ಎಸ್. ಕೆ ಪತ್ತಾರ ಅವರ ಚತ್ರಕಲಾ ಪ್ರದರ್ಶನ ಉದ್ಘಾಟಿನೆ: ಡಾ. ಲೋಹಿತ ನಾಯಕರ
S. K. Pattara's art exhibition inaugurated by Dr. Lohit Nayak
ಎಸ್. ಕೆ ಪತ್ತಾರ ಅವರ ಚತ್ರಕಲಾ ಪ್ರದರ್ಶನ ಉದ್ಘಾಟಿನೆ: ಡಾ. ಲೋಹಿತ ನಾಯಕರ
ಧಾರವಾಡ 27 : ಅಮೂರ್ತ ಕಲೆ ಎನ್ನುವುದು ಬಣ್ಣಗಳ ಹಾಗೂ ಗೆರೆಗಳ ಸಂಯೋಜನೆಯಾಗಿದೆ. ಜಗತ್ತಿನ ಬದಲಾವಣೆಯ ಸಂಕೇತವಾಗಿ ಚಿತ್ರಕಲೆಗಳ ಬಳಕೆ ಪ್ರಾಚೀನ ಕಾಲದಿಂದಲೂ ನಡೆದುಬಂದಿದೆ ಎಂದು ಚಿತ್ರಕಲಾವಿದ ಹಾಗೂ ಸಾಹಿತಿ ಡಾ. ಲೋಹಿತ ನಾಯಕರ ಹೇಳಿದರು.ಅವರು ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಎಸ್. ಕೆ ಪತ್ತಾರ ಅವರ ಚತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಅಬ್‌ಸ್ಟ್ಯಾಕ್ ಅಥವಾ ಅಮೂರ್ತ ಕಲೆಯಲ್ಲಿ ಕಲಾವಿದನ ಅಂತರಂಗದ ಭಾವನೆಗಳು ಹೊರಹೊಮ್ಮಿ ಒಂದು ಚಿತ್ರ ಕಲೆಯ ರೂಪವನ್ನು ಪಡೆದುಕೊಳ್ಳುತ್ತವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅತಿಥಿಗಳಾಗಿದ್ದ ಡಿ. ಎಂ. ಬಡಿಗೇರ ಅವರು, ಅಮೂರ್ತ ಚಿತ್ರಕಲೆಯಲ್ಲಿ ನೈಜರೂಪವನ್ನು ಸರಳೀಕೃತಗೊಳಿಸುವ ಅಗಾಧ ಶಕ್ತಿ ಚಿತ್ರ ಕಲಾವಿದನಲ್ಲಿ ಇರುತ್ತದೆ. ಅಂತಹ ಶಕ್ತಿಯನ್ನು ಪಡೆದುಕೊಂಡಿರುವ ಎಸ್. ಕೆ. ಪತ್ತಾರ ಅವರ ಚಿತ್ರಕಲಾ ಸಾಮರ್ಥ್ಯ ಅಗಾಧವಾದದ್ದು ಎಂದರು.
ಹಿರಿಯ ಕಲಾವಿದ ಬಿ. ಮಾರುತಿ ಮಾತನಾಡಿ, ಧಾರವಾಡದಲ್ಲಿ ಚಿತ್ರಕಲಾವಿದರಿಗಾಗಿ ತಾವು ರಚಿಸಿದ ಚಿತ್ರಕಲೆಯನ್ನು ಪ್ರದರ್ಶನ ಮಾಡುವುದಕ್ಕಾಗಿ ವಿದ್ಯಾವರ್ಧಕ ಸಂಘ ಶ್ರೇಷ್ಠವಾದ ಚಿತ್ರಕಲಾ ಪ್ರದರ್ಶನ ಗ್ಯಾಲರಿಯನ್ನು ನಿರ್ಮಿಸಿಕೊಟ್ಟದ್ದು ಅಭಿನಂದನೀಯ. ಪ್ರತಿ ತಿಂಗಳು ಒಬ್ಬ ಕಲಾವಿದನ ಚಿತ್ರಕಲಾ ಪ್ರದರ್ಶನ ವ್ಯವಸ್ಥೆಯನ್ನು ಏರಿ್ಡಸುವುದರ ಮೂಲಕ ಚಿತ್ರಕಲಾವಿದರ ಪ್ರತಿಭೆಗೆ ಅವಕಾಶ ಕಲ್ಪಿಸಿಕೊಡುತ್ತಿದೆ.
ಕಲಾವಿದ ಎಸ್. ಕೆ ಪತ್ತಾರ ಮಾತನಾಡಿ, ತಮ್ಮ ಚಿತ್ರಕಲೆಯ ಅನುಭವ ಹಂಚಿಕೊಂಡು ಸಂಘವು ಚಿತ್ರಕಲಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.ವೀರಣ್ಣ ಒಡ್ಡೀನ ಸ್ವಾಗತಿಸಿರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು ಗುರು ಹಿರೇಮಠ ವಂದಿಸಿದರು. ಡಾ. ಜಿನದತ್ತ ಅ. ಹಡಗಲಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಹಿರೇಮಠ ಮತ್ತು ಕಲಾವಿದ ಎಂ. ಆರ್. ಬಾಳಿಕಾಯಿ, ಡಾ. ಬಿ.ಎಚ್. ಕುರಿಯವರ, ಎಸ್.ಎಂ. ಲೋಹಾರ, ದೇವಗೌಡ ಮಲಗೌಡನವರ, ಪಿ. ಎಚ್. ನೀರಲಕೇರಿ, ವಿರುಪಾಕ್ಷ ಬಡಿಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 