ದೈಹಿಕ ನ್ಯೂನತೆ ಹೊಂದಿದವರು ಅಂಗವಿಕಲರಲ್ಲ, ವಿಶೇಷ ಚೇತನರು’ : ನ್ಯಾಯಾಧೀಶೆ

ದೈಹಿಕ ನ್ಯೂನತೆ ಹೊಂದಿದವರು ಅಂಗವಿಕಲರಲ್ಲ, ವಿಶೇಷ ಚೇತನರು’ : ನ್ಯಾಯಾಧೀಶೆ People with physical disabilities are not disabled, they are 'specially gifted': Judge

                         ಬ್ಯಾಡಗಿ 01 : ದೈಹಿಕ ನ್ಯೂನತೆ ಹೊಂದಿದವರು ಅಂಗವಿಕಲರಲ್ಲ, ವಿಶೇಷ ಚೇತನರು’ ಎಂದು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು. ಹಿರಿಯ ಸಿವಿಲ್ ನ್ಯಾಯಾಧೀಶೆ ರಾಜೇಶ್ವರಿ ಪೌರಾಣಿಕ ಹೇಳಿದರು.ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಕಂದಾಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ವಿಶೇಷ ಚೇತನರ ಸಬಲೀಕರಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಏರಿ​‍್ಡಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ, ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಅಂಗವಿಕಲರಲ್ಲಿ ಸಾಕಷ್ಟು ಪ್ರತಿಭೆ ಇದೆ. ಎಲ್ಲ ಇದ್ದವರಲ್ಲಿ ಇರಲಾರದ ಕಲೆ, ಪ್ರತಿಭೆ ವಿಶೇಷ ಚೇತನರಲ್ಲಿದೆ. ಎಲ್ಲ ಕ್ಷೇತ್ರಗಳಲ್ಲಿ ವಿಶೇಷ ಚೇತನರು ಇಂದು ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯರಿಗಿಂತ ಹೆಚ್ಚು ಮನಸ್ಸಿನಿಂದ ಕೆಲಸ ಮಾಡುತ್ತಾರೆ. ಸಹಜವಾಗಿ ಇರುವವರಿಗೆ ವಿಶೇಷ ಚೇತನರೇ ಪ್ರೇರಣೆ ಎಂದು ಹೇಳಿದರು.ಪ್ರಧಾನ ಸಿವಿಲ್ ನ್ಯಾಯಾಧೀಶ ಸುರೇಶ್ ವಗ್ಗನವರ್ ಮಾತನಾಡಿ, ಪ್ಯಾರಾ ಒಲಿಂಪಿಕ್ನಲ್ಲಿ ಭಾಗವಹಿಸಿ ವಿಶೇಷ ಚೇತನರು ಭಾರತಕ್ಕೆ ಚಿನ್ನ, ಬೆಳ್ಳಿ ಪದಕ ತಂದು ಕೊಟ್ಟಿದ್ದಾರೆ. ಪ್ರತಿಯೊಬ್ಬರಲ್ಲಿ ಪ್ರತಿಭೆ ಇರುತ್ತದೆ. ಅಂಗವಿಕಲರು ಯಾವುದರಲ್ಲೂ ಕಮ್ಮಿ ಇಲ್ಲ ಎಂದು ತಿಳಿಸಿದರು.

                      ತಾಯಿಯ ಗರ್ಭದಲ್ಲಿದ್ದಾಗಲೇ ಮಗುವಿನ ಆರೋಗ್ಯದ ಆರೈಕೆ ಮಾಡುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ. ಗರ್ಭದಲ್ಲಿದ್ದಾಗ ಮಗುವಿನಲ್ಲಿ ಸಣ್ಣಪುಟ್ಟ ಕೊರತೆಯಿದ್ದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಮಗು ಜನಿಸಿದ ನಂತರ ಪೊಲಿಯೋ ಸೇರಿದಂತೆ ಇತರೆ ಎಲ್ಲ ರೀತಿಯ ಲಸಿಕೆ ಹಾಕಿಸಬೇಕು ಎಂದು ಹೇಳಿದರು.ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ ಮಾತನಾಡಿ, ಅಂಗವಿಕಲರ ಕಲ್ಯಾಣಕ್ಕಾಗಿ ಸರ್ಕಾರ ಕಾಯ್ದೆ ರೂಪಿಸಿ ಅನೇಕ ಸೇವಾ ಸೌಲಭ್ಯಗಳನ್ನು ಒದಗಿಸಿದೆ. ಅಂಗವೈಕಲ್ಯಕ್ಕೆ ಒಳಗಾದವರು ಎಲ್ಲಿಯವರೆಗೆ ವಿದ್ಯಾಭ್ಯಾಸ ಪಡೆಯುತ್ತಾರೋ ಅಲ್ಲಿಯವರೆಗೆ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡಬೇಕಿದೆ. ಇದರ ಪ್ರಯೋಜನ ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದರು.ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಇಲಾಖೆಯ ಮೆಲ್ವೀಚಾರಕಿ ಸುಮಂಗಲ ಐಬಕ್ಕನವರ ಅವರು ಅಂಗವಿಕಲರ ಬಲವರ್ಧನೆಗಾಗಿ ಇರುವ ಸರ್ಕಾರಿ ಯೋಜನೆಗಳ ಬಗ್ಗೆ ಉಪನ್ಯಾಸವನ್ನು ನೀಡಿದರು ಮತ್ತು ವಕೀಲರಾದ ಯಶಸ್ ಕೊಣ್ಣೂರು ಇವರು ಗ್ರಾಹಕರ ಸಂರಕ್ಷಣಾ ಕಾಯ್ದೆ ಗ್ರಾಹಕರ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆ ಉಪನ್ಯಾಸವನ್ನು ನೀಡಿದರು.ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರು ರಾಜಣ್ಣ ನ್ಯಾಮತಿ. ಕೆಆರ್ ಲಮಾಣಿ, ಹಿರಿಯ ನ್ಯಾಯವಾದಿ ಭಾರತೀ ಕುಲಕರ್ಣಿ, ಹಾಗೂ ವಿಶೇಷ ಚೇತನ ಇಲಾಖೆಯ ಸಿಬ್ಬಂದಿಗಳು ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳು ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳು ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.