ಎಸ್.ಎಸ್.ಪಾಟೀಲ ಸಹಕಾರ ಚಳುವಳಿಯ ಪಿತಾಮಹ: ಹೆಗ್ಗನ್ನವರ
S.S. Patil is the father of the cooperative movement: Heggan's
ಸವದತ್ತಿ 01: ಭಾರತದಲ್ಲಿ ಸಹಕಾರ ಸಂಘ ಸ್ಥಾಪಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. 1904ರಲ್ಲಿ ಇಂದಿನ ಗದಗ ಜಿಲ್ಲೆಯ ಕಣಗಿನಹಾಳದಲ್ಲಿ ಎಸ್.ಎಸ್.ಪಾಟೀಲರು ಸಹಕಾರಿ ಕೃಷಿ ಪತ್ತಿನ ಸಂಘವನ್ನು ಸ್ಥಾಪಿಸಿದರು. ಹೀಗಾಗಿ ಎಸ್.ಎಸ್.ಪಾಟೀಲ ಅವರನ್ನು ಸಹಕಾರ ಚಳುವಳಿಯ ಪಿತಾಮಹ ಎಂದು ಕರೆಯಲಾಗುತ್ತದೆ ಎಂದು ಕರ್ನಾಟಕ ಲೋಕ ಸೇವಾ ಆಯೋಗದ ನಿವೃತ್ತ ಸದಸ್ಯ ಡಾ.ಎಮ್.ಬಿ.ಹೆಗ್ಗನ್ನವರ ಹೇಳಿದರು.
ಇಲ್ಲಿನ ಬೆಳ್ಳುಬ್ಬಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸವದತ್ತಿಯ ಕೆ.ಎಲ್.ಇ.ಸಂಸ್ಥೆಯ ನೌಕರರ ಸಹಕಾರಿ ಪತ್ತಿನ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಹಕಾರಿ ಕೃಷಿ ಪತ್ತಿನ ಸಂಘದ ಮೂಲಕ ಆರ್ಥಿಕವಾಗಿ ಸಂಕಷ್ಟದಲ್ಲಿದ್ದವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುವ ಉಪಯುಕ್ತ ಯೋಜನೆಯನ್ನು ಎಸ್.ಎಸ್.ಪಾಟೀಲರು ಮಾಡಿದ್ದು ದೊಡ್ಡ ಸಾಧನೆ. ಸಾಲ ಪಡೆದವರು ಸುಲಭ ಕಂತುಗಳಲ್ಲಿ ಮರು ಪಾವತಿ ಮಾಡಲು ಅನುಕೂಲ ಕಲ್ಪಿಸುವದರ ಮೂಲಕ ಬದುಕಿಗೆ ಆಸರೆಯಾಗುವ ಮಾರ್ಗವನ್ನು ನಿರ್ಮಿಸಿದರು ಎಂದರು.
ಕೆಲವು ಸಹಕಾರಿ ಸಂಘಗಳು ಕೆಲವು ವರ್ಷ ಕೆಲಸ ಮಾಡಿ ನಂತರ ಇಲ್ಲವಾಗುವ ಸಂದರ್ಭಗಳೇ ಜಾಸ್ತಿ. ಇಂತಹ ಸಂದರ್ಭದಲ್ಲಿ ಸವದತ್ತಿಯ ಕೆ.ಎಲ್.ಇ.ಸಂಸ್ಥೆಯ ನೌಕರರ ಸಹಕಾರಿ ಪತ್ತಿನ ಸಂಘವು 1975ರಲ್ಲಿ ಪ್ರಾರಂಭವಾಗಿ 2025ನೇ ಇಸವಿಯವರೆಗೆ ಕಾರ್ಯನಿರ್ವಹಿಸುತ್ತ 50 ವಸಂತಗಳನ್ನು ಪೂರೈಸಿ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವುದು ದೊಡ್ಡ ಸಾಧನೆ. ಇದು ಎಲ್ಲ ಸಹಕಾರಿ ಪತ್ತಿನ ಸಂಘಗಳಿಗೆ ಮಾದರಿ ಎಂದರು.
ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ವಿರೂಪಾಕ್ಷ ಮಾಮನಿ ಮಾತನಾಡಿ ಸಹಕಾರಿ ಸಂಘಗಳು ನೌಕರರ ಉಳಿತಾಯ ಮತ್ತು ಆರ್ಥಿಕ ಭದ್ರತೆಗೆ ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಡಾ.ಎಮ್.ಬಿ.ಹೆಗ್ಗನ್ನವರ, ವಿರೂಪಾಕ್ಷ ಮಾಮನಿ ಮತ್ತು ನಿಕಟಪೂರ್ವ ಅಧ್ಯಕ್ಷ ಡಿ.ಎಸ್.ಡಿಗ್ಗಿಮಠ ಹಾಗೂ ಸಂಘದ ಸ್ಥಾಪಕ ಸದಸ್ಯರನ್ನು ಸನ್ಮಾನಿಲಾಯಿತು.ಈ ವೇಳೆ ಡಾ.ಎನ್.ಆರ್.ಸವತೀಕರ, ಪ್ರೊ.ಕೆ.ರಾಮರೆಡ್ಡಿ, ಬಿ.ಎಮ್.ಕೊಕಟನೂರ, ಬಿ.ಅಯ್.ಗಡೆಕಾರ, ಎಸ್.ಬಿ.ಕಿಲ್ಲೆದಾರ, ಡಾ.ಎಸ್.ಸಿ.ಮಠಪತಿ, ಶಿವಯೋಗೆಪ್ಪ, ಬಿ.ವಿ.ಚಿಚಗಂಡಿ, ಎಸ್.ಎಸ್.ಪಾಟೀಲ್, ಮತ್ತು ನಿವೃತ್ತ ಸದಸ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 