ಮಾನ್ಯ ಡಾ. ಪ್ರಭಾಕರ ಕೋರೆ ಅವರ ಜನ್ಮದಿನದ ನಿಮಿತ್ತವಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ಬೃಹತ್ ಆರೊಗ್ಯ ತಪಾಸಣಾ ಶೀಬಿರದ ವರದಿ,

ಮಾನ್ಯ ಡಾ. ಪ್ರಭಾಕರ ಕೋರೆ ಅವರ ಜನ್ಮದಿನದ ನಿಮಿತ್ತವಾಗಿ ಹಮ್ಮಿಕೊಳ್ಳಲಾಗಿದ್ದ  ಉಚಿತ ಬೃಹತ್ ಆರೊಗ್ಯ ತಪಾಸಣಾ ಶೀಬಿರದ ವರದಿ, Report on the free mass health check-up camp organized on the occasion of the birthday of Hon'ble D

ಮಾನ್ಯ ಡಾ. ಪ್ರಭಾಕರ ಕೋರೆ ಅವರ ಜನ್ಮದಿನದ ನಿಮಿತ್ತವಾಗಿ ಹಮ್ಮಿಕೊಳ್ಳಲಾಗಿದ್ದ  ಉಚಿತ ಬೃಹತ್ ಆರೊಗ್ಯ ತಪಾಸಣಾ ಶೀಬಿರದ ವರದಿ, 

ಬೆಳಗಾವಿ, 02 ; ಬೆಳಗಾವಿಯನ್ನು ಜಗತ್ತಿನೆಲ್ಲೆಡೆ ಗುರುತಿಸುವಂತೆ ಮಾಡಿದ ಡಾ. ಪ್ರಭಾಕರ ಕೋರೆ ಅವರ ಕೊಡುಗೆ ಅಪ್ರತಿಮವಾದುದು ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಶಾಂತ ದೇಸಾಯಿ ಮಾತನಾಡುತ್ತಿದ್ದರು. ಅವರು ನಿನ್ನೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ನಡೆದ ಬೃಹತ್ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡುತ್ತ ಮಾತನಾಡುತ್ತಿದ್ದರು. ಡಾ. ಪ್ರಭಾಕರ ಕೋರೆ ಅವರು ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದಾಗಿನಿಂದ ಇಲ್ಲಿಯವರೆಗೆ ಕೆ ಎಲ್ ಇ ಸಂಸ್ಥೆಯು ಜಗತ್ತಿನೆಲ್ಲೆಡೆ ತನ್ನ ಕೀರ್ತಿಯ ಉತ್ತುಂಗಕ್ಕೆರುತ್ತಲೇ ಇದೆ. ಶಿಕ್ಷಣ ಆರೋಗ್ಯ ಕ್ಷೇತ್ರಗಳಲ್ಲಿ  ಇಂದು ಕೆ ಎಲ್ ಇ ಸಂಸ್ಥೆಯ ಅಭ್ಯುದಯಕ್ಕಾಗಿ ಸದಾ ಚಿಂತಿಸುವ ಡಾ. ಫ್ರಭಾಕರ ಕೋರೆ ಅವರಿಗೆ ಆ ದೇವರು ಸದಾ ಬೆನ್ನುಲುಬಾಗಿರಲಿ ಎಂದು ಶುಭ ಹಾರೈಸಿದರು.  

