ಸಂಶೋಧನೆಗೆ ನವಚೇತನ: ವಿಶ್ವವಿದ್ಯಾಲಯದ ಜರುಗಿದ ಪೇಟೆಂಟ್ ಕಾರ್ಯಾಗಾರದ ದ್ವಿತೀಯ ದಿನ ಯಶಸ್ವಿ
New impetus for research: Second day of university's patent workshop a success
ಸಂಶೋಧನೆಗೆ ನವಚೇತನ: ವಿಶ್ವವಿದ್ಯಾಲಯದ ಜರುಗಿದ ಪೇಟೆಂಟ್ ಕಾರ್ಯಾಗಾರದ ದ್ವಿತೀಯ ದಿನ ಯಶಸ್ವಿ
ಬೆಳಗಾವಿ, ಸೆಪ್ಟೆಂಬರ್ 13: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂಶೋಧನಾ ವಿಧಾನಗಳು ಮತ್ತು ಪೇಟೆಂಟ್ ಫೈಲಿಂಗ್ ಕುರಿತ ಎರಡು ದಿನಗಳ ಕಾರ್ಯಾಗಾರದ ಎರಡನೇ ದಿನವು ಪ್ರಾಯೋಗಿಕ ತರಬೇತಿ ನಡೇದವು. ಈ ಅವಧಿಗಳಲ್ಲಿ ಅಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಪೇಟೆಂಟ್ ಸಲ್ಲಿಕೆಗಳ ಕುರಿತು ನೇರ ಅನುಭವ ನೀಡಲಾಯಿತು. ಈ ಕಾರ್ಯಕ್ರಮವನ್ನು ಪಿಎಂ-ಉಷಾ (ಮೇರು) ಅಡಿಯಲ್ಲಿ ಎನ್.ಐ.ಆರ್.ಎಫ್ ಕೋಶದ ವತಿಯಿಂದ ಆಯೋಜಿಸಲಾಗಿತ್ತು.
ಜಿಐಟಿಎಎಂ (ಡೀಮ್ಡ್ ವಿಶ್ವವಿದ್ಯಾಲಯ), ಬೆಂಗಳೂರಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ್ ಕುಮಾರ್ ಎಂ.ವಿ. ಅವರು ಸಂವಾದಾತ್ಮಕ ಅವಧಿಯನ್ನು ನಡೆಸಿ, ಕೇಸ್ ಸ್ಟಡಿಗಳ ಮೂಲಕ, ಪೇಟೆಂಟ್ ಕರಡುಗಳನ್ನು ಸಿದ್ಧಪಡಿಸುವುದು ಮತ್ತು ಆವಿಷ್ಕಾರದ ವಿವರಣೆಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯ ಬಗ್ಗೆ ಮಾರ್ಗದರ್ಶನ ನೀಡಿದರು.
ಮುಂದಿನ ಅವಧಿಯಲ್ಲಿ, ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜ್, ಬೆಂಗಳೂರಿನ ರೊಬೊಟಿಕ್ಸ್ ಮತ್ತು ಕೃತಕ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರುದ್ರೇಶ್ ಎಂ., ಸಂಶೋಧನಾ ವಿಷಯಗಳ ಮೇಲೆ ಆಧಾರಿತವಾದ ಕೇಸ್ ಸ್ಟಡಿಗಳ ಕುರಿತು ವಿವರಿಸಿದರು. ಅವರು ಬೌದ್ಧಿಕ ಆಸ್ತಿ (ಇಂಟಲೆಕ್ಚುವಲ್ ಪ್ರಾಪರ್ಟಿ), ಡಿಸೈನ್ ಥಿಂಕಿಂಗ್ ವಿಧಾನಗಳು ಮತ್ತು ಆನ್ಲೈನ್ ಪೇಟೆಂಟ್ ಹುಡುಕಾಟದ ಪರಿಕರಗಳ ಬಗ್ಗೆಯೂ ಪ್ರಾತ್ಯಕ್ಷಿಕೆ ಮಾಡಿದರು.
ಈ ಪ್ರಾಯೋಗಿಕ ಅವಧಿಗಳನ್ನು ವಿಶ್ವವಿದ್ಯಾಲಯದ ಎನ್.ಐ.ಆರ್.ಎಫ್ ಕೋಶದ ಸದಸ್ಯರಾದ ಪ್ರೊ. ಶಿವಾನಂದ ಗೋರನಾಳೆ ಇವರು ಸಂಘಟಿಸಿ, ಸಂಶೋಧನೆಯ ಫಲಿತಾಂಶಗಳನ್ನು ಬಲಪಡಿಸುವಲ್ಲಿ ಪ್ರಾಯೋಗಿಕ ತರಬೇತಿಯ ಪ್ರಾಮುಖ್ಯತೆಯನ್ನು ಅರಿವು ಮೂಡಿಸಿದರು.
ಎನ್.ಐ.ಆರ್.ಎಫ್ ಕೋಶದ ಸದಸ್ಯರಾದ ಡಾ. ಮಹೇಶ್ ಕುಮಾರ್ ಅವರು ಎರಡು ದಿನಗಳ ಕಾರ್ಯಾಗಾರದ ವರದಿಯನ್ನು ಮಂಡಿಸಿದರು, ವಿವಿಧ ವಿಭಾಗಗಳ ಡೀನರು, ಅಧ್ಯಕ್ಷರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಎನ್.ಐ.ಆರ್.ಎಫ್ ಕೋಶದ ಸದಸ್ಯರುಗಳು ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಕಾರ್ಯಾಗಾರವು ಮುಕ್ತಾಯಗೊಂಡಿತು. ಸಂಶೋಧನಾ ವಿದ್ಯಾರ್ಥಿ ಅಮೃತಾ ನಿರೂಪಿಸಿದರು. ಸದಸ್ಯ ಕಾರ್ಯದರ್ಶಿ ಸಂತೋಷ ರಾಜಪೂತ್ ಇವರು ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 