ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ ಫೀನಿಕ್ಸ್‌ನ ಬಿಂದುಶ್ರೀ ಪ್ರಥಮ

ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ ಫೀನಿಕ್ಸ್‌ನ ಬಿಂದುಶ್ರೀ ಪ್ರಥಮ Phoenix's Bindushri wins first in state-level abacus competition

ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ ಫೀನಿಕ್ಸ್‌ನ ಬಿಂದುಶ್ರೀ ಪ್ರಥಮ 

ಶಿಗ್ಗಾವಿ 29 : ಫೀನಿಕ್ಸ್‌ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ಬಿಂದುಶ್ರೀ ಆರ್‌. ದೊಡ್ಡಕರಗಿ ದಿ 27 ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಶಾಲೆಯ ಹಾಗೂ ತಾಲೂಕಿನ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ ಅಲ್ಲದೇ ಅಭ್ಯಾಸ, ಏಕಾಗ್ರತೆ ಹಾಗೂ ಗಣಿತದ ಪರಿಣತಿಯಿಂದ ಈ ಸಾಧನೆ ಸಾಧಿಸಿದ್ದು, ವಿದ್ಯಾರ್ಥಿನಿಯ ಈ ಯಶಸ್ಸು ಪಿನಿಕ್ಸ ಸಮೂಹ ಸಂಸ್ಥೆಗೆ ಹೆಮ್ಮೆ ತಂದಿದೆ. ಪೀನಿಕ್ಸ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಎಂ.ತಿರ್ಲಾಪೂರ, ಉಪಾಧ್ಯಕ್ಷ ನರಹರಿ ಕಟ್ಟಿ, ಕಾರ್ಯದರ್ಶಿ ಡಾ.ರಾಣಿ. ತಿರ್ಲಾಪೂರ ಸೇರಿದಂತೆ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಸಹಪಾಠಿಗಳು ಬಿಂದುಶ್ರೀ ಅವರಿಗೆ ಅಭಿನಂದನೆ ಸಲ್ಲಿಸಿ, ಅವರ ಭವಿಷ್ಯ ಉಜ್ವಲವಾಗಲಿ ಎಂಬ ಶುಭಾಶಯಗಳನ್ನು ಕೋರಿದ್ದಾರೆ.