ರಬಕವಿ ಬನಹಟ್ಟಿ ತಾಲ್ಲೂಕು ಮಟ್ಟದ ನಿವೃತ್ತ ನೌಕರರ ಪ್ರಥಮ ಸಮ್ಮೇಳನ
Rabakavi Banahatti Taluk Level Retired Employees' First Conference
ರಬಕವಿ-ಬನಹಟ್ಟಿ 25: ಜಗತ್ತು ಆಧುನಿಕತೆಯತ್ತ ಭರದಿಂದ ಸಾಗುತ್ತಿದೆ. ಇಂದಿನ ಆಧುನಿಕ ಪರಿಸರದಲ್ಲಿ ಹಿರಿಯರಿಗೆ ಸಲ್ಲಿಸುವ ಪದ್ಧತಿ ಕಣ್ಮರೆಯಾಗುತ್ತಿವೆ. ಗೌರವಗಳು ಇಂದಿನ ಯುವ ಪೀಳಿಗೆಗೆ ಹಿರಿಯರ ಮಾರ್ಗದರ್ಶನ ಮತ್ತು ಬೆಂಬಲದ ಅವಶ್ಯಕತೆ ಸಾಕಷ್ಟು ಇದೆ. ಆದ್ದರಿಂದ ಹಿರಿಯರನ್ನು ಗೌರವಿಸುವಂತಾಗಬೇಕು. ಹಿರಿಯರು ತಮ್ಮ ಆರೋಗ್ಯದತ್ತ ಗಮನ ನೀಡಬೇಕು. ಸಂತೋಷದೊಂದಿಗೆ ಜೀವನ ಸಾಗಿಸಬೇಕು ಎಂದು ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ಅವರು ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ನಡೆದ ರಬಕವಿ-ಬನಹಟ್ಟಿ ತಾಲ್ಲೂಕು ಮಟ್ಟದ ನಿವೃತ್ತ ನೌಕರರ ಪ್ರಥಮ ಸಮ್ಮೇಳನ ಮತ್ತು 75 ವಸಂತಗಳನ್ನು ಕಂಡ ತಾಲ್ಲೂಕಿನ ಹಿರಿಯ ನಿವೃತ್ತರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸಕ ಸಿದ್ದು ಸವದಿ, ಇಂದಿನ ಯುವಕರಿಗೆ ಹಿರಿಯರ ಅನುಭವಗಳು ಮಾದರಿಯಾಗಿವೆ ಹಿರಿಯರಿಗೆ ಗೌರವ ನೀಡುವುದು ನಮ್ಮ ಸಂಸ್ಕೃತಿಯಾಗಿದೆ. ಅವರ ಮಾರ್ಗದರ್ಶನ ಇಂದಿನ ಯುವ ಪೀಳಿಗೆಗೆ ಅವಶ್ಯವಾಗಿದೆ ಎಂದರು.
ಮುಧೋಳ ತಾಲ್ಲೂಕು ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಸಿದ್ದು ದಿವಾಣ ಮಾತನಾಡಿ, ನಮ್ಮ ಅನುಭವಗಳನ್ನು ಸಮಾಜಕ್ಕೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬರ ನಿವೃತ್ತ ಜೀವನ ಉತ್ಸಾಹಕರವಾಗಿರಬೇಕು ಮತ್ತು ಸುಂದರವಾಗಿರಬೇಕು. ಇಳಿ ವಯಸ್ಸಿನಲ್ಲಿ ಯಾವುದೆ ಚಿಂತೆಗಳು ಬೇಡ. ನಿವೃತ್ತರು ತಮ್ಮ ಇಳಿ ವಯಸ್ಸಿನಲ್ಲಿ ಸಂಘವನ್ನು ಸ್ಥಾಪಿಸಿಕೊಂಡು ಅದನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ನಮಗೆ ನಮ್ಮ ಬಾಲ್ಯ, ಯೌವ್ವನ ಮತ್ತು ಸೇವಾ ವೃತ್ತಿಯ ಹಳೆಯ ನೆನಪುಗಳನ್ನು ಮೆಲಕು ಹಾಕುವುದು ಕೂಡಾ ಅಗತ್ಯವಾಗಿದೆ ಎಂದರು. ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ಪ್ರೊ. ಮಹಾದೇವ ಎಸ್. ಬದಾಮಿ ಮಾತನಾಡಿದರು. ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮೃತ್ಯುಂಜಯ ರಾಮದುರ್ಗ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ ಕುಲಕರ್ಣಿ, ನಗರಸಭೆಯ ಮಾಜಿ ಅಧ್ಯಕ್ಷೆ ವಿದ್ಯಾ ಧಬಾಡಿ, ಜಮಖಂಡಿ ತಾಲೂಕು ನಿವೃತ್ತ ನೌಕರ ಸಂಘದ ಅಧ್ಯಕ್ಷ ಎಚ್. ಎಂ. ಶೆಟ್ಟರ, ಬಾಲಚಂದ್ರ ಉಮದಿ, ಡಾ. ರವಿ ಜಮಖಂಡಿ, ಬಿ. ಎಂ. ಪಾಟೀಲ, ಎಸ್. ಎಂ. ದಾಶಾಳ ಡಾ. ಅನಂತಮತಿ ಎಂಡೊಳ್ಳಿ, ಸುರೇಶ ಪಟ್ಟಣಶೆಟ್ಟಿ, ಮಹಾದೇವ ಕವಿಶೆಟ್ಟಿ, ಎಸ್. ಕೆ. ಹುನ್ನೂರ, ಬಿ. ಎಂ. ಮಟ್ಟಿಕಲ್ಲಿ, ಗಣಪತಿ ಪವಾರ, ರಾಜಶೇಖರ ಗುಣಕಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 75 ವಸಂತಗಳನ್ನು ಕಂಡ ನಿವೃತ್ತರನ್ನು ಸನ್ಮಾನಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 