ಶಶಿಧರ ಶಿರಸಂಗಿ
ಶಿರಹಟ್ಟಿ 08: ಪಟ್ಟಣದ ಮ್ಯಾಗೇರಿಯ ಕನ್ನಡ ಪ್ರಾಥಮಿಕ ಶಾಲೆಯ ಕೊಠಡಿಗಳಿಗೆ ಸಿಮಿಂಟ್ ಮೇಲ್ಛಾವಣಿ ಹಾಕುವ ವೇಳೆ ತಮ್ಮ ಅಂದವನ್ನು ಕಳೆದುಕೊಂಡ ಕೊಠಡಿಗಳ ಗೋಡೆಗಳನ್ನು ಸ್ವಚ್ಚಗೊಳಿಸಿ ಮಕ್ಕಳ ಕಲಿಕೆಗೆ ಅನುವು ಮಾಡಿಕೊಡಲು ಪಿ.ಡಬ್ಲೂ.ಡಿ ಸಹಾಯಕ ಇಂಜೀನಿಯರ ರಾಜಕುಮಾರ ಗುತ್ತಿಗೆದಾರರಿಗೆ ಸೂಚಿಸಿದರು.
ಮೇ. 31ಶನಿವಾರ ಲೋಕದರ್ಶನದ ಗದಗ ವಿಭಾಗದಲ್ಲಿ ಪ್ರಕಟಗೊಂಡ "ನೋಡ ಬನ್ನಿ ಸುಣ್ಣ ಬಣ್ಣವನ್ನೇ ಕಾಣದ ನಮ್ಮ ಸಕರ್ಾರಿ ಶಾಲೆಯನ್ನು" ವರದಿಯನ್ನು ನೋಡಿದ ಸ್ಥಳೀಯ ಮುಖಂಡರುಗಳು ಹಾಗೂ ಈ ವರದಿಯನ್ನು ನೋಡಿ ಎಚ್ಚತ್ತುಗೊಂಡ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಶಾಲೆಯ ಸ್ಥಿತಿಯನ್ನು ನೋಡಿ ಗುತ್ತಿಗೆದಾರರನ್ನು ಕರೆಯಿಸಿ ಸ್ವಚ್ಚಗೊಳಿಸಲು ಸೂಚಿಸಿದರು. ಅಲ್ಲದೆ ಮುಂದಿನ ಅನುದಾನದಲ್ಲಿ ಶಾಲೆಗೆ ಸುಣ್ಣ-ಬಣ್ಣದ ವ್ಯವಸ್ತೆ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತಮ ಪರಿಸರ ನಿಮರ್ಿಸಿಕೊಡಲಾಗುವದು ಎಂದು ಹೇಳಿದರು.
ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ವಿ.ವಿ.ಕಪ್ಪತ್ತನವರ, ಪಪಂ ಸದಸ್ಯರಾದ ಸಂದೀಪ ಕಪ್ಪತ್ತನವರ, ಫಕ್ಕೀರೇಶ ರಟ್ಟಿಹಳ್ಳಿ, ಶ್ರೀನಿವಾಸ ಬಾರಬರ್, ಈರಣ್ಣ ಕೋಟಿ, ಎಚ್,ಎಮ್.ದೇವಗಿರಿ, ಸುಧೀರ ಜಮಖಂಡಿ ಹಾಗೂ ಓಣಿಯ ಪ್ರಮುಖರು ಇದ್ದರು.