ಮೂರು ತಿಂಗಳ ಬಾಕಿ ವೇತನ ನೀಡುವಂತೆ ಆಗ್ರಹಿಸಿ ಧರಣಿ

ಮೂರು ತಿಂಗಳ ಬಾಕಿ ವೇತನ ನೀಡುವಂತೆ ಆಗ್ರಹಿಸಿ ಧರಣಿ Protest demanding payment of three months' arrears of salary

ಕಂಪ್ಲಿ 12:  ವಿವಿಧ ಬೇಡಿಕೆಗೆ ಆಗ್ರಹಿಸಿ, ಕಂಪ್ಲಿ ತಾಲೂಕು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ತಾಲೂಕಾಧ್ಯಕ್ಷ ಡಿ.ಆರ್‌.ಪಾಂಡುರಂಗ ನೇತೃತ್ವದಲ್ಲಿ ನೌಕರರು ಪಟ್ಟಣದ ನೀರಾವರಿ ಇಲಾಖೆಯ ಉಪವಿಭಾಗದ ಕಚೇರಿ ಮುಂಭಾಗದಲ್ಲಿ ಒಂದು ದಿನದ ಧರಣಿ ಶುಕ್ರವಾರ ನಡೆಸಿದರು. ನಂತರ ತಾಲೂಕಾಧ್ಯಕ್ಷ ಡಿ.ಆರ್‌.ಪಾಂಡುರಂಗ ಮಾತನಾಡಿ, ಉಪವಿಭಾಗದ ಕಂಪ್ಲಿ ನೀರಾವರಿ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಾಕಷ್ಟು ಜನರು ಕೆಲಸ ಮಾಡುತ್ತಿದ್ದಾರೆ. 2024ರ ಡಿಸೆಂಬರ್ ತಿಂಗಳ ಹಾಗೂ 20254 ಅಕ್ಟೋಬರ್ ಮತ್ತು ನವೆಂಬರ್ ತಿಂಗಳು ಸೇರಿದಂತೆ ಒಟ್ಟಾರೆಯಾಗಿ ಮೂರು ತಿಂಗಳ ಬಾಕಿ ವೇತನ ಬಾರದೇ, ನೌಕರರ ಜೀವನ ನಿರ್ವಾಹಣೆ ತುಂಬ ಕಷ್ಟಕರವಾಗಿದೆ.

ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಏನು ಪ್ರಯೋಜನೆ ಇಲ್ಲದಂತಾಗಿದೆ. ಆದ್ದರಿಂದ ಅನಿವಾರ್ಯವಾಗಿ ಧರಣಿ ಮಾಡಬೇಕಾಯಿತು. ಕೂಡಲೇ ಅಧಿಕಾರಿಗಳು ಹೊರಗುತ್ತಿಗೆ ನೌಕರರ ಸಂಕಷ್ಟವನ್ನಾಲಿಸಿ, ವೇತನ ಜಾರಿ ಮಾಡಬೇಕು. ಭವಿಷ್ಯ ನಿಧಿ, ಇಎಸ್‌ಐ ಕಟ್ಟಬೇಕು. ನಾಲ್ಕೈದು ದಿನದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುನಿರಾಬಾದ್‌ನ ಮುಖ್ಯ ಕಛೇರಿ ಬಳಿಯಲ್ಲಿ ಧರಣಿ ಮಾಡಲಾಗುವುದು. ಇದಕ್ಕೂ ಜಗ್ಗದೇ ಹೋದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಚಳುವಳಿ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹೆಚ್‌.ಜಡೆಮೂರ್ತಿ, ಪದಾಧಿಕಾರಿಗಳಾದ ಎಂ.ಜಡೆಪ್ಪ, ಡಿ.ಸೋಮೇಶ, ಗಂಗಯ್ಯಸ್ವಾಮಿ, ಕರೆ​‍್ರ​‍್ಪ, ಹೆಚ್‌.ಗಾದೆಪ್ಪ, ಸುಂದರರಾಜ್, ಸಿ.ಡಿ.ಜಡೇಶ, ಹನುಮನಾಯಕ, ರೀಪಣ್ಣ ಸೇರಿದಂತೆ ಅನೇಕರಿದ್ದರು.