ಪವರ್ ಫುಲ್ ’ಕರಿಕಾಡ’ ಟ್ರೇಲರ್ ಬಿಡುಗಡೆ

ಪವರ್ ಫುಲ್ ’ಕರಿಕಾಡ’ ಟ್ರೇಲರ್ ಬಿಡುಗಡೆ  Powerful 'Karikada' trailer released

          ಫೆ. 6ಸಿನಿಮಾ ತೆರೆಗೆಸದ್ಯ ಸ್ಯಾಂಡಲ್ ವುಡ್ ನಲ್ಲಿ ಕಂಟೆಂಟ್ ಮೂಲಕ ಸೌಂಡ್ ಮಾಡುತ್ತಿರುವ ಸಿನಿಮಾ ’ಕರಿಕಾಡ’. ಈಗಾಗಲೇ ಟೀಸರ್, ಹಾಡುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ’ಕರಿಕಾಡ’ ಚಿತ್ರದ ಟ್ರೇಲರ್ ನಿನ್ನೆಯಷ್ಟೇ ಬಿಡುಗಡೆ ಆಗಿದ್ದು, ಜಾಲತಾಣದಲ್ಲಿ ಭರ್ಜರಿಯಾಗಿ ರೆಸ್ಪಾನ್ಸ್‌ ಪಡೆಯುತ್ತಿದೆ. ಚಿತ್ರಕ್ಕೆ ಕಥೆ ಬರೆದು ಮೊದಲಬಾರಿ ನಾಯಕನಾಗಿ ಅಭಿನಯ ಮಾಡಿದ್ದಾರೆ ಕಾಡ ನಟರಾಜ್‌. ಟ್ರೇಲರ್ ಪವರ್ ಫುಲ್ ಆಗಿದ್ದು, ಎಲ್ಲಾ ಅಂಶಗಳು ಇರುವುದು ಪಕ್ಕಾ ಆಗಿದೆ. ’ಜಗತ್ತಿನಲ್ಲಿ ಯುದ್ಧ ಅಂತ ಶುರು ಆಗೋದು ಒಂದು ಹೆಣ್ಣಿಗೆ ಇನ್ನೊಂದು ಮಣ್ಣಿಗೆ’ ಎಂಬ ಡೈಲಾಗ್ ಸೇರಿದಂತೆ ಹಲವು ಸಂಭಾಷಣೆಗಳು ಟ್ರೇಲರ್ ನ ಹೈಲೈಟ್‌.ಟ್ರೇಲರ್ ಬಿಡುಗಡೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ನಟರಾಜ್, ’ ನಾನು ಮತ್ತು ನಿರ್ದೇಶಕ ವೆಂಕಟೇಶ ಮೀಟ್ ಮಾಡಿ, ಈ ಜರ್ನಿ ಶುರು ಮಾಡಿದ್ವಿ. ನಂತರ ನಮಗೆ 7 ಹಾಡು ಹಾಗೂ ಬ್ಯಾಕ್ ಗ್ರೌಂಡ್ ಸಂಗೀತ ದಿಂದಾಗಿ ಸಿನಿಮಾಕ್ಕೆ ಶಕ್ತಿ ತುಂಬಿದವು. ಈ ಚಿತ್ರ ಪ್ರೇಕ್ಷಕರನ್ನು ನಗಿಸಿ, ಅಳಿಸುತ್ತದೆ ಎಂಬ ವಿಶ್ವಾಸವಿದೆ. 7 ಹಾಡುಗಳ ಪೈಕಿ ಆರು ಸಾಂಗ್ ನಿರ್ದೇಶಕರೆ ಬರೆದಿದ್ದಾರೆ. ಸಿನಿಮಾ ನೋಡುವ ಪ್ರತಿಯೊಬ್ಬರೂ ಎಂಜಾಯ್ ಮಾಡುತ್ತಾರೆ. ಐದು ಭಾಷೆಯಲ್ಲಿ ಚಿತ್ರ ತಯಾರಾಗಿದ್ದು ತೆಲುಗು ಮತ್ತು ಹಿಂದಿ ಸೆನ್ಸಾರ್ ಆಗಬೇಕಿದೆ.