ಈ ಸಮಯದಲ್ಲಿ ಉಪಸ್ಥಿತರಿದ್ದ ಆಸ್ಪತ್ರೆಯ ವೈದ್ಯಕೀಯ ನೀರೀಕ್ಷಕರಾದ ಡಾ. ಆರ್ ಜಿ ನೆಲವಿಗಿ ಅವರು ಮಾತನಾಡುತ್ತ ಮಾನ್ಯ ಡಾ. ಪ್ರಭಾಕರ ಕೋರೆ ಅವರು ಒಬ್ಬ ಅಸಾಮಾನ್ಯ ವ್ಯಕ್ತಿತ್ವ. ಅವರ ದೂರಾಲೋಚನೆ, ಮತ್ಸದ್ದಿತನಗಳು ನಮ್ಮ ಕೆ ಎಲ್ ಇ ಸಂಸ್ಥೆಯ ಏಳಿಗೆಗೆ ಕಾರಣವಾಗಿದೆ. ಅವರ 78ನೇ ಹುಟ್ಟುಹಬ್ಬದಾಚರಣೆಯ ಅಂಗವಾಗಿ ನಿನ್ನೆ ನಮ್ಮ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಆವರಣದಲ್ಲಿ ಉಚಿತವಾಗಿ ಮೆಗಾ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದ ಅಂಗವಾಗಿ ನೋಂದನಿ ಉಚಿತವಾಗಿ ಮಾಡಲಾಗಿದೆ. 540 ನಾಗರಿಕರಿಗೆ ಉಚಿತವಾಗಿ ನೋಂದನಿ ಮಾಡಿಕೊಂಡು ಉಚಿತವಾಗಿ ಮಧುಮೇಹ ತಪಾಸಣೆ, ಇ ಸಿ ಜಿ, ಎಲುಬಿನ ಸಾಂದ್ರತೆ ತಪಾಸಣೆ, ಆಯ್ದ ಮಹಿಳಾ ರೋಗಿಗಳಿಗೆ ಗರ್ಭಾಶಯ ಕ್ಯಾನ್ಸರ್ ನ ತಪಾಸಣೆ ಮಾಡಲಾಯಿತು. ಅಲ್ಲದೇ ಅಭಿಮಾನದ ಸಂಕೇತವಾಗಿ 22 ಜನರು ರಕ್ತದಾನವನ್ನು ಮಾಡಿದರು.  ಅಲ್ಲದೇ ಈ ಶುಭ ಸಂದರ್ಭದಲ್ಲಿ  ಗರ್ಲಗುಂಜಿ, ಮಾಡಿಗುಂಜಿ, ಬೈಲೂರ ಗ್ರಾಮ ಪಂಚಾಯತಿಯ ಸದಸ್ಯರುಗಳು ಗ್ರಾಮಗಳ ನಾಗರಿಕರ ಆರೋಗ್ಯ ಹಿತದೃಷ್ಟಿಯನ್ನು ಕಾಯುವದಕ್ಕೆ ಗ್ರಾಮಗಳಿಗೆ ವಿಶೇಷ ಸವಲತ್ತುಗಳನ್ನು ನೀಡಬೇಕೆಂದು ನಿವೇದಿಸಿದರು. ಇದಕ್ಕೆ ಮನ್ನಣೆ ನೀಡುತ್ತ ನಮ್ಮ ಆಡಳಿತ ಮಂಡಳಿಯು ಈ ಗ್ರಾಮಗಳಿಂದ ಬರುವ ನಾಗರಿಕರಿಗೆ ಉಚಿತವಾಗಿ ನೋಂದಣಿ, ನುರಿತ ವೈದ್ಯರೊಂದಿಗೆ ಸಂದರ್ಶನ ಉಚಿತ ಹಾಗೂ ಚಿಕಿತ್ಸಾ ವೆಚ್ಚದಲ್ಲಿ ತಕ್ಕಮಟ್ಟದ ರಿಯಾಯತಿಯನ್ನು ಘೋಷಿಸಿದೆ ಎಂದು ಸಂತಸ ವ್ಯಕ್ತ ಪಡಿಸಿದರು.  

ಕಾರ್ಯಕ್ರಮದಲ್ಲಿ ವಡಗಾವ, ಅನಗೋಳ, ಎಳ್ಳೂರ, ಸುಳಗಾ, ಬಸ್ತವಾಡ, ಬೈಲೂರ, ಗರ್ಲಗುಂಜಿ, ನಿಟ್ಟೂರ, ಬರಗಾವ, ತೋಪಿನಕಟ್ಟಿ, ಹಲಗಾ, ಸಂತಿಬಸ್ತವಾಡ, ಉಚವಡೆ ಹಾಗೂ ಸುತ್ತಮುತ್ತಲ ಹಳ್ಳಿಗಳ ಪಂಚಾಯತಿಯ ಸದಸ್ಯರು ನಾಗರಿಕರು ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.