ಯರಗಟ್ಟಿಗೆ ಆಗಮಿಸಿದ ಸಂಗೊಳ್ಳಿ ರಾಯಣ್ಣನ ಜ್ಯೋತಿ
Sangolli Rayanna's Jyoti arrives at Yaragati
ಯರಗಟ್ಟಿ 10: ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ 12-13 ರಂದು ನಡೆಯಲಿರುವ ವೀರಯೋಧ ಹುತಾತ್ಮ ಸಂಗೊಳ್ಳಿ ರಾಯಣ್ಣನ ಉತ್ಸವಕ್ಕೆ ಜಿಲ್ಲೆಯ ಜನಸ್ತೋಮವನ್ನು ಆಹ್ವಾನಿಸಲು ಮತ್ತು ಜನರಲ್ಲಿ ರಾಯಣ್ಣನ ಬಗ್ಗೆ ಅರಿವು ಮೂಡಿಸುವ ಸಂಬಂಧದಲ್ಲಿ ಸಂಗೊಳ್ಳಿ ರಾಯಣ್ಣನ ಜ್ಯೋತಿ ಯರಗಟ್ಟಿಗೆ ಆಗಮಿಸಿತು.
ಪಟ್ಟಣದ ಸಂಗೋಳ್ಳಿ ರಾಯಣ್ಣ ವತ್ತದ ಬಳಿ ಆಗಮಿಸಿದ ಜ್ಯೋತಿಯನ್ನು ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಕುರುಬರ ಸಂಘದ ಉಪಸ್ಥಿತಿಯಲ್ಲಿ ಜ್ಯೋತಿಯನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಮಾತನಾಡಿ, ಸಂಗೊಳ್ಳಿ ರಾಯಣ್ಣ ಒಬ್ಬ ವೀರಯೋಧನಾಗಿದ್ದಲ್ಲದೆ ಹಾನ ದೇಶ ಭಕ್ತನಾಗಿ ಕಿತ್ತೂರಿನ ಅಳಿವು ಉಳಿವಿಗಾಗಿ ಸದಾ ಸನ್ನದನಾಗಿರುತಿದ್ದ ಅವನ ದೇಶ ಪ್ರೇಮವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳಿವಡಿಸಿಕೊಳ್ಳುವಂತೆ ತಿಳಿಸಿದರು.ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮತ್ತು ಸುಮಂಗಲೆಯರ ಆರತಿಯೊಂದಿಗೆ ಸಂಚರಸಿ ರಾಯಬಾಗ ತಾಲೂಕಿಗೆ ಪ್ರಯಾಣ ಬೆಳೆಸಿತು.
ಈ ವೇಳೆ ಪ.ಪಂ ಹನಮಂತ ಹಾರೂಗೊಪ್ಪ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ವಿಠ್ಠಲಗೌಡ ದೇವರಡ್ಡಿ, ಪ್ರಕಾಶ ವಾಲಿ, ಸಿದ್ದಾರೂಡ ರೇಬ್ಬನ್ನವರ, ಮುದುಕಪ್ಪ ತಡಸಲೂರ, ಮಹಾದೇವ ಮುರಗೋಡ, ಆರ್. ಕೆ. ಪಟಾತ, ಬಸವರಾಜ ದಿಡಗನ್ನವರ, ಈರಣ್ಣಾ ಕಿಲಾರಿ, ಪ್ರಕಾಶ ಸೂಣದೋಳಿ, ಲಕ್ಕಪ್ಪ ಸನ್ನಿಂಗವನ್ನರ, ವಿಠ್ಠಲ ಹಾರೂಗೋಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 