ಅಥಣಿಯಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ
Shivaji Maharaj's statue unveiled in Athani
ಕಾಗವಾಡ, 20 : ಇತ್ತಿಚಿಗೆ ಅಥಣಿ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಅನಾವರಣ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿರುವ ಕಾರಣ ಯಶಸ್ವಿಗೆ ಕಾರಣೀಕರ್ತರಾದ ಮಾಜಿ ಸಚಿವರು, ಅಥಣಿ ಶುಗರ್ಸ ಕಾರ್ಖಾನೆಯ ಅಧ್ಯಕ್ಷ ಶ್ರೀಮಂತ ಪಾಟೀಲ ಅವರನ್ನು ಇತ್ತಿಚಿಗೆ ಮೂರ್ತಿ ಪ್ರತಿಷ್ಠಾನ ಸಮಾರಂಭ ಸಮಿತಿಯ ಸದಸ್ಯರು ಸನ್ಮಾನಿಸಿ ಗೌರವಿಸಿದ್ದಾರೆ.
ಈ ವೇಳೆ ನಾನಾಸಾಬ ಅವತಾಡೆ, ಮಾತನಾಡಿ, ಅಥಣಿ ಪಟ್ಟಣದಲ್ಲಿ ಸಾಂಗಲಿಯ ಸಂಭಾಜಿ ಭಿಡೆ ಗುರುಜಿ, ಬೆಂಗಳೂರಿನ ಗೋಸಾಯಿ ಮಠದ ಶ್ರೀಗಳು ಮತ್ತು ಕೇಂದ್ರ ಮಂತ್ರಿ ಜ್ಯೋತಿರಾದಿತ್ಯ ಸಿಂಧಿಯಾ ಇವರ ಉಪಸ್ಥಿತಿಯಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಮಾಜಿ ಸಚಿವರಾದ ಶ್ರೀಮಂತ ಪಾಟೀಲ ಅವರ ಪರಿಶ್ರಮ ಬಹಳಷ್ಟಿದೆ ಎಂದರು.
ಈ ವೇಳೆ ಸಮಾರಂಭ ಸಮಿತಿಯ ಸದಸ್ಯರಾದ ಭಾವುಸಾಬ ಜಾಧವ, ಸಿದ್ದು ಪಾಟೀಲ, ಶ್ರೀನಿವಾಸ ಪಾಟೀಲ, ಸಂದೀಪ ಪಾಟೀಲ, ಅಭಯ ಪಾಟೀಲ, ನಾನಾಸಾಬ ಜಾಧವ, ಅಶೋಕ ಮಾನೆ, ಧನಂಜಯ ಚವ್ಹಾನ, ಆದಿತ್ಯ ಅವತಾಡೆ, ನಾರಾಯಣ ಜಾಧವ, ನಾರಾಯಣ ಭೋಸಲೆ, ಸುನೀಲ ದೇಸಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 