ಶಿರಹಟ್ಟಿ: ವಿಕಲಚೇತನರ ತ್ರಿಚಕ್ರ ವಾಹನ ಜಾಥಾ ಕಾರ್ಯಕ್ರಮಕ್ಕೆ ಚಾಲನೆ

ಲೋಕದರ್ಶನ ವರದಿ 

ಶಿರಹಟ್ಟಿ 01: ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಅರ್ಹ ಮತದಾರರು ತಪ್ಪದೇ ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದು ತಾಪಂ ಕಾರ್ಯನಿವರ್ಾಹಕ ಅಧಿಕಾರಿ ಆರ್.ವೈ. ಗುರಿಕಾರ ಹೇಳಿದರು.

ಸ್ಥಳೀಯ ತಾಲೂಕು ಪಂಚಾಯತ್ ಸಾಮಾಥ್ರ್ಯ ಸೌಧದಲ್ಲಿ ಶನಿವಾರ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಸಬಲೀಕರಣ ಇಲಾಖೆ ವತಿಯಿಂದ ನಡೆದ ವಿಕಲಚೇತನರ ತ್ರಿಚಕ್ರ ವಾಹನ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ, ದೇಶದ ಅಭಿವೃದ್ಧಿ ಹಿತದೃಷ್ಠಿಯಿಂದ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವುದರ ಮೂಲಕ ಒಬ್ಬ ಒಳ್ಳೆಯ ನಾಯಕನನ್ನು ಸೃಷ್ಠಿಸಬೇಕು ಅಂದಾಗ ಮಾತ್ರ ಸದೃಡ ದೇಶ ನಿಮರ್ಿಸಲು ಸಾಧ್ಯವಾಗುತ್ತದೆ ಮತ್ತು ಗ್ರಾಮೀಣ ಪ್ರದೇಶದ ಯುವಕ/ಯುವತಿಯರು ಮತದಾನದ ಕುರಿತು ಹಿರಿಯರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಏಕೆಂದರೆ ಮತದಾನ ನಮ್ಮ ಹಕ್ಕು, ಆದ್ದರಿಂದ ನಮ್ಮ ಹಕ್ಕನ್ನು ಒಬ್ಬ ಪ್ರಮಾಣಿಕ ನಾಯಕನಿಗೆೆ ನೀಡುವುದರಿಂದ ಹಳ್ಳಿಗಳು ಪ್ರಗತಿ ಶ್ರಮಿಸುತ್ತಾರೆ. ಆದ್ದರಿಂದ ಯಾವುದೇ ಹಣ, ಹೆಂಡದ ವ್ಯಾಮೋಹಕ್ಕೆ ಒಳಗಾಗದೇ ಮತ ಹಾಕಬೇಕು ಎಂದು ಹೇಳಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್, ವೈ. ಗುರಿಕಾರ.  ತಾಲೂಕಾ ವಿವಿದೋದ್ದೇಶ ಕಾರ್ಯಕರ್ತೆ  ಭಾರತಿ ಮೂರಶಿಳ್ಳಿನ ಹಾಗೂ ತಾಲೂಕಿನ ಎಲ್ಲ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.