ರಾಣಿಬೆನ್ನೂರಲ್ಲಿ ಪಿಂಚಣಿ ದಾರರ ದಿನಾಚರಣೆ : ವಾರ್ಷಿಕ ಸರ್ವಸಾಧಾರಣ ಸಭೆ, ಸನ್ಮಾನ ಸಮಾರಂಭ
Pensioners' Day celebrated in Ranibennur: Annual General Meeting, felicitation ceremony
ರಾಣೆಬೆನ್ನೂರು 18: ಸಮಾಜದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಿ ಕುಟುಂಬದ ನಿರ್ವಹಣೆ ಸವಾಲುಗಳ ಮಧ್ಯೆ ಕೂಡಿಟ್ಟ ಹಣವನ್ನು ಯಾವುದೇ ಕಾರಣಕ್ಕೂ ಹೆಚ್ಚಿನ ಬಡ್ಡಿ ಹಣದ ಆಸೆಗಾಗಿ ವಿನಿಮಯ ಮಾಡುವ ಮುನ್ನ ತುಂಬಾ ಜಾಗೃತೆಯಾಗಿ ಮುನ್ನಡೆಯಬೇಕಾಗಿದೆ ಎಂದು ಪೊಲೀಸ್ ವೃತ್ತ ನೀರೀಕ್ಷಕ ವೆಂಕಟೇಶ್ ಎನ್, ಕರೆ ನೀಡಿದರು. ಅವರು ಬುಧವಾರ ಇಲ್ಲಿನ ಗೌರಿಶಂಕರ ನಗರದ ನಿವೃತ್ತ ನೌಕರರ ಸಂಘದ ಆವರಣದಲ್ಲಿ ಆಯೋಜಿಸಲಾಗಿದ್ದ, ಪಿಂಚಣಿ ದಾರರ ದಿನಾಚರಣೆ, ಹಿರಿಯ ಪಿಂಚಣಿದಾರರ ಸನ್ಮಾನ, ವಾರ್ಷಿಕ ಸರ್ವಸಾಧಾರಣ ಸಭೆಯ ಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇತಿಹಾಸ ಮತ್ತು ಇಂದಿನ ಆಧುನಿಕ ಬದುಕು ಬಹಳಷ್ಟು ಕಷ್ಟಕರ ಸಂಗತಿಯಾಗಿದೆ. ಇದಕ್ಕೆಲ್ಲ ಕಾರಣ ಯಾಂತ್ರಿಕ ಜೀವನ. ಇಲ್ಲಿ ಯಾರಿಗೂ ದೂರುವ ಅಗತ್ಯವಿಲ್ಲ. ತಂದೆ ತಾಯಿ ತಮ್ಮ ಮಕ್ಕಳನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಬೆಳೆಸಿದ್ದರೂ, ದೊಡ್ಡವರಾದ ನಂತರ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹೆಣಕಾಡುವುದು ಸಹಜ. ಆದರೂ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸದೆ ಅವರ ಜೀವನ ಪರ್ಯಂತ ಪಾಲನೆ, ಪೋಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.
ಪಿಂಚಣಿದಾರರ -2025 ಸಾಲಿನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವಿಕಲಚೇತನ, ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಆಶು ನಧಾಫ್ ಅವರು, ಇಲಾಖೆಯಲ್ಲಿ ಹಿರಿಯ ನಾಗರಿಕರಿಗಾಗಿ ಸವಲತ್ತುಗಳು ಇವೆ. ಸಂಘಟನಾತ್ಮಕವಾಗಿ ಇಲಾಖೆಯ ಪ್ರಯೋಜನ ಪಡೆಯಲು ಮುಂದಾಗ ಬೇಕಾಗಿದೆ. ತಂದೆ ತಾಯಿಗೆ ಯಾವುದೇ ರೀತಿಯ ಮಾನಸಿಕ ಹಿಂಸೆಯಾಗದ ರೀತಿಯಲ್ಲಿ ಅವರನ್ನು ಪಾಲನೆ ಪೋಷಣೆ ಮಾಡಬೇಕಾದ ಅಗತ್ಯವಿದೆ. ತಂದೆ ತಾಯಿ ಸುಖ ಮತ್ತು ಸಂತೋಷ, ಸಮೃದ್ಧಿಯಾಗಿದ್ದರೆ ಮಕ್ಕಳ ಬದುಕು ಎಂದೆಂದಿಗೂ ಸುಖ ಮತ್ತು ಸಂತೋಷದಿಂದ ಕೂಡಿರುತ್ತದೆ ಎನ್ನುವುದನ್ನು ಮಕ್ಕಳು ಅರ್ಥಮಾಡಿಕೊಳ್ಳಬೇಕು. ಭಾರತೀಯ ಸಂಸ್ಕೃತಿ ಕೊಡುವುದು ಮತ್ತು ತೆಗೆದುಕೊಳ್ಳುವುದು ಸಹಜ ಪ್ರಕ್ರಿಯೆ. ತಮ್ಮ ವೃತ್ತಿ ಜೀವನದಲ್ಲಿ ಕೂಡಿಟ್ಟ ಹಣವನ್ನು, ಸಂಘದ ಮೂಲಕ ಇಟ್ಟುಕೊಂಡು, ಯಾರಿಗೂ ಹೊರೆಯಾಗದ ರೀತಿಯಲ್ಲಿ ತಮ್ಮ ಜೀವನ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಅವರು ನಿವೃತ್ತ ಹಿರಿಯ ಜೀವಿಗಳಿಗೆ, ಪ್ರಪಂಚಣಿದಾರರಿಗೆ ಕರೆ ನೀಡಿದರು.
ಕ. ರಾ.ನಿ. ನೌ. ಸಂಘದ ಅಧ್ಯಕ್ಷ ವಿ. ಎಂ. ಕರ್ಜಗಿ, ಅವರು ಭವ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಬಿ. ಬಿ. ಗೌಡರ, ಎಸ್.ಎಂ. ಸಂಕಣ್ಣನವರ, ಎಸ್. ಆರ್. ಪಾಟೀಲ, ಎಂ.ಬಿ. ಬೆನಕಣ್ಣನವರ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ 75 ಕ್ಕೂ ಹೆಚ್ಚು ಹಿರಿಯ ಪಿಂಚಣಿದಾರಾರಿಗೆ ಸಾರ್ವಜನಿಕವಾಗಿ ಅಭಿನಂದಿಸಿ, ಫಲ, ಪುಷ್ಪ ಮತ್ತು ಶಾಲು ಸ್ಮರಣೆಗೆ ಇತ್ತು ಗೌರವಿಸಿ ಸನ್ಮಾನಿಸಲಾಯಿತು. ಕೊಗನೂರ ದಂಪತಿಗಳು ಪ್ರಾರ್ಥಿಸಿದರು. ಕಲಾವಿದೆ ಮಂಜುಳಾ ಮಾಜಿಗೌಡರ ಸಂಗೀತ ಸೇವೆ ಸಲ್ಲಿಸಿದರು. ಮೃತ್ಯುಂಜಯ ಮುದ್ದಿ ಸ್ವಾಗತಿಸಿ, ಜಿ.ಬಿ. ಬೆಳವಿಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್. ಕೆ. ನೆಸ್ವಿ ನಿರೂಪಿಸಿ, ಎನ್. ಎಸ್. ಪಾಟೀಲ, ವಂದಿಸಿದರು. ಸಾವಿರಕ್ಕೂ ಹೆಚ್ಚು ವಿವೃತ ನೌಕರರು ಮತ್ತು ಪಿಂಚಣಿದಾರರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 