ಶಾಮನೂರು ನಿಧನ ಲಿಂಗಾಯತ ಸಮಾಜಕ್ಕೆ ತುಂಬಲಾರದ ನಷ್ಟ

ಶಾಮನೂರು ನಿಧನ ಲಿಂಗಾಯತ ಸಮಾಜಕ್ಕೆ ತುಂಬಲಾರದ ನಷ್ಟ  Shamanur's death is an irreparable loss to the Lingayat community


ಬೆಳಗಾವಿ 15: ಶೋಕ ಸಂದೇಶ ರಾಜ್ಯದ ಹಿರಿಯ ಮುತ್ಸದಿ ನಾಯಕರು, ಮಾಜಿ ಸಚಿವರು, ದಾವಣಗೆರೆಯ ಜನಪ್ರಿಯ ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ನಮ್ಮ ಸಮಾಜದ ಹಿರಿಯ ಚೇತನರಾಗಿದ್ದ ಶಾಮನೂರು ಶಿವಶಂಕರ​‍್ಪನವರು ಲಿಂಗೈಕ್ಯರಾಗಿದ್ದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಶ್ರೀಯುತರ ಲಿಂಗೈಕ್ಯರಾಗಿದ್ದರಿಂದ ನಮ್ಮ ನಾಡು ಓರ್ವ ಹಿರಿಯ ರಾಜಕೀಯ ಧುರಿಣರನ್ನು, ಸಮಾಜದ ಮುಖಂಡನ್ನು ಕಳೆದುಕೊಂಡಂತಾಗಿದೆ. ಶಿಕ್ಷಣ, ಅರೋಗ್ಯ, ರಾಜಕೀಯ ಮತ್ತು ಸಮಾಜ ಸೇವೆಯ ಮೂಲಕ ಸಮಾಜದ ಜನರ ಬದುಕಿಗೆ ಬೆಳಕಾಗಿದ್ದ ಶಾಮನೂರು ಶಿವಶಂಕರ​‍್ಪನವರ ಸೇವೆ, ಜನಪರ ಕಾಳಜಿ ಮತ್ತು ಸಾಧನೆಗಳು ಮುಂದಿನ ಪೀಳಿಗೆಗೆ ಮಾದರಿಯಾಗಿವೆ. 

 ಶ್ರೀಯುತರ ಅಗಲಿಕೆ ಅವರ ಕುಟುಂಬಕ್ಕೆ ಅದರಲ್ಲೂ ಲಿಂಗಾಯತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಬಸವಾದಿ ಶಿವಶರಣರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಕುಟುಂಬ ಸದಸ್ಯರಿಗೆ ಹಾಗೂ ನಾಡಿನ ಅವರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಭಾವಪೂರ್ಣ ಶ್ರದ್ಧಾಂಜಲಿ ಎಂದು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಶೋಕ ವ್ಯಕ್ತಪಡಿಸಿದ್ದಾರೆ.