ದೇಶದ ಸಂಸ್ಕೃತಿ ಮತ್ತು ಸಂಸ್ಕಾರ ಬಿಂಬಿಸುವ ರಾಣಿಬೆನ್ನೂರಿನ ಗಣೇಶ್ಯೋತ್ಸವ

ದೇಶದ ಸಂಸ್ಕೃತಿ ಮತ್ತು ಸಂಸ್ಕಾರ ಬಿಂಬಿಸುವ ರಾಣಿಬೆನ್ನೂರಿನ ಗಣೇಶ್ಯೋತ್ಸವ Ranibennur's Ganesh Festival reflects the country's culture and traditions

ದೇಶದ ಸಂಸ್ಕೃತಿ ಮತ್ತು ಸಂಸ್ಕಾರ ಬಿಂಬಿಸುವ ರಾಣಿಬೆನ್ನೂರಿನ ಗಣೇಶ್ಯೋತ್ಸವ

ರಾಣಿಬೆನ್ನೂರು 02:  ದೇಶದ ಸಂಸ್ಕೃತಿ ಮತ್ತು ಸಂಸ್ಕಾರ ಬಿಂಬಿಸುವ ಸುಮಾರು 17 ವರ್ಷಗಳಿಂದ ದೇಶದ ಇತಿಹಾಸ ಪರಿಚಯಿಸುವ ಮತ್ತು ದೇಶದ ಘನತೆಯನ್ನು ಹೆಚ್ಚಿಸುವ ಮಹತ್ತರವಾದ ಪ್ರದರ್ಶನಗಳನ್ನು ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯು ರಾಣಿಬೆನ್ನೂರು ಕಾ ರಾಜಾ ಗಣೇಶ್ಯೋತ್ಸವ ತನ್ನದೆಯಾದ ಛಾಪು ಮೂಡಿಸುತ್ತಾ ಬಂದಿದೆ ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮೀಜಿ ಪ್ರಕಾಶಾನಂದ ಜೀ ಮಹಾರಾಜ್ ಹೇಳಿದರು.  

ಇಲ್ಲಿನ ನಗರಸಭೆಯ ಕ್ರೀಡಾಂಗಣದಲ್ಲಿ ವಂದೇ ಮಾತರಂ ಸೇವಾ ಸಂಸ್ಥೆ ಪ್ರತಿಷ್ಠಾಪಿಸಿರುವ 17ನೇ ವರ್ಷದ ರಾಣಿಬೆನ್ನೂರು ಕಾ ರಾಜಾ ಗಣೇಶ್ಯೋತ್ಸವದ ಅಂಗವಾಗಿ ಶತಮಾನದ ಸಂಘ ಸೂರ್ಯ ಸಾರ್ವಜನಿಕ ಪ್ರದರ್ಶನ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿಯೇ ​‍್ರ​‍್ರಥಮವಾಗಿ ಆರ್‌.ಎಸ್‌.ಎಸ್ ಸಂಘಟನೆಗಳ ಸ್ಥಾಪನೆ ಹಾಗೂ ಅದರ ಸೇವಾ ಕಾರ್ಯಗಳು ಸ್ಥಾಪಕರ ವಿವರಗಳನ್ನು ಒಳಗೊಂಡಿರುವ ಪರಿಚಯವನ್ನು ಪ್ರಕಾಶ ಬುರಡಿಕಟ್ಟಿ ಅವರ ಶ್ರಮದ ಫಲವು ಇದಾಗಿದೆ, ಪ್ರಸ್ತುತ ಇಂತಹ ಪ್ರದರ್ಶನವು ದೇಶದಲ್ಲಿಯೇ ಪ್ರಥಮ ಎಂಬುವುದರಲ್ಲಿ ಎರಡು ಮಾತಿಲ್ಲ ಎಂದು ವಿವರಿಸಿದರು.  

ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸದಸ್ಯರು 1926ರಲ್ಲಿ ಧರ್ಮದ ರಕ್ಷಣೆಗಾಗಿ ಸ್ಥಾಪಿತಗೊಂಡು ಅದರಲ್ಲೂ ಹಿಂದೂ ಧರ್ಮದ ಉಳಿವಿಗಾಗಿ ಶ್ರಮಿಸಿದ ಪರಿಣಾಮ ಶತಮಾನಗಳನ್ನು ಪೂರೈಸುತ್ತಿರುವುದು ಸಂತಸದ ಸಂಗತಿ. ಆರ್‌.ಎಸ್‌.ಎಸ್ ಸ್ವಯಂ ಸೇವಕರಲ್ಲಿ ಒಬ್ಬರಾದ ನರೇಂದ್ರ ಮೋದಿಯವರು ಪ್ರಧಾನಿಯಾಗಿರುವುದು ಹಿಂದೂ ಧರ್ಮದ ರಕ್ಷಣೆಗೆ ಮುಕಟಪ್ರಾಯವಾಗಿದ್ದಾರೆ. ಹಾಗಾಗಿಯೇ ವಿಶ್ವ ಮಾನವರಾಗಿ ವಿಶ್ವಾಧ್ಯಾಂತ ಭಾರತವನ್ನು ಪ್ರತಿಬಿಂಬಿಸುತ್ತಿದ್ದಾರೆ. ಆರ್‌.ಎಸ್‌.ಎಸ್ ಇತಿಹಾಸವನ್ನು ಇಂದಿನ ಮಕ್ಕಳು ಅರಿಯಲು ಮಕ್ಕಳೊಂದಿಗೆ ಪಾಲಕರು ಬಂದು ಆರ್‌ಎಸ್‌ಎಸ್ ಹುಟ್ಟಿ ಬಂದ ದಾರಿಯನ್ನು ಪರಿಚಯಿಸಿರುವ ಪ್ರದರ್ಶನ ವೀಕ್ಷಿಸಿದರೆ ಬುರಡಿಕಟ್ಟಿ ಅವರ ಹಾಗೂ ಅವರ ಸಂಗಡಿಗರ ಮತ್ತು ಕಲಾವಿದರ ಸೇವೆ ಸಾರ್ಥವಾಗುತ್ತದೆ ಎಂದು ಶ್ರೀಗಳು ನುಡಿದರು.  

ಹುಬ್ಬಳ್ಳಿಯ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯ ಪ್ರಚಾರಕರಾದ ಸು.ರಾಮಣ್ಣ ಆರ್‌.ಎಸ್‌.ಎಸ್‌. ಬೆಳೆದು ಬಂದ ದಾರಿ ಹಾಗೂ ಅದರ ಧೇಯೋದ್ದೇಶಗಳ ಮತ್ತು ದೇಶ ಕಟ್ಟುವಲ್ಲಿ ಸ್ವಯಂ ಸೇವಕರ ಕಾರ್ಯಗಳನ್ನು ಕುರಿತು ಸುಧೀರ್ಘವಾಗಿ ಮಾತನಾಡಿದರು.  

ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ, ನಗರಸಭಾ ಸದಸ್ಯರಾದ ರೂಪಾ ಚಿನ್ನಿಕಟ್ಟಿ, ಹನುಮಂತಪ್ಪ ಹೆದ್ದೇರಿ, ಗಂಗಮ್ಮ ಹಾವನೂರು, ಮಂಜುಳಾ ಹತ್ತಿ, ಮುಖಂಡರಾದ ಈಶ್ವರ ಹಾವನೂರು, ಅಜೇಯ ಮಠದ, ಗುರುರಾಜ ಕುಲಕರ್ಣಿ, ರಾಘವೇಂದ್ರ ಚಿನ್ನಕಟ್ಟಿ, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.