         ಇವೇರಡು ಫೆಬ್ರವರಿ 6ರ ಒಳಗೆ ಸೆನ್ಸಾರ್ ಆಗದಿದ್ದರೆ ಒಂದು ವಾರ ಲೇಟ್ ಆಗಿ ರೀಲೀಸ್ ಮಾಡುತ್ತೇವೆ. ಕನ್ನಡ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಇದೇ ಫೆ. 6ರಂದು ಸಿನಿಮಾ ರೀಲೀಸ್ ಆಗಲಿದೆ. ಈಗಾಗಲೇ ಕರ್ನಾಟಕದಲ್ಲಿ 100 ಥಿಯೇಟರ್ ಕನ್ ಫಾರ್ಮ್‌ ಆಗಿವೆ. ನಮ್ಮ ಪ್ರೊಡಕ್ಷನ್ ಗೆ ಬ್ರ್ಯಂಡ್ ಕಂಪನಿಗಳು ತುಂಬಾ ಸಪೋರ್ಟ್‌ ಮಾಡಿವೆ. ಇದರಲ್ಲಿ ಕಥೆಯೇ ಹೀರೋ’ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ನಿರ್ದೇಶಕ ಕೆ. ವೆಂಕಟೇಶ್ ಮಾತನಾಡಿ, ’ಇದೊಂದು ಹಬ್ಬದೂಟದ ತರ ಇರುವ ಸಿನಿಮಾ. ಎಲ್ಲ ಅಂಶ ಒಳಗೊಂಡಿದೆ. ಕನ್ನಡ, ಮಲಯಾಳಂ ಹಾಗೂ ತಮಿಳು ಸಿದ್ಧವಾಗಿವೆ. ನಮ್ಮ ಸಿನಿಮಾ ಮೇಲೆ ನಂಬಿಕೆ ಇದೆ. ಹಾಗಾಗಿ 6ಕ್ಕೆ ರೀಲೀಸ್ ಮಾಡತಾ ಇದ್ದೇವೆ’ ಎಂದರು. ನಾಯಕಿ ನೀರೀಕ್ಷಾ ಶೆಟ್ಟಿ ’ನಾನಿಲ್ಲಿ ತಂಗಾಳಿ ಆಗಿ ಬರತೀನಾ, ಬಿರುಗಾಳಿ ಆಗಿರುತ್ತೇನಾ ಎಂಬುದನ್ನು ಸಿನಿಮಾದಲ್ಲಿ ನೋಡಿ. ಹಳ್ಳಿ ಹುಡುಗಿ ಪಾತ್ರ ಮಾಡೋದು ಚಾಲೆಂಜ್ ಆಗಿತ್ತು. ಹಳ್ಳಿ ಸೊಗಡಿಗೆ ಹೊಂದಿಕೊಳ್ಳಲು ಕಷ್ಟ ಆಯ್ತು’ ಎಂದರು. ರಿದ್ಧಿ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಈ ಚಿತ್ರವನ್ನು ಕಾಡ ನಟರಾಜ್ ಅವರ ಪತ್ನಿ ದೀಪ್ತಿ ದಾಮೋದರ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಶಶಾಂಕ ಶೇಷಗಿರಿ ಹಾಗೂ ಅತೀಶಯ್  ಜೈನ ಸಂಗೀತವಿದೆ. ವೇದಿಕೆಯಲ್ಲಿ ಸಂಗೀತ ನಿರ್ದೇಶಕರು ಸೇರಿದಂತೆ ನಟರಾದ ಯಶ್ ಶೆಟ್ಟಿ, ವಿಜಯ್ ಚಂಡೂರ, ಬೇಬಿ ರಿದ್ಧಿ ತಮ್ಮ ಅನುಭವ ಹಂಚಿಕೊಂಡರು. ಈ ಚಿತ್ರದಲ್ಲಿ ನಾಯಕ ಯಾವುದಕ್ಕೆ ಯುದ್ಧ ಮಾಡುತ್ತಾನೆ ಎಂದು ಸಿನಿಮಾದಲ್ಲೇ ನೋಡಬೇಕು.