ಮಾಸ್ತಮರಡಿಯಲ್ಲಿ ಪಾಲಕರ ಸಭೆ: ಸರಕಾರಿ ಶಾಲೆಗಳ ಪ್ರಗತಿಗೆ ಸಮುದಾಯದ ಸಹಕಾರ ಅಗತ್ಯ
Parents' meeting in Mastamaradi government school
ಬೆಳಗಾವಿ ದಿ 26: ಸರಕಾರಿ ಶಾಲೆಗಳ ಸಬಲೀಕರಣ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾಲಕರ. ಪೋಷಕರ ಸಹಾಯ ಸಹಕಾರವು ಅಗತ್ಯವಾಗಿ ಬೇಕು,ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನೇ ಮುಖ್ಯವಾಗಿಸಿಕೊಂಡು ಸರಕಾರಿ ಶಾಲೆಗಳ ಪ್ರಗತಿಗೆ ಸರ್ವರೂ ಶ್ರಮಿಸ ಬೇಕೆಂದು ತಾಲೂಕಾ ಕ್ಷೇತ್ರ ಸಂಪನ್ಮೂಲ. ಕೇಂದ್ರದ ಸಮನ್ವಯಧಿಕಾರಿಗಳಾದ ಡಾ. ಎಮ್ ಎಸ್ ಮೇದಾರ ರವರು ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಮಾಸ್ತಮರಡಿಯ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಯಲ್ಲಿಂದು ಪಾಲಕರ ಸಭೆಯಲ್ಲಿ ಪಾಲ್ಗೊಂಡು ಪಾಲಕರ ಜೊತೆಗೆ ಶೈಕ್ಷಣಿಕ ಕಾರ್ಯಗಳ ಕುರಿತು ಮಾತನಾಡಿದರು. ಜೊತೆಗೆ ಸರಕಾರಿ ಸೌಲಭ್ಯ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಲು ಮಾರ್ಗದರ್ಶನ ಮಾಡಿದರು.
ಜೊತೆಗೆ ಹೆಚ್ಚಿನ ಸಂಖ್ಯೆಯ ಪಾಲಕರು ಉಪಸ್ಥಿತರಿದ್ದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಹಿರಿಯ ಮುಖ್ಯ್ಯೊಪಾದ್ಯಾ ಯರು ಹಾಗೂ ಸಹ ಶಿಕ್ಷಕರು. ಶಿಕ್ಷಕಿಯರು ವರ್ಗವಾರು ವಿದ್ಯಾರ್ಥಿಗಳ ಪಾಲಕರೊಂದಿಗೆ ಅವರ ಕಲಿಕೆ. ಅವರ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚಿಸಿ ಅವರ ಶೈಕ್ಷಣಿಕ ಕಲಿಕೆ ಕುರಿತು ಮಾರ್ಗದರ್ಶನ ಮಾಡಿದರು
ಶಾಲಾ ಹಿರಿಯ ಮುಖ್ಯ್ಯೊ ಪಾದ್ಯಾ ಯರಾದ ಬಸವರಾಜ ಫಕೀರ್ಪ ಸುಣಗಾರ ರವರು ಪ್ರಾ ಸ್ತಾವಿಕವಾಗಿ ಮಾತನಾಡಿ ಶಾಲೆಯ ಪ್ರಗತಿ ವಿವರಿಸಿ ಶಾಲೆಗೆ ಸಮುದಾಯದ ಸಹಕಾರ ಬಯಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಅನ್ನಪೂರ್ಣ ಬಾಳಪ್ಪ ಬುರಾಣಿ, ಸದಸ್ಯರಾದ ಮಹಾನಂದಾ ಮರಕಟ್ಟಿ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶಂಕರ ಅಂಬೋಜಿ, ಉಪಾಧ್ಯಕ್ಷರಾದ ಅನ್ನಪೂರ್ಣ ಹಣಬರ, ಸದಸ್ಯರಾದ ಈರ್ಪ ಮಾತಾರಿ, ನಾಗೇಶ್ ಹಣಬರ, ಸುನೀತಾ ಬಸವರಾಜ ಕುರಂಗಿ, ಸುನೀತಾ ನಾ ಕುರಂಗಿ, ಸಾಂವಕ್ಕ ಪರಂಡೆ, ಸುಜಾತಾ ಅಂಬೋಜಿ, ಸರಸ್ವತಿ ಕುರಂಗಿ ಸೇರಿದಂತೆ ಸರ್ವ ಸದಸ್ಯರು. ಹಿರಿಯ ಮುಖ್ಯ್ಯೊಪಾದ್ಯಾಯರಾದ ಬಸವರಾಜ ಫಕೀರ್ಪ ಸುಣಗಾರ ಸೇರಿದಂತೆ ಸರ್ವ ಶಿಕ್ಷಕರು ಶಿಕ್ಷಕಿಯರು, ವಿದ್ಯಾರ್ಥಿಗಳು, ಪಾಲಕರು ಪೋಷಕರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಸ್ವಾಗತ ಗೀತೆಯನ್ನು ಹೇಳಿದರು.
ಪ್ರಾರಂಭದಲ್ಲಿ ಶಿಕ್ಷಕರಾದ ಬಸವರಾಜ ಪಾಟೀಲರು ಸ್ವಾಗತಿಸಿದರು, ಶಿಕ್ಷಕರಾದ ವಿ ಎಸ್ ಚವಾಣರವರು ಕಾರ್ಯಕ್ರಮನಿರೂಪಿಸಿದರು.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 