ವಿದ್ಯಾರ್ಥಿಗಳ ವೈಜ್ಞಾನಿಕ ಸಂಶೋಧನೆಗೆ ಸಾಕ್ಷಿಯಾದ ವಿಜ್ಞಾನ ಮಾದರಿ ಪ್ರದರ್ಶನ
Science model exhibition that witnessed students' scientific research
ಕಾರವಾರ, ಫೆ.13 :- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರ ಇವರ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2026 ಅಂಗವಾಗಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೇಯನ್ನು ಆಯೋಜಿಸಲಾಯಿತು.
ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳು ವಿದ್ಯಾರ್ಥಿಗಳು ಭಾಗವಹಿಸಿ , ವೈವಿಧ್ಯಮಯ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದ್ದು, ಈ ಮಾದರಿಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ವೈಜ್ಞಾನಿಕ ಸಂಶೋಧನೆಯ ಜ್ಞಾನವನ್ನು ಪರಿಚಯಿಸಿತು. ಯಲ್ಲಾಪುರದ ಬಿಸ್ಕೋಡು ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪ್ರಜ್ವಲ್ ಪ್ರಕಾಶ್ ಭಟ್ ಮತ್ತು ಗಗನ ಗಾಂವಕರ್ ಅವರ ಪ್ರಶರ್ ಸ್ಟವ್ ಮಾದರಿಯಲ್ಲಿ, ಬಾಟಲಿಯಲ್ಲಿ ತುಂಬಿಸಿರುವ ಪೆಟ್ರೋಲ್‌ಗೆ ಸೈಕಲ್ ಪಂಪ್ ಮೂಲಕ ಗಾಳಿಯನ್ನು ಹಾಕಿದಾಗ, ಅದರಿಂದ ಉತ್ಪತ್ತಿಯಾಗುವ ಅನಿಲದಿಂದ ಗ್ಯಾಸ್ ಸ್ಟವ್ ಉರಿಯುವ ಮಾದರಿಯು ಆಕರ್ಷಕವಾಗಿತ್ತು. ಅಂಟಿ ಸ್ಲೀಪ್ ಆಲಾರಂ ಯಂತ್ರವು ವಾಹನವನ್ನು ಚಲಾಯಿಸುವಾಗ ಚಾಲಕ ನಿದ್ರೆಗೆ ಜಾರಿದ ಸಂದರ್ಭದಲ್ಲಿ ಆಲಾರಂ ಹೊಡೆದು ಎಚರಿಸುವ ಹಾಗೂ ವಾಹನವು ಚಲಿಸದಂತೆ ನಿಯಂತ್ರಿಸಿ, ಆಪಘಾತಗಳನ್ನು ತಡೆಗಟ್ಟಲು ಸಹಾಯಕವಾಗುವ ಮಾದರಿ,
ಅಲ್ಲದೇ ಭೂಕುಸಿತ ಎಚ್ಚರಿಕೆ ವ್ಯವಸ್ಥೆ, ವಿಪತ್ತು ನಿರ್ವಹಣಾ ವ್ಯವಸ್ಥೆ, ವಾತಾವರಣ ನೀರಿನ ಉತ್ಪಾದಕ, ಜಲ ಸಂರಕ್ಷಣೆ, ಆತ್ಮಹತ್ಯೆ ತಡೆಗಡುವ ಪ್ಯಾನ್, ವಿವಿಧೋದ್ದೇಶ ಕೃಷಿ ಯಂತ್ರ, ಗ್ಲುಕೋಸ್ ಪರೀಕ್ಷೆ ಯಂತ್ರ, ಕೃತಕ ಉಪಗ್ರಹಗಳು, ಅಪಘಾತದಿಂದ ವನ್ಯ ಜೀವಿ ರಕ್ಷಣೆ ಮಾಡುವ ಮಾದರಿ, ತ್ಯಾಜ್ಯ ವಸ್ತುಗಳಿಂದ ವಿದ್ಯುತ್‌ಯಾಗಿ ಪರಿವರ್ತಿಸುವ ಯಂತ್ರ, ಎತ್ತರವನ್ನು ಅಳೆಯುವ ಸಾಧನ, ಕ್ಲೀನ್ ಸಿಟಿ ಪ್ರಾಜೇಕ್ಟ್, ನಿರಂತರ ಜಲ ನಿರ್ವಹಣೆ ಯೋಜನೆ, ರಸ್ತೆ ಅಪಘಾತ ತಡೆಗಟ್ಟುವಿಕೆ ವ್ಯವಸ್ಥೆ, ಸ್ವಯಂ ಚಾಲಿತ ತೋಟ್ಟಿಲು, ಹೊಸ ನ್ಯೂಟೋನಿಯನ್ ದ್ರವ ಸ್ಪೀಡ್ ಬ್ರೇಕರ್, ಭೂಕಂಪ ಸೂಚಕ, ಹೈಪರ್ಲೂಫ್, ಆಹಾರ ಕಲಬೇರಿಕೆಗಳ ಪತ್ತೆ ಹಚ್ಚುವ ವಿಧಾನ, ಹೊಸ ವ್ಯಾಯಾಮ ಮಾದರಿ ಯಂತ್ರ. ಇಂತಹ ಹಲವು ಉಪಯುಕ್ತವಾದ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಕಾರ್ಯಕ್ರಮ ಉದ್ಘಾಟಿಸಿದರು, ಅಪರ ಜಿಲ್ಲಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ , ಪ್ರೊಬೆಷನರಿ ಐಎಎಸ್ ಅಧಿಕಾರಿ ಜುಫಿಶಾನ ಹಖ್, ಕೋಸ್ಟ್ ಗಾರ್ಡ ಕಮಾಂಡರ್ ಸಂಜಯ ಪಾಲ್ ಉಪಸ್ಥಿತರಿದ್ದರು. ಕುಮಟಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ಐ.ಕೆ.ನಾಯಕ ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ನಿರ್ಣಾಯಕರಾಗಿ ಮತ್ತು ಕಾರವಾರ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರು ಪ್ರಕಾಶ ಅಣ್ವೇಕರ ತೀರ್ುಗಾರರಾಗಿ ಆಗಮಿಸಿದ್ದರು. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ರೋಹನ್ ರಾಜೇಂದ್ರ ಜಿ ಭುಜ್ಲೆ ಸ್ವಾಗತಿಸಿದರು. ಶೈಕ್ಷಣಿಕ ಸಹಾಯಕಿ ಕವಿತಾ ಆರ್. ಮೇಸ್ತ ನಿರೂಪಿಸಿ ವಂದಿಸಿದರು. ಪ್ರದರ್ಶನದಲ್ಲಿ ಒಟ್ಟು 28 ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ 88 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಗೂ ವಿಜ್ಞಾನ ಕೇಂದ್ರದ ಅಧಿಕಾರಿಗಳು ಭಾಗವಹಿಸಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 