‘ಕನಕದಾಸರ ತಾತ್ವಿಕತೆ :ಆಧುನಿಕ ಸಮಾಜದ ಪರಿಕಲ್ಪನೆ’ ವಿಷಯ ಕುರಿತ
ಧಾರವಾಡ 14 : ಹದಿನಾರನೆಯ ಶತಮಾನದಲ್ಲಿಯೇ ಸಮಾನತೆಯ ಮಂತ್ರ ಸಾರಿದವರು ಕನಕದಾಸರು. ಧರ್ಮ ಜಾತಿಗಳಗಳ ಮಧ್ಯೆ ಸ್ಪರ್ಧೆ ಏರ್ಡದೇ ಸಾಮರಸ್ಯದಿಂದ ಪ್ರತಿಯೊಬ್ಬರು ಬಾಳಬೇಕು ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಹೇಳಿದರು.
ಕವಿವಿ ಕನಕ ಅಧ್ಯಯನ ಪೀಠದ ಆಶ್ರಯದಲ್ಲಿ ಕನಕ ಜಯಂತಿಯ ಅಂಗವಾಗಿ ಶನಿವಾರ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದ ಆಶ್ರಯದಲ್ಲಿ ಕನಕ ಜಯಂತಿಯ ನಿಮಿತ್ತ ‘ಕನಕದಾಸರ ತಾತ್ವಿಕತೆ :ಆಧುನಿಕ ಸಮಾಜದ ಪರಿಕಲ್ಪನೆ’ ವಿಷಯ ಕುರಿತ ಏರಿ್ಡಸಲಾಗಿದ್ದಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವ ಪೀಳಿಗೆಯವರು ಕನಕದಾಸರ ಕೀರ್ತನೆಗಳನ್ನು ಪ್ರತಿಯೊಬ್ಬರು ಓದಿ ತಿಳಿದುಕೊಳ್ಳಬೇಕು ಎಂದು ಹೇಳಿದರು.ಬಸವ ಬುದ್ದ ಅಂಬೇಡ್ಕರರ ವಿಚಾರಗಳನ್ನು ತಮ್ಮ ಸಾಹಿತ್ಯದಲ್ಲಿ ಮನು ಕುಲದ ಉದ್ಧಾರಕ್ಕೆ ಕನಕದಾಸರು ತಿಳಿಸಿ ಹೇಳಿದ್ದಾರೆ ಎಂದರು.
ಆಶಯ ಭಾಷಣ ಮಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ, ಕನಕದಾಸರನ್ನು ದೈವತ್ವಕ್ಕೆ ಹೋಲಿಸಿ ಜನರಿಂದ ದೂರ ಇಡಲು ಪ್ರಯತ್ನಿಸಲಾಗುತ್ತಿದೆ. ಹೀಗೆ ಮಾಡಬಾರದು ಎಂದು ಹೇಳಿದ ಅವರು ಸಣ್ಣ ಕೀರ್ತನೆಗಳ ಮೂಲಕ ಇಡೀ ಭಾರತದ ಸಂಪ್ರದಾಯವನ್ನು ಕನಕದಾಸರು ಕಟ್ಟಿಕೊಟ್ಟಿದ್ದಾರೆ. ಪುರುಷ ಪ್ರಧಾನ ಸಮಾಜವನ್ನು ಕನಕದಾಸರು ಬಹಳ ಹಿಂದೆಯೇ ಟೀಕಿಸಿದ್ದಾರೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಕುಲಪತಿ ಪ್ರೊ.ಬಿ.ಎಂ.ಪಾಟೀಲ ಬುದ್ದ ಡಾ.ಅಂಬೇಡ್ಕರರ ಅವರ ಆಶಯಗಳು ಕನಕದಾಸರ ಸಾಹಿತ್ಯದಲ್ಲಿವೆ ಎಂದು ಹೇಳಿದರು.ಡಾ.ಶಶಿಧರ ಜಿ. ವೈದ್ಯ ಕನಕದಾಸ: ಎ ವಿಜನರಿ ಆಫ್ ಹಾರ್ಮನಿ’ ಇಂಗ್ಲೀಷ ಕೃತಿಯನ್ನು ಸಮಾರಂಭದಲ್ಲಿ ಬಿಡುಗಡೆ ಬಿಡುಗಡೆ ಮಾಡಲಾಯಿತು.
ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಮಾಜಿ ಕುಲಪತಿ ಪ್ರೊ.ಕೆ.ಬಿ.ಗುಡಸಿ, ರವಿ ಮಾಳಿಗೇರ, ಡಿ.ಡಿ ಮಾಳಗಿ ಉಪಸ್ಥಿತರಿದ್ದರು. ಮೌಲ್ಯಮಾಪನ ಕುಲಸಚಿವ ಪ್ರೊ.ನಿಜಲಿಂಗಪ್ಪ ವಾಯ್.ಮಟ್ಟಿಹಾಳ ಸ್ವಾಗತಿಸಿದರು. ರಾಷ್ಟ್ರೀಯ ಸಮ್ಮೇಳನದಸಂಘಟನಾ ಕಾರ್ಯದರ್ಶಿ ಹಾಗೂ ಕನಕ ಅಧ್ಯಯನ ಪೀಠದ ಸಂಯೋಜಕ ಡಾ.ಹನಮಗೌಡ ಸಿ. ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ವೇದಮೂರ್ತಿ ಎ.ಬಿ. ಪರಿಚಯಿಸಿದರು. ಡಾ.ಅನಿತಾ ಹಾಲಮತ ನಿರೂಪಿಸಿದರು.ಕಲಾನಿಕಾಯ, ಡೀನ್ಪ್ರೊ. ಮೃತ್ಯುಂಜಯ ಅಗಡಿ ವಂದಿಸಿದರು.