ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಮಹತ್ವದ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಮಹತ್ವದ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ New office bearers of the association were elected at an important meeting held at the town's touri

 ಮುದ್ದೇಬಿಹಾಳ 23 : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಶನಿವಾರ ಮುದ್ದೇಬಿಹಾಳ ಮಹತ್ವದ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಸಂಗಮೇಶ ವಾಲಿಕಾರ ಅವರು ಸರ್ವಾನುಮತದಿಂದ ಆಯ್ಕೆಯಾದರು. ಈ ವೇಳೆ  ನಿಕಟಪೂರ್ವ ನೌಕರರು ಸಂಘದ ಅಧ್ಯಕ್ಷ,ಹಾಗೂ ಪಿಡಿಓ ಪಿ.ಎಸ್‌. ನಾಯ್ಕೋಡಿ  ಮಾತನಾಡಿ ಸಂಘದ ನಿರ್ಗಮಿತ ಮುಖಂಡರಾದ ಪಿ.ಎಸ್‌. ನಾಯ್ಕೋಡಿ ಅವರು, "ಡಾ. ಬಿ.ಆರ್‌. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಶಕ್ತಿ ನೀಡಿದ್ದಾರೆ.

ಈ ಹಾದಿಯಲ್ಲಿ ಸಾಗಿ ನಮ್ಮ ಹಕ್ಕುಗಳನ್ನು ಪಡೆಯಬೇಕು. ಕಳೆದ ಐದು ವರ್ಷಗಳಲ್ಲಿ ನೌಕರರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ ತೃಪ್ತಿ ನನಗಿದೆ. ವಾಲ್ಮೀಕಿ ಶ್ರೀಗಳ ಹೋರಾಟದಲ್ಲಿ ನಾವು ಸಕ್ರಿಯವಾಗಿ ಪಾಲ್ಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ನೌಕರರಿಗಾಗಿ ಪ್ರತ್ಯೇಕ ಬ್ಯಾಂಕ್ ಸ್ಥಾಪಿಸುವ ಗುರಿ ಹೊಂದೋಣ," ಎಂದರು. ಅಲ್ಲದೆ, ತಮ್ಮ ಅವಧಿಯಲ್ಲಿ ಸಹಕರಿಸಿದ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಲಭೀಮ ನಾಯಕ ಹಾಗೂ ನೌಕರ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದರು. ಆಯ್ಕೆಯ ನಂತರ ಮಾತನಾಡಿದ ನೂತನ ಅಧ್ಯಕ್ಷ ಸಂಗಮೇಶ ವಾಲಿಕಾರ, "ನಾವೆಲ್ಲರೂ ಜಾತಿ-ಭೇದ ಮರೆತು ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಮಾತ್ರ ನಮಗೆ ನ್ಯಾಯ ಸಿಗಲು ಸಾಧ್ಯ.

ನಮ್ಮ ಸಮಾಜದ ನೌಕರರ ಹಿತರಕ್ಷಣೆ ಮತ್ತು ಮೀಸಲಾತಿ ಸೌಲಭ್ಯಗಳ ವಿಚಾರದಲ್ಲಿ ಸಂಘವು ಸದಾ ಜಾಗೃತವಾಗಿರುತ್ತದೆ. ಎಲ್ಲರ ಸಹಕಾರದೊಂದಿಗೆ ಸಂಘಟನೆಯನ್ನು ಬಲಿಷ್ಠಗೊಳಿಸಲಾಗುವುದು," ಎಂದು ಭರವಸೆ ನೀಡಿದರು.ತಾಲೂಕು ಎಸ್‌.ಟಿ (ವಾಲ್ಮೀಕಿ ನಾಯಕ) ನೌಕರರ ಸಂಘದ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಗೌರವ ಅಧ್ಯಕ್ಷ ವಿ.ಜಿ. ರಾಮಚಂದ್ರಯ್ಯ ನೂತನ ಅಧ್ಯಕ್ಷ ಸಂಗಮೇಶ ವಾಲಿಕಾರ, ಉಪಾಧ್ಯಕ್ಷ ಬಸನಗೌಡ ಪೋಲಿಸಪಾಟೀಲ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮುದ್ದೇಬಿಹಾಳ, ಸಹ ಕಾರ್ಯದರ್ಶಿ: ಜಿ.ಆಯ್‌. ಗುರಿಕಾರ, ಸಂಘಟನಾ ಕಾರ್ಯದರ್ಶಿಗಳು: ಸಂಜು ಜಾಲವಾದ ಮತ್ತು ಎಚ್‌.ಬಿ. ನಾಯ್ಕರ, ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಬಿ.ಜಿ. ಬಿರಾದಾರ, ಎಸ್‌.ಕೆ. ಬಿರಾದಾರ, ಸುನಿಲ್ ಹವಲ್ದಾರ, ಕೆಇಬಿ ನೌಕರರ ಸಂಘದ ಅಧ್ಯಕ್ಷ ರಂಗನಾಥ ನಾಯಕ, ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಲಭೀಮ ನಾಯಕ, ರವಿ ಮಾಲಿಪಾಟೀಲ, ದೇವೇಂದ್ರ ವಾಲಿಕಾರ, ಬಸವರಾಜ ಹಳ್ಳಿ, ಸೋಮನಾಥ ಗಸ್ತಿಗಾರ, ಸಂಗಮೇಶ ಗುತ್ತಿಗೆದಾರ ಸೇರಿದಂತೆ ಸಮಾಜದ ನೂರಾರು ನೌಕರರು ಹಾಗೂ ಬಂಧುಗಳು,ಸ ೇರಿದಂತೆ ಉಪಸ್ಥಿತರಿದ್ದರು.