‘ಅದರಗುಂಚಿ ಶಂಕರಗೌಡರದತ್ತಿ’ ಕಾರ್ಯಕ್ರಮದ ಅತಿಥಿಯಾಗಿ ರವೀಂದ್ರನಾಥ ದೊಡ್ಡಮೇಟಿ

‘ಅದರಗುಂಚಿ ಶಂಕರಗೌಡರದತ್ತಿ’  ಕಾರ್ಯಕ್ರಮದ ಅತಿಥಿಯಾಗಿ ರವೀಂದ್ರನಾಥ ದೊಡ್ಡಮೇಟಿ Rabindranath Doddameti as the guest of the program 'Adaragunchi Shankar Gowdaradatti'

ಧಾರವಾಢ 13: ದೇಶದ ಸ್ವಾತಂತ್ರ್ಯ ಚಳುವಳಿ ಹಾಗೂ ಕರ್ನಾಟಕದ ಏಕೀಕರಣ ಚಳುವಳಿಗಳಲ್ಲಿ ಏಕಕಾಲದಲ್ಲಿ ಭಾಗವಹಿಸಿ, ಸಕ್ರೀಯವಾಗಿ ಪಾಲ್ಗೊಂಡಿದ್ದ ಮಹನೀಯ ಹೋರಾಟಗಾರರಲ್ಲಿ ಅದರ ಗುಂಚಿ ಶಂಕರಗೌಡರು ಪ್ರಮುಖರಾಗಿದ್ದರು ಎಂದು ಖ್ಯಾತ ಸಾಂಸ್ಕೃತಿಕ ಚಿಂತಕ ರವೀಂದ್ರನಾಥ ದೊಡ್ಡಮೇಟಿ ಹೇಳಿದರು. 

ಅವರುಕರ್ನಾಟಕ ವಿದ್ಯಾವರ್ಧಕ ಸಂಘವು, ನವಲಗುಂದ ಸರಕಾರಿ ಪದವಿ ಮಹಾವಿದ್ಯಾಲಯದ ಎನ್‌.ಎಸ್‌.ಎಸ್‌. ಘಟಕ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ‘ಅದರಗುಂಚಿ ಶಂಕರಗೌಡರದತ್ತಿ’  ಕಾರ್ಯಕ್ರಮದ ಅತಿಥಿಯಾಗಿ ಅವರು ಮಾತನಾಡಿದರು.  

ಸುಭಾಸಚಂದ್ರ ಬೋಸರ ಪ್ರಭಾವಕ್ಕೆ ಒಳಗಾಗಿದ್ದ ಶಂಕರಗೌಡರು, ಮಹಾತ್ಮಾಗಾಂಧೀಜಿಯವರ ಒಡನಾಡಿಯೂ ಆಗಿದ್ದರು.ಜೊತೆಗೆ ಅಪ್ಪಟ ದೇಶಭಕ್ತರಾಗಿ, ಸಂತರಾಗಿ, ಶರಣರಾಗಿ, ಹೋರಾಟಗಾರರಾಗಿದ್ದ ಇವರು, ವಿದ್ಯಾದಾನಿಯೂಆಗಿದ್ದರು. ಕರ್ನಾಟಕ ಏಕೀಕರಣಕ್ಕಾಗಿಯೇ ‘ಕರ್ನಾಟಕಏಕೀಕರಣ ಪರಿಷತ್ತು’  ಸ್ಥಾಪಿಸಿದ್ದರು. ಅದರ ಗುಂಚಿಯ ಕಲ್ಮೇಶ್ವರ ದೇವಸ್ಥಾನದಲ್ಲಿ ಉಪವಾಸ  ಕುಳಿತುದೇಶದಜನತೆಯಗಮನವನ್ನು ಸೆಳೆದಿದ್ದರು. ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು. ಇಂತಹ ಮಹಾನ್ ವ್ಯಕ್ತಿಗಳ ನಿಸ್ವಾರ್ಥ ಹೋರಾಟದ ಫಲವಾಗಿಯೇ ಕರ್ನಾಟಕದ ಜನತೆ ಒಂದುಗೂಡಲು ಸಾಧ್ಯವಾಯಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. 

ಸಮಾರಂಭದ ಮುಖ್ಯಅತಿಥಿಯಾಗಿದ್ದ ಹಾಗೂ ಅದರಗುಂಚಿ ಶಂಕರಗೌಡರ ಸಹೋದರರಾದ ವಿರುಪಾಕ್ಷಿಗೌಡ ಪಾಟೀಲ ಅವರು, ಸುತ್ತಮುತ್ತ ಹಳ್ಳಿಯ ರೈತರನ್ನು ಕಟ್ಟಿಕೊಂಡು, ಚಕ್ಕಡಿಗಳ ಮೆರವಣಿಗೆಯ ಮೂಲಕ ಹೋರಾಟ ಮಾಡಿದ ಶಂಕರಗೌಡರು, ಎಲೆಯ ಮರೆಯ ಕಾಯಿಯಾಗಿದ್ದವರು. ಜನರ ಮನಸ್ಸಿನಲ್ಲಿ ಚಳುವಳಿಗಳ ಕಿಚ್ಚನ್ನು ಹೊತ್ತಿಸಿದವರು. ನಿಷ್ಠುರವಾದಿಯಾಗಿದ್ದರು. ಪ್ರತಿಯೊಂದು ಹೋರಾಟದಲ್ಲೂ ಮುಂಚೂಣಿಯಲ್ಲಿಇದ್ದು, ಜಯವನ್ನು ಸಾಧಿಸಿದ ಧೀಮಂತರಾಗಿದ್ದರು. ಅಂತವರತ್ಯಾಗದ ಪ್ರತೀಕವಾಗಿ ಸ್ವಾತಂತ್ರ್ಯ ಲಭಿಸಿದ್ದಲ್ಲದೇ ಕರ್ನಾಟಕಏಕೀಕರಣವೂ ಸಾಧ್ಯವಾಯಿತು.ಇಂತಹ ಮಹಾನ್ ವ್ಯಕ್ತಿಗಳ ಜೀವನಚರಿತ್ರೆಯನ್ನು ಪಠ್ಯಪುಸ್ತಕಗಳಲ್ಲಿ ಸೇರಿಸುವುದರೊಂದಿಗೆಅವರ ಪ್ರಭಾವ ವಿದ್ಯಾರ್ಥಿಗಳ ಮೇಲಾಗಬೇಕು ಎಂದರು. 

ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ವಿದ್ಯಾವರ್ಧಕ ಸಂಘದಕಾರ್ಯಕಾರಿ ಸಮಿತಿ ಸದಸ್ಯಡಾ.ಜಿನದತ್ತ ಅ. ಹಡಗಲಿ ಅವರು, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾತ್ರ ಹಾಗೂ ಇವತ್ತುಅದು ಅನೇಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡುತ್ತ ಮುನ್ನಡೆದಿರುವ ವಿವರ ನೀಡಿದರು.  

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾ.ಎಂ. ಬಿ. ಬಾಗಡಿ, ಅವರು ಪ್ರತಿಯೊಬ್ಬಕನ್ನಡಿಗರೂ ಏಕೀಕರಣ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವುದರೊಂದಿಗೆ ಕನ್ನಡ ನಾಡು-ನುಡಿ ಹಾಗೂ ದೇಶದ ಬಗ್ಗೆ ಗೌರವದ ಭಾವನೆ ಹೊಂದಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ದತ್ತಿದಾನಿ ಡಾ.ರಾಮು ಮೂಲಗಿ, ಗೌಡಪ್ಪಗೌಡ ಪಾಟೀಲ, ಎ.ಬಿ. ಕೊಪ್ಪದ, ಎಸ್‌.ಜಿ. ಹಿರೇಮಠ ಉಪಸ್ತಿತರಿದ್ದರು.ಕು.ಸಂಜನಾಗಣಾಚಾರಿ ಪ್ರಾರ್ಥನೆಗೀತೆ ಹಾಡಿದರು. ಬಿ.ವಿ. ಏಣಗಿ ವಂದಿಸಿದರು.ಡಾ. ಆಯ್‌.ಬಿ. ಸಾತಿಹಾಳ ನಿರೂಪಿಸಿದರು.