10ರಿಂದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ
Raghavendra Swami's worship festival from 10th
10ರಿಂದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ
ಬೆಳಗಾವಿ 7: ಕಾಕತಿಯ ಹರಿವಾಯು ಗುರುಗಳ ಸೇವಾ ಸಂಘದವರು ಇದೇ ದಿ. 10, 11 ಹಾಗೂ 12ರಂದು ಮೂರು ದಿನಗಳ ಕಾಲ ರಘು ಪ್ರಮೋದ ಸಭಾಗೃಹದಲ್ಲಿ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವವನ್ನು ಹಮ್ಮಿಕೊಂಡಿದ್ದಾರೆ. ದಿ. 10 ರವಿವಾರದಂದು ದತ್ತಕುಮಾರ ಮುತಾಲಿಕ ದೇಸಾಯಿ, ಸುಮನ ಪಾಲೀಲ ಇವರಿಂದ ಸಂಗೀತ ಕಾರ್ಯಕ್ರಮವಿದ್ದು, ಕೃಷ್ಣ ಏರಿ, ರಘುನಾಥ ಕುಲಕರ್ಣಿ ತಬಲಾ, ಶಶಿಕಾಂತ ಪವುಸ್ಕರ, ಅಕ್ಷಯ ಕುಲಕರ್ಣಿ ಹಾರ್ಮೋನಿಯಂ ಸಾಥ ನೀಡಲಿದ್ದಾರೆ. ದಿ. 11ರಂದು ಬೆಳಿಗ್ಗೆ 11ಕ್ಕೆ ಪಂ. ಸಂಜೀವಾಚಾರ್ಯ ವಾಳ್ವೇಕರ ಇವರಿಂದ ಪ್ರವಚನ. ಸಾ. 6 ಕ್ಕೆ ಅಶ್ವಿನಿ ಸರಣೋಬತ್, ಗಜಾನನ ಕುಲಕರ್ಣಿ, ಸಂವಾಧಿನಿ ಕಟ್ಟಿ ಇದರಿಂದ ಕೀರ್ತನೆ. ದಿ. 12ರಂದು ಮುಂ 10.30 ಕ್ಕೆ ಸತ್ಯನಾರಾಯಣ ಪೂಜೆ, ಸಾಯಂಕಾಲಕ್ಕೆ ಪಂ ಪ್ರಮೋದಾಚಾರ್ಯ ಕಟ್ಟಿ ಮತ್ತು ಪಂ. ಶ್ರೀನಿಧಿ ಜಮನೀಸಾಚಾರ್ಯರಿಂದ ಪ್ರವಚನ ಪ್ರತಿದಿನ ಬೇರೆ ಬೇರೆ ಸ್ಪರ್ಧೆಗಳು, ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಮಂಗಳಾರತಿ, ಮಹಾಪ್ರಸಾದ ವಿರುತ್ತದೆ. ಗಾಡಿಕೊಪ್ಪದಲ್ಲಿ: ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದಲ್ಲಿ ದಿ ಕಲ್ಲೊಪಂತ ಪಾಟೀಲರು ಸ್ಥಾಪಿಸಿದ ಗುರುರಾಜ ಮಂದಿರದಲ್ಲಿ ಇದೇ ದಿ 10, 11 ಹಾಗೂ 12 ರಂದು ಮೂರು ದಿನಗಳ ಕಾಲ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವವನ್ನು ಹಮ್ಮಿಕೊಂಡಿದ್ದಾರೆ ಸಂಕೀರ್ತನೆ, ಮಹಾಪ್ರಸಾದ, ಅಷ್ಟೊತ್ತರ, ಪಂಚಾಮೃತ ಅಭಿಷೇಕ, ಪ್ರವಚನ, ಸಂಗೀತ ಸೇವೆ, ರಥೋತ್ಸವವಿರುವುದಾಗಿ ಅಚ್ಯುತಾಚಾರ್ಯ ಕೆ. ಪಾಟೀಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 