ಪಟ್ಟಣದ ಹೊಂಡದ ಓಣಿಯಲ್ಲಿ ಕಾಮನ ದಹನ ಮಾಡುವ ಮೂಲಕ ರಂಗ ಪಂಚಮಿಗೆ ಚಾಲನೆ
Ranga Panchami kicks off with a ritual of burning incense in the town's well
ಬ್ಯಾಡಗಿ 09 : ವಸಂತ ಋತುವಿನ ಆಗಮನದ ಸಂಕೇತವಾಗಿರುವ ಹೋಳಿ ಹಬ್ಬವನ್ನು ಬ್ಯಾಡಗಿ ಪಟ್ಟಣದಲ್ಲಿ ಭಕ್ತಿಭಾವ ಮತ್ತು ಉತ್ಸಾಹಭರಿತವಾಗಿ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಮಹಿಳೆಯರು, ಮಕ್ಕಳು ಹಾಗೂ ಯುವಕರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮದಲ್ಲಿ ತೇಲಿದರು. ಪಟ್ಟಣದ ಹೊಂಡದ ಓಣಿಯಲ್ಲಿ ಕಾಮನ ದಹನ ಮಾಡುವ ಮೂಲಕ ರಂಗ ಪಂಚಮಿಗೆ ಚಾಲನೆ ನೀಡಲಾಯಿತು ಪರಿಸರದಲ್ಲಿ ಯುವಕರ ಉತ್ಸಾಹ ಹೆಚ್ಚಾಗಿ ಕಂಡುಬಂದಿತು ಹಲಗಿಯ ನಾದಕ್ಕೆ ಹೆಜ್ಜೆ ಹಾಕುತ್ತ ಪರಸ್ಪರ ಬಣ್ಣ ಎರಚಿಕೊಂಡು ನೃತ್ಯ ಮಾಡಿದ ದೃಶ್ಯ ಜನರ ಗಮನ ಸೆಳೆಯಿತು. ಹಲಗಿಯ ಸದ್ದಿನ ಮಧ್ಯೆ “ಹೋಳಿ ಹೈ” ಎನ್ನುವ ಕೂಗು ಮೊಳಗಿದಂತೆ ವಾತಾವರಣ ಹರ್ಷೋದ್ ಗಾರಗಳಿಂದ ಮೊಳಗಿತು.
ಮುಖ್ಯ ರಸ್ತೆ.ಕಾಕೋಳು ರಸ್ತೆ. ಗುಮ್ಮನಹಳ್ಳಿ ಸರ್ಕಲ್, ಮುಲ್ಲೂರು ರಸ್ತೆ. ಸಂಗಮೇಶ್ವರನಗರ, ವಿದ್ಯಾನಗರ, ನೆಹರು ನಗರ, ಶಿವಪೂರ ಬಡಾವಣೆ ಹಾಗೂ ಸುಭಾಷ್ ಸರ್ಕಲ್ ರಸ್ತೆಗಳಲ್ಲೂ ರಂಗು-ರಂಗಿನ ಬಣ್ಣದಾಟ ಜೋರಾಗಿ ನಡೆಯಿತು. ಮಕ್ಕಳು ನೀರಿನ ಬಲೂನುಗಳು ಗುಲಾಲುಗಳನ್ನು ಬಳಸಿ ದಿನವೀಡೀ ಸಂಭ್ರಮಿಸಿದರು. ಪಟ್ಟಣದಲ್ಲಿ ಒಟ್ಟಾರೆ ಹಬ್ಬದ ಕಳೆ ಮಿಂಚಿತ್ತು ಮನೆ ಮನೆಗೆ ಭೇಟಿ ನೀಡಿ ಪರಸ್ಪರ ಬಣ್ಣ ಹಚ್ಚಿಕೊಳ್ಳುವುದು ಹಿರಿಯರಿಗೆ ಗೌರವ ಸಲ್ಲಿಸುವುದು ಹಾಗೂ ಸಿಹಿ ತಿಂಡಿಗಳನ್ನು ಹಂಚಿಕೊಳ್ಳುವ ಮೂಲಕ ಸಂಪ್ರದಾಯಗಳನ್ನು ಪಾಲಿಸಲ್ಪಟ್ಟರು.ಅಲ್ಲಲ್ಲಿ ಮಹಿಳೆಯರು ಮಕ್ಕಳು ರಂಗ ಪಂಚಮಿ ಆಡುವ ಮೂಲಕ ಪರಸ್ಪರ ಬಣ್ಣ ಏರಿಚಿಕೊಂಡು ಹಬ್ಬಕ್ಕೆ ವಿಶೇಷ ಮೆರಗು ನೀಡಿದರು. ಕಾನೂನು ಸುವೈವಸ್ತೆ ಕಾಪಾಡಲು ಆರಕ್ಷಕ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಆರಕ್ಷಕ ಸಿಬ್ಬಂದಿ ನಿಗಾ ವಹಿಸಲಾಯಿತು. ಬ್ಯಾಡಗಿ ಪಟ್ಟಣದಲ್ಲಿ ಒಟ್ಟಾರೆ ಹೋಳಿ ಹಬ್ಬವು ಶಾಂತಿ ಸೌಹಾರ್ದತೆ ಮತ್ತು ಸಂಭ್ರಮದ ಸಂಕೇತವಾಗಿ ರಂಗಪಂಚಮಿ ನೆನಪುಗಳನ್ನು ಮೂಡಿಸಿದವು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 