ಶರಣರ ವಚನಗಳು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ಇಡಿ ಮನುಕುಲವನ್ನೆ ಬೆಳಗುವ ಶಕ್ತಿಯಾಗಿವೆ

ಶರಣರ ವಚನಗಳು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ಇಡಿ ಮನುಕುಲವನ್ನೆ ಬೆಳಗುವ ಶಕ್ತಿಯಾಗಿವೆ Sharan's verses have written the prelude to social revolution and have become a force to enlighten

ಶಿಗ್ಗಾವಿ : 12ನೇ ಶತಮಾನದ ಶರಣರ ವಚನಗಳು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ಇಡಿ ಮನುಕುಲವನ್ನೆ ಬೆಳಗುವ ಶಕ್ತಿಯಾಗಿವೆ ಅವರ ಆ ಸಂದೇಶಗಳನ್ನು ಇಂದಿನ ನಮ್ಮ ಮನುಕುಲಕ್ಕೆ  ಸಾಹಿತ್ಯದ ಪ್ರಚಾರ ಕಾರ್ಯವನ್ನ ನಮ್ಮ ಶರಣ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷ ಮಾರುತಿ ಶಿಡ್ಲಾಪೂರ ಹೇಳಿದರು. 

ಪಟ್ಟಣದ ವಿರಕ್ತಮಠದಲ್ಲಿ ಹಮ್ಮಿಕೊಂಡ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಶಿಗ್ಗಾವಿ ತಾಲೂಕಾ ಘಟಕದ ಪದಾಧಿಕಾರಿಗಳ ಸೇವಾ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ, ಲಿಂಗ ಪೂಜೆಯಲ್ಲಿ ಇರುವ ಶಕ್ತಿ ಮತ್ತು ಮಹತ್ವವನ್ನ ನಮ್ಮ ಮಕ್ಕಳಿಗೆ ತಿಳಿಸಲಾಗದಷ್ಟು ಬದುಕಿನ ಒತ್ತಡದಲ್ಲಿದ್ದೇವೆ, ಇದು ಬಹಳಷ್ಟು ಖೇದವೆನಿಸುತ್ತದೆ, ಅಚ್ಚುತ ಪದವಿ ಕಡೆಗೆ ಹೋಗುವ ಕಾರ್ಯವನ್ನ ಶರಣ ಸಾಹಿತ್ಯ ಪರಿಷತ್ತು ಮಾಡುತ್ತಿದೆ, ಬದುಕಿನ ಭಾವನೆಗಳು ವಚನಗಳಲ್ಲಿ ಅಡಕವಾಗಿವೆ, ಸಮಾಜದಲ್ಲಿ ಒಳ್ಳೇಯ ತನವನ್ನ ಬಿತ್ತುವ ಕಾರ್ಯ ಮಾಡೋಣ, ಅದಕ್ಕೆ ಕೈಜೋಡಿಸಿ ಎಂದರು. 

ಪ್ರೋ. ಶಶಿಕಾಂತ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿ ಭಾವೈಕ್ಯತೆಯ ಸಂದೇಶವನ್ನ ಸಾರಿದ ಈ ಕ್ಷೇತ್ರದಲ್ಲಿ ಶರಣರ ಸಂದೇಶವನ್ನ ತಲುಪಿಸುವ ಕಾರ್ಯವನ್ನ ಈ ಶರಣ ಸಾಹಿತ್ಯ ಪರಿಷತ್ತು ಮಾಡಲಿದೆ, ಕ್ಷೇತ್ರದ ಜನರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಶರಣರ ಸಂದೇಶವನ್ನ ಎಲ್ಲರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಶರಣ ವಚನಗಳ ಸಂದೇಶವನ್ನ ಸ್ಮರಿಸಿ ಬದುಕುವ ಕಾರ್ಯವನ್ನ ಮಾಡಲಾಗುತ್ತಿದೆ ಎಲ್ಲರ ಸಹಕಾರ ಇರಲಿ ಎಂದರು. 

ಶರಣ ಸಾಹಿತ್ಯ ಪರಿಷತ್ತಿನ ಶಹರ ಘಟಕದ ಅದ್ಯಕ್ಷ ಚನ್ನಪ್ಪ ಕೆ ಬಿ ಚನ್ನಪ್ಪ ಮಾತನಾಡಿ, ವಚನಗಳ ಸಾರದ ಸಂದೇಶವನ್ನ ಅರಿತವರು ಮಾತ್ರ ಸಾಧನೆ ಮಾಡಲು ಸಾದ್ಯವಿದೆ, ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಎಷ್ಟು ಜನ ಭಾಗವಹಿಸುತ್ತಾರೆ ಎಂಬುದಕ್ಕಿಂತ ಯಾರು ಭಾಗವಹಿಸಿದರು ಎನ್ನುವುದು ಮುಖ್ಯ, ಶರಣರ ಸಂದೇಶವನ್ನ ಅರಿತವರೇ ಬಲ್ಲರು, ತಾಲೂಕಿನಲ್ಲಿ ಮತ್ತೆ ಶರಣ ಸಾಹಿತ್ಯ ಪರಿಷತ್ತು ಚಾಲನೆ ಸಿಕ್ಕಿದೆ, ಎಲ್ಲರೂ ಸೇರಿ ಅದನ್ನ ಬೆಳೆಸೋಣ ಎಂದರು. 

ತಾಲೂಕಾ ಶರಣ ಸಾಹಿತ್ಯ ಪರುಷತ್ತಿನ ನಿಕಟಪೂರ್ವ ಅದ್ಯಕ್ಷ ಮಲ್ಲಪ್ಪ ರಾಮಗೇರಿ ಅದ್ಯಕ್ಷತೆ ವಹಿಸಿ ಮಾತನಾಡಿ, ಸುಸಂಸ್ಕೃತ ಬದುಕಿನ ದಾರಿಯನ್ನ ತೋರಿಸುವ ಮಾರ್ಗವಾಗಿ ಈ ಶರಣ ಸಾಹಿತ್ಯ ಪರಿಷತ್ತು ಕಾರ್ಯ ಮಾಡುತ್ತಿದೆ, ಅಸಮಾನತೆ, ಜಾತಿಯತೆಯ ವ್ಯವಸ್ಥೆಯು ಇನ್ನೂ ಇದ್ದು, ಅದನ್ನ ಹೋಗಲಾಡಿಸಿ ಪರಿವರ್ತನೆಯ ಮಾರ್ಗವನ್ನ ಅನುಸರಿಸಿ ಶರಣರ ತತ್ವವನ್ನ ಪ್ರಚುರ ಪಡಿಸುವ ಮೂಲಕ ಸಮಾನತೆಯನ್ನ ತರುವ ಜವಾಬ್ದಾರಿಯನ್ನ ಹೊತ್ತು ತ್ಯಾಗ ಮನೋಭಾವನೆಯನ್ನ ಅರಿತು ನಡೆಯುವ ಕೆಲಸವನ್ನ ಈ ಪರಿಷತ್ತಿನಿಂದ ಮಾಡೋಣ ಎಂದರು. 

ಸಾನಿದ್ಯವನ್ನ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು, ನೂತನ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕದ ಅದ್ಯಕ್ಷ ಸಿ ಡಿ ಯತ್ನಳ್ಳಿ ಅವರು ಸೇವಾ ಸ್ವೀಕಾರ ಕಾರ್ಯಕ್ರಮದಲ್ಲಿ ನೂತನ ಅದ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ನಂತರ ಪದಾಧಿಕಾರಿಕಳಿಗೆ ಪ್ರಮಾಣ ಪತ್ರವನ್ನ ವಿತರಿಸಿದರು.ವಚನ ನಿಧಿ ವನಿತಾ ಸಂಘದ ಅದ್ಯಕ್ಷೆ ಡಾ. ಲತಾ ನಿಡಗುಂದಿ, ಫಕ್ಕೀರೇಶ ಮಾಸ್ತರ್ ಕೊಂಡಾಯಿ, ಜಿ ಎನ್ ಯಲಿಗಾರ, ಸಂಜನಾ ರಾಯ್ಕರ್, ಮಹಾಲಿಂಗಪ್ಪ ಹಡಪದ, ಪ್ರಭುಗೌಡ ತೆಂಬದಮನಿ, ಸಿ ಎನ್ ಕುಂಬಾರ, ವಿಶ್ವನಾಥ ಬಂಡಿವಡ್ಡರ, ಶಂಬು ಕೇರಿ, ರವಿ ಕಡಕೋಳ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸಾಹಿತ್ಯಾಭಿಮಾನಿಗಳು ಇದ್ದರು, ಶಿಕ್ಷಕರಾದ ರಮೇಶ ಹರಿಜನ ಸ್ವಾಗತಿಸಿದರು, ಮಹಾಂತೇಶ ನಾಯ್ಕೋಡಿ ಕಾರ್ಯಕ್ರಮ ನಿರ್ವಹಿಸಿದರು.