ಸತೀಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು- ಕತ್ತಿ ಹೇಳಿಕೆ ಹಾಸ್ಯಾಸ್ಪದ: ಸುನೀಲ ಸಂಕ
Satish Jarkiholi should resign from his ministerial post - Katti's statement is ridiculous: Sunil S
ಸತೀಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು- ಕತ್ತಿ ಹೇಳಿಕೆ ಹಾಸ್ಯಾಸ್ಪದ: ಸುನೀಲ ಸಂಕ
ಅಥಣಿ 05: ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯ ಫಲಿತಾಂಶದ ನಂತರ ರಮೇಶ ಕತ್ತಿ ಜಿಲ್ಲಾ ಉಸ್ತೂವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಮುಖಂಡ, ನ್ಯಾಯವಾದಿ ಸನೀಲ ಸಂಕ ಹೇಳಿದರು. ಅವರು ಅಥಣಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಕಳೆದ 30 ವರ್ಷಗಳಿಂದ ಒಂದೇ ಒಂದು ಮನೆತನದ ಕೈಲಿ ಈ ಸಹಕಾರ ಸಂಘದ ಹಿಡಿತ ಇರುವುದನ್ನು ವಿರೋಧಿಸಿ ಹುಕ್ಕೇರಿ ಕ್ಷೇತ್ರದ ಸಹಕಾರಿಗಳು ಸಚಿವ ಸತೀಶ ಜಾರಕಿಹೊಳಿ ಇವರನ್ನು ಸಂಪರ್ಕಿಸಿ ಆಡಳಿತ ಮಂಡಳಿಗೆ ಚುನಾವಣೆ ನಡೆಸಬೇಕು ಎಂದು ಒತ್ತಡ ಹೇರಿದ್ದರು. ಹೀಗಾಗಿಯೇ ಸತೀಶ ಜಾರಕಿಹೊಳಿ ಚುನಾವಣೆಗೆ ಮುಂದಾಗಿದ್ದರು ಎಂದ ಅವರು ರಮೇಶ ಕತ್ತಿ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಹೀನಾಯವಾಗಿ ಸೋತಿದ್ದನ್ನು, ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೇಟನ್ನೇ ನಿರಾಕರಣೆ ಮಾಡಿದ್ದನ್ನು ಹಾಗೂ ಇತ್ತೀಚಿಗೆ ಡಿಸಿಸಿ ಬ್ಯಾಂಕ ಅಧ್ಯಕ್ಷ ಸ್ಥಾನದಿಂದ ಆಡಳಿತ ಮಂಡಳಿ ಸದಸ್ಯರೇ ಕೆಳಗಿಳಿಸಿದ್ದನ್ನು ಅವರು ನೆನಪಿಸಿಕೊಳ್ಳಬೇಕು ಎಂದರು.
ಫಲಿತಾಂಶದ ನಂತರ ಮದ ಬಂದಂತೆ ಮಾತನಾಡುತ್ತಿರುವ ರಮೇಶ ಕತ್ತಿ ನಾನೊಬ್ಬಜಿಲ್ಲಾ ನಾಯಕ ಎಂದು ತಮ್ಮನ್ನು ತಾವು ಬಿಂಬಿಸಿಕೊಂಡು ನಮ್ಮದು ಮೂರನೇತಲೆ ಮಾರಿನ ರಾಜಕಾರಣ ಎಂದು ಅಹಂಕಾರದ ಹೇಳಿಕೆ ಕೊಡುತ್ತಿದ್ದಾರೆ ಅವರು ಮೂರನೇ ದರ್ಜೆಯ ರಾಜಕಾರಣಿಯಾಗಿದ್ದಾರೆ ಎಂದ ಅವರು ಸಚಿವ ಸತೀಶ ಜಾರಕಿಹೊಳಿ ಒಬ್ಬ ಪ್ರಬುದ್ಧ ಮತ್ತು ಚಾಣಾಕ್ಷ ರಾಜಕಾರಣಿಯಾಗಿದ್ದು, ಸಹಕಾರಿ ಸಂಘದ ಸದಸ್ಯರೇ ಚುನಾವಣೆ ಮಾಡಿಸಿ ಎಂದು ದುಂಬಾಲು ಬಿದ್ದಾಗ ಅನಿವಾರ್ಯವಾಗಿ ಚುನಾವಣೆಗೆ ಧುಮಿಕಿದ್ದಾರೆ ಮತ್ತುಚುನಾವಣೆ ಎಂದ ಮೇಲೆ ಸೋಲು, ಗೆಲುವು ಸಾಮಾನ್ಯ ಎಂದರು. ಇಂತಹ ಸಣ್ಣ ಚುನಾವಣೆಯ ಫಲಿತಾಂಶದಿಂದ ರಾಜ್ಯ ಅಥವಾ ಜಿಲ್ಲಾ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಇದೊಂದು ತಾಲೂಕಿಗೆ ಸೀಮಿತವಾದ ಸಹಕಾರ ಸಂಘ ಇಂತಹ ಸಂಘದ ಚುನಾವಣೆಯಲ್ಲಿ ಅವರ ವಿರುದ್ಧ ಫಲಿತಾಂಶ ಬಂದಿದೆ ಇದನ್ನು ಅವರೂ ಒಪ್ಪುತ್ತಾರೆ ಆದರೆ ಸಚಿವ ಸ್ಥಾನಕ್ಕೆ ರಾಜಿನಾಮೆ ಕೇಳುವ ರಮೇಶಕತ್ತಿಯವರ ಈ ಹೇಳಿಕೆ ಹಾಸ್ಯಾಸ್ಪದ ಎಂದರು. ಕಾಂಗ್ರೆಸ್ ಮುಖಂಡ ಅನೀಲ ಸುಣಧೋಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 