ತೀವ್ರ ಹದಗೆಟ್ಟ ನವಾಜ್ ಷರೀಫ್ ಆರೋಗ್ಯ

ಲಾಹೋರ್