ಪುಟ್ಟರಾಜ ಕವಿ ಗವಾಯಿ ಅವರ 15ನೇ ನಾದ ಸಮರೆ​‍್ಣ ಹಾಗೂ ಕಲಾ ಸಂಸ್ಥೆಯ ಹತ್ತನೇ (10) ವಾರ್ಷಿಕೋತ್ಸವ ಮತ್ತು ಸನ್ಮಾನ ಕಾರ್ಯಕ್ರಮ

ಪುಟ್ಟರಾಜ ಕವಿ ಗವಾಯಿ ಅವರ 15ನೇ ನಾದ ಸಮರೆ​‍್ಣ ಹಾಗೂ ಕಲಾ ಸಂಸ್ಥೆಯ ಹತ್ತನೇ (10) ವಾರ್ಷಿಕೋತ್ಸವ ಮತ್ತು ಸನ್ಮಾನ ಕಾರ್ಯಕ್ರಮ Puttaraja Kavi Gavai's 15th Nada Samarenna and the tenth (10) anniversary and felicitation program

ಕೊಪ್ಪಳ 02:   ಕೊಪ್ಪಳದ ಬಿಟಿ ಪಾಟೀಲ್ ನಗರ 2ನೇ ಕ್ರಾಸ್  ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಶ್ರೀ ಗುರು ಕೃಪಾ ಸಂಗೀತ ಹಾಗೂ ಸಾಂಸ್ಕೃತಿಕ ಕಲಾಸಂಘ ಭಾಗ್ಯನಗರ ಈ ಸಂಸ್ಥೆಯಿಂದ ಲಿಂಽಽ ಪಂಽಽ ಪುಟ್ಟರಾಜ ಕವಿ ಗವಾಯಿಗಳವರ 15ನೇ ನಾದ ಸಮರೆ​‍್ಣ ಹಾಗೂ ಕಲಾ ಸಂಸ್ಥೆಯ ಹತ್ತನೇ (10) ವಾರ್ಷಿಕೋತ್ಸವ ಮತ್ತು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಒಂದು ಕಾರ್ಯಕ್ರಮದಲ್ಲಿ ಅಧ್ಯಕ್ಷ್ಯ ಸ್ಥಾನವನ್ನು ವಹಿಸಿರುವಂತಹ ಶ್ರೀ ದಾನಪ್ಪ ಕವಲು ರವರು ನಮ್ಮ ಒತ್ತಡದ ಜೀವನದಲ್ಲಿ ಸಂಗೀತವನ್ನು ಕಲಿಯುದಾಗಲಿ,  

ಕೇಳುವುದಾಗಲಿ ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರಕುತ್ತದೆ ಮತ್ತು ಇದರಿಂದ ಸಂಸ್ಕಾರ ಬರುತ್ತದೆ ಅನ್ನುವಂತ ಉತ್ತಮ ಮಾತುಗಳನ್ನ ನುಡಿದರು. ಹಾಗೆ ಮುಖ್ಯ ಅತಿಥಿಗಳಾಗಿ ಆಗಮಿಸಿರುವಂತ ಉದಯವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರಾದಂತಹ ಶ್ರೀ ದತ್ತು ಕಮ್ಮಾರ್ ಅವರು ಮಕ್ಕಳು ಓದಿನ ಜೊತೆಗೆ ಈ ಒಂದು ಸಂಗೀತ ಕಲಿಯುವುದನ್ನು ರೂಡಿಸಿಕೊಂಡರೆ ಒಳ್ಳೆಯ ಸಂಸ್ಕಾರದಿಂದ ಉಳಿಲಿಕ್ಕೆ ಕಾರಣವಾಗುತ್ತದೆ ಅನ್ನುವಂತ ಉತ್ತಮ ಮಾತುಗಳನ್ನ ಅತಿಥಿಗಳಾಗಿ ಆಗಮಿಸಿದಂತಹ ವಿಶ್ವಗುರು ಶ್ರೀ ಬಸವೇಶ್ವರ ಟ್ರಸ್ಟಿನ ಮುಖಂಡರಾದ ಶ್ರೀ ರಾಜೇಶ್ ಸಸಿಮಠವರು ಮಕ್ಕಳಿಗೆ ಮೊಬೈಲ್ ಕೊಡುವುದನ್ನು ಬಿಟ್ಟು ಬಿಡಿಸಿ ಶರಣರ ವಚನಗಳನ್ನ,

ದಾಸರ ಕೀರ್ತನಗಳನ್ನ ಕೇಳಿಸುವುದುಕಲಿಸುವುದು ಪ್ರತಿಯೊಬ್ಬ ತಂದೆ ತಾಯಂದಿರ ಕರ್ತವ್ಯ ಅಂತ ಹೇಳಿ ಬಹಳ ಉತ್ತಮ ಮಾತುಗಳಾಡಿದರು. ಹಾಗೆ ಈ ಸಂಸ್ಥೆಯಲ್ಲಿ ಸನ್ಮಾನಿತರಾಗಿ ಆಗಮಿಸಿದಂತ ಶ್ರೀ ಮಹಾದೇವಪ್ಪ ವಂದಾಲ್ ರವರು ಹಾಗೂ ಶ್ರೀ ಶ್ರೀನಿವಾಸ್ ಜೋಶಿಯವರು ಭಾಗವಹಿಸಿ ಸಂಸ್ಥೆಯ ಸನ್ಮಾನವನ್ನು ಸ್ವೀಕರಿಸಿದರು ಹಾಗೆ ಈ ಒಂದು ಸಂಸ್ಥೆಯಲ್ಲಿ ಹಿರಿಯ ಕಲಾವಿದರಾಗಿ ಆಗಮಿಸಿದಂತಹ  ಆಕಾಶವಾಣಿ ಕಲಾವಿದರಾದ ಶ್ರೀಮತಿ ಪುಷ್ಪಾವತಿ ಹೊಸಪೇಟೆ ಅವರು ಪ್ರಾರಂಭದಲ್ಲಿ ಗಾಯನ ಪ್ರಸ್ತುತಪಡಿಸಿ.  

ನಂತರ ಗುರು ಪುಟ್ಟರಾಜರ ಗೀತೆಗಳನ್ನು ಹಾಡಿ ಜನರನ್ನ ಮನಂದಗೊಳಿಸಿದರು. ಶ್ರೀ ಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠದ ಗುರುಗಳಾದ ಶ್ರೀ ವೀರೇಶ ಹಿಟ್ನಾಳರವರು  ಗಾಯನಕ್ಕೆ ಸಮರ​‍್ಕವಾಗಿ ಹಾರ್ಮೋನಿಯಂ ಸಾಥ್ ನೀಡಿದರು ಹಾಗೆ ತಬಲಾ ಸಾಥಿಯಲ್ಲಿ ಶ್ರೀ ರಾಘವೇಂದ್ರ ಗಂಗಾವತಿ ಅವರು ಇನ್ನೊರ್ವ್‌ ತಬಲಾ ವಾದಕರಾದ ಶ್ರೀ ರಿಜ್ವಾನ್ ಮುದ್ದಾಬಳ್ಳಿಯವರು ಕೀಬೋರ್ಡ್‌ ನಲ್ಲಿ ಕುಮಾರಿ ಮಧು ಕೌಲೂರ್ ಹಾಗೆ ತಾಳದಲ್ಲಿ ಸಮೃದ್ಧಿ ಬೆನ್ನಾಳ್ ಪ್ರಾರಂಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಕೆಲವು ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಕುಮಾರಿ ಸ್ಪಂದನ ಹಿಂದಲಮನಿ ಮತ್ತು ವೈಭವಿ ಕೋಡ್ಬಳೆ ಅವರು ನೆರವೇರಿಸಿ ಕೊಟ್ಟರೆಂದು ಶ್ರೀ ಗುರು ಕೃಪಾ ಸಂಗೀತ ಹಾಗೂ ಸಾಂಸ್ಕೃತಿಕ ಕಲಾಸಂಘದ ಕಾರ್ಯದರ್ಶಿ ಮತ್ತು ಸಂಗೀತ ಶಿಕ್ಷಕಿ ಆಗಿರುವಂತ ಶಕುಂತಲಾ ಬೆನ್ನಾಳ ರವರು ವರದಿಯನ್ನು ನೀಡಿದ್ದಾರೆ