ಪಾಲಕರ ಪೋಷಕರ ಸಭೆ ಬಹಳ ಮಾಹತ್ವದ್ದು: ವೇದ ಮೂರ್ತಿ ಸೋಮಯ್ಯ ಹಿರೇಮಠ ಅಭಿಮತ
Parents' meetings are very important: Veda Murthy Somaiah Hiremath's opinion
ಲೋಕದರ್ಶನ ವರದಿ
ಶಿಗ್ಗಾವಿ 08 : ಮಕ್ಕಳ ವಿದ್ಯಾಭ್ಯಾಸದ ಕುರಿತು ಪಾಲಕರ ಸಮ್ಮುಖದಲ್ಲಿ ಪ್ರಗತಿ ಪರೀಶೀಲನೆಯಾಗುವ ಪಾಲಕರ ಪೋಷಕರ ಸಭೆ ಬಹಳ ಮಾಹತ್ವದ್ದು ಎಂದು ವೇದ ಮೂರ್ತಿ ಸೋಮಯ್ಯ ಹಿರೇಮಠ ಅವರು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ತಡಸ ವ್ಯಾಪ್ತಿಯ ತಾಲೂಕಿನ ಕುನ್ನೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ಶನಿವಾರ ಆಯೋಜಿಸಲಾದ ಪೋಷಕರು ಶಿಕ್ಷಕರ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಶೋಧನಾರ್ಥಿ ಶಿವಾನಂದ ದೊಡ್ಡಮನಿ ಮಾತನಾಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವಲ್ಲಿ ಪೋಷಕರು ಶಿಕ್ಷಕರ ಸಭೆ ಅತ್ಯಂತ ಪರಿಣಾಮಕಾರಿ ಆಗಿದೆ ಎಂದರು.
ಎಸ್.ಡಿ.ಎಂ.ಸಿ ಮೌನೇಶ ಅಧ್ಯಕ್ಷ ಕಮ್ಮಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಮಹದೇವಪ್ಪ ಬಸರಿಕಟ್ಟಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಸನಗೌಡ ಬ್ಯಾಹಟ್ಟಿ, ಮುಖಂಡ ಸಂತೋಷ ಮೂಳೆ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಮಮತಾಜಬೇಗಂ ಒಂಟಿ, ಸಹ ಶಿಕ್ಷಕಿ ನಾಗರತ್ನ ರಡ್ಡೇರ್, ಎಸ್. ಡಿ.ಎಂ. ಸಿ ಉಪಾಧ್ಯಕ್ಷರಾದ ರೂಪಾ ಬಾರಕೇರ, ಗಂಡು ಮಕ್ಕಳ ಶಾಲೆ ಉಪಾಧ್ಯಕ್ಷರಾದ ನಿರ್ಮಲಾ ಹಿರೇಮಠ, ಸದಸ್ಯರಾದ ಈರಣ್ಣ ಮಾಳೋಜನವರ, ಅಜಿತ್ ಕೊಳೂರ್, ಪ್ರಕಾಶ್ ಗೋಣಿ, ಮಾಲಾ ಅರಳಪ್ಪನವರ, ಶೋಭಾ ಮಣಕಟ್ಟಿ, ಗೀತಾ ಮರಿಸಿದ್ದಣ್ಣವರ, ಸರಸ್ವತಿ ಬಾರ್ಕಿ, ರತ್ನಾವ್ವ ಕೊಳೂರ್, ಸವಿತಾ ಕನಕಣ್ಣವರ, ಶೃತಿ ಸೊಗಲಿ ಹಿರಿಯರಾದ ಶಾಂತಪ್ಪ ಮತ್ತಿಗಟ್ಟಿ, ಬಸವರಾಜ ಬೂದಿಹಾಳ ಸೇರಿದಂತೆ ಗ್ರಾಮದ ಹಿರಿಯರು ಪಾಲಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 