ಸೆ. 1ರಂದು ರೆಡ್ಡಿ ಸಮಾಜದ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನೆ: ಟ್ರೀಪಾರ್ಕ ಲೋಕಾರೆ​‍್ಣ

ಸೆ. 1ರಂದು ರೆಡ್ಡಿ ಸಮಾಜದ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನೆ: ಟ್ರೀಪಾರ್ಕ ಲೋಕಾರೆ​‍್ಣ Reddy Samaj Bank's new building to be inaugurated on Sept. 1: Treeparka Lokarena

ಸೆ. 1ರಂದು ರೆಡ್ಡಿ ಸಮಾಜದ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನೆ: ಟ್ರೀಪಾರ್ಕ ಲೋಕಾರೆ​‍್ಣ  

ಮುದ್ದೇಬಿಹಾಳ: ಸಪ್ಟೆಂಬರ 1 ಸೋಮವಾರದಂದು ಪಟ್ಟಣದ ಎಪಿಎಂಸಿ ಬಡಾವಣೆಯಲ್ಲಿರುವ ರೆಡ್ಡಿ ಸಮಾಜದ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನೆ ಹಾಗೂ ಪಟ್ಟಣದ ಬಿದರಕುಂದಿ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ಉದ್ಯಾನವನ ಟ್ರೀಪಾರ್ಕ ಲೋಕಾರೆ​‍್ಣ ಕಾರ್ಯಕ್ರಮ ಯಶಸಿಗೊಳಿಸಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು.  

ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ತಮ್ಮ ಗ್ರಹ ಕಚೇರಿಯಲ್ಲಿ ತಾಲೂಕಿನ ಹಾಗೂ ಪಟ್ಟಣದ ವಿವಿಧ ಸಂಘ ಸಂಸ್ಥೆಯ ಮುಖಂಡರುಗಳು, ಗಣ್ಯರ, ವಕೀಲ ಸಂಘದವರ ಸಭೆ ನಡೆಸಿ ಮಾತನಾಡಿದ ಅವರು. ಮೊದಲಿನಿಂದಲೂ ಮುದ್ದೇಬಿಹಾಳ ಪಟ್ಟಣದಲ್ಲಿ ಸುಸಜ್ಜಿತ ಹಾಗೂ ಅತ್ಯಾಕರ್ಷಕವುಳ್ಳ ಉದ್ಯಾನವನ ನಿರ್ಮಿಸಬೇಕು ಎಂಬ ಕನಸು ಕಂಡಿದ್ದೇ ಅದರಂತೆ ಸಧ್ಯ ಬಿದರಕುಂದಿ ವ್ಯಾಕ್ತಿಯ ಸುಮಾರು 35 ಎಕರೆ ಸರಕಾರಿ ಜಾಗೆಯಲ್ಲಿ ಸುಂದರವಾದ ಟ್ರೀಪಾರ್ಕ ನಿರ್ಮಾಣಗೊಳ್ಳುತ್ತಿದೆ. ಕಾಮಗಾರಿ ಬಹುತೇಕ ಸಂಪೂರ್ಣ ಮುಕ್ತಾಯಗೊಂಡಿದೆ ಕಾರಣ ಅರಣ್ಯ ಸಚೀವ ಈಶ್ವರ ಖಂಡ್ರೇ ಅವರು ಆಗಮಿಸಿ ಉದ್ಘಾಟಿಸಿಲಿದ್ದಾರೆ. ಅದರಂತೆ ರೆಡ್ಡಿ ಸಮಾಜದ ಬ್ಯಾಂಕು ಹಲವು ವರ್ಷಗಳಿಂದ ಸಮಾಜ ಮೂಖಿಯಾಗಿ ಹಣಕಾಸಿವ ವೇಲಾದೇವಿ ನಡೆಸುವ ಮೂಲಕ ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರ ಜನಸ್ನೇಹಿಯಾಗಿ ಬೆಳೆದುಬಂದಿದೆ, ಆದರೇ ಬ್ಯಾಂಕಿನ ಸ್ವಂತ ಕಟ್ಟಡವಿಲ್ಲದೇ ಇಷ್ಟು ದಿನ ಬಾಡಿಗೆ ಕಟ್ಟಡದಲ್ಲಿ ಸೇವೆ ಪ್ರಾರಂಭಸಲಾಗಿತ್ತು. ಸಧ್ಯ ಎಪಿಎಂಸಿ ಬಡಾವಣೆಯಲ್ಲಿ ರೆಡ್ಡಿ ಬ್ಯಾಂಕಿ ಸ್ವಂತ ಕಟ್ಟಡ ನಿರ್ಮಾಣಗೊಂಡಿದೆ ಕಾರಣ ಕಾನೂನು ಸಂಸದಿಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚೀವ ಎಂಬ ಪಾಟೀಲ, ಹಾಗೂ ಸಕ್ಕರೆ ಸಚೀವ ಶಿವಾನಂದ ಪಾಟೀಲ ಸೇತಿದಂತೆ ಅನೇಕ ರಾಜಕೀಯ ಮುಖಂಡರು ಬಾಗವಹಿಸಲಿದ್ದಾರೆ. ಈ ದಿಶೆಯಲ್ಲಿ ಪಟ್ಟಣದ ಎಲ್ಲ ವ್ಯಾಪಾರಸ್ಥರು, ಗಣ್ಯರು, ಸಾಹಿತಿಗಳು, ವಿವಿದ ಸಂಘ ಸಂಸ್ಥೆಗಳ ಮುಖ್ಯಸ್ಥರು ಮಹಿಳಾ ಮುಖಂಡರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು. 

ಅರಣ್ಯ ಸಚಿವ ಈಶ್ವರ ಖಂಡ್ರೇ ಅವರ ಸ, 1ರಂದು ಬೆಳಿಗ್ಗೆ 10.30ಕ್ಕೆ ಟ್ರೀ ಪಾರ್ಕ ಲೋಕಾರೆ​‍್ಣಗೊಳಿಸಿದ ಬಳಿಕ ರೆಡ್ಡಿ ಬ್ಯಾಂಕಿನ ಉದ್ಘಾಟನಾ ಕಾರ್ಯಕ್ರಮವನ್ನು ಮುಗಿಸಿ ಬಳಿಕ ಮಳೆಯ ಕಾರಣ ಕಾರ್ಯಕ್ರಮವನ್ನು ಆಲಮಟ್ಟಿ ರಸ್ತೆ ಮಾರ್ಗದಲ್ಲಿರುವ ಮದರಿ ಕಲ್ಯಾಣ ಮಂಟಪದಲ್ಲಿ ನಡೆಸಲು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಉಪಹಾರ ಊಟದ ವ್ಯವಸ್ಥೆ ಕೈಗೊಳ್ಳಲು ಮುಖಂಡರ ನೇತೃತ್ವದಲ್ಲಿ ತೀರ್ಮಾನಿಸಲಾಯಿತು. 

ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ ಬಿ ನಾವದಗಿ, ಪಿಎಲ್ ಡಿ ಬ್ಯಾಂಕಿನ ಅಧ್ಯಕ್ಷ ಬಿ ಕೆ ಬಿರಾದಾರ,  ಗ್ಯಾರಂಟಿ ಸಮೀತಿಯ ತಾಲೂಕಾ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ,   ಕರ್ನಾಟಕ ಕೋ ಆಪ್ ಬ್ಯಾಂಕಿನ ಅಧ್ಯಕ್ಷ  ಸಿ ಎಲ್ ಬಿರಾದಾರ, ಅಬ್ಧೂಲಗಫೂರಸಾಬ ಮಕಾನಂದಾರ, ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ತಾಲೂಕಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್ ಎಸ್ ಮಾಲಗತ್ತಿ, ಸತೀಶ ಓಸ್ವಾಲ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರಾನಾಳ, ರಾಜುಗೌಡ ಕೊಂಗಿ, ವೆಂಕನಗೌಡ ಪಾಟೀಲ, ಅಮರೇಶ ಗೂಳಿ, ಸಂಗನಗೌಡ ಬಿರಾದಾರ,(ಜಿಟಿಸಿ), ಶರಣು ಸಜ್ಜನ, ಗಣೇಶ ಅನ್ನಗೋನಿ, ಬಿ ಆರ್ ನಾಡಗೌಡ,ಸುರೇಶಗೌಡ ಪಾಟೀಲ, ಕಾಮರಾಜ ಬಿರಾದಾರ,  ಗೋಪಿ ಮಡಿವಾಳರ,ನ್ಯಾಯವಾದಿ ಬಿ ಎಂ ಮುಂದಿನಮನಿ, ಎಂ ಎಚ್ ಹಾಲಣ್ಣವರ ಸೇರಿದಂತೆ ಹಲವರು ಇದ್ದರು.