈತ ಶಿವಶರಣ ಹೇರೂರು ವಿರುಪಣ್ಣತಾತನವರ ಮಹಾರಥೋತ್ಸವವು ಸಡಗರ, ಸಂಭ್ರಮ, ಜರುಗಿತು. ಹೇರೂರು ವಿರುಪಣ್ಣತಾತನವರು ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿತಾಲ್ಲೂಕಿನ ಹೇರೂರು ಗ್ರಾಮದವರಾದರೂ ಸಹಿತ ಅನೇಕ ಪವಾಡ ಮಾಡುತ್ತಾ ಕಂಪ್ಲಿಯಲ್ಲಿ ಬಂದು ನೆಲೆಸಿದ್ದರು.ಕಾಯವನ್ನು ಪಂಚಭೂತಗಳಲ್ಲಿ ಲೀನವಾಗಿಸಿ,ಕಂಪ್ಲಿ ವಿರುಪಣ್ಣತಾತನವರ ಮಠವಾಗಿದೆ. ತಾತನ ಮಹಾರಥೋತ್ಸವದ ರಥಕ್ಕೆಕಂಕಣಧಾರಣೆ, ಕಳಸಧಾರಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವುನಂತರ ಅನ್ನ ಸಂತರೆ್ಣ ನಡೆಯಿತು ಸಂಜೆ ಸಾವಿರಾರು ತಾತನ ಸದ್ಭಕ್ತರು, ವಿವಿಧ ಮಠಗಳ ಸ್ವಾಮೀಜಿಗಳ ನೇತೃತ್ವದಲ್ಲಿ ವಿವಿಧ ಹೂವುಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಶ್ರೀ ಹೇರೂರು ವಿರುಪಣ್ಣತಾತನ ಬೆಳ್ಳಿಯ ಮರಿ್ತಯನ್ನು ಪ್ರತಿಷ್ಠಾಪಿಸಿ ಅತ್ಯಂತ ವಿಜೃಂಭಣೆಯಿಂದತಾತನ ಜಯಘೋಷಗಳ ಮಧ್ಯೆ ಮಹಾರಥೋತ್ಸವವು ಜರುಗಿತು.ಮಹಾರಥೋತ್ಸವದಲ್ಲಿ ಪಟ್ಟಣವಷ್ಟೇ ಅಲ್ಲದೇ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಸದ್ಭಕ್ತರು ಭಾಗವಹಿಸಿ ರಥಕ್ಕೆ ಹೂ ಹಣ್ಣು ಎಸೆದು ತಮ್ಮ ಹರಕೆಯನ್ನು ತೀರಿಸಿದರು.ಮಠದ ಅರ್ಚಕರಾದ ಎಂ.ವೀರಯ್ಯಸ್ವಾಮಿ, ವಿರುಪಣ್ಣತಾತನ ಮಠದ ಅಧ್ಯಕ್ಷರಾದ ಡಿ.ವಿ.ರಮೇಶ್ ಗುಪ್ತಾ, ಪದಾಧಿಕಾರಿಗಳು ಭಾಗವಹಿಸಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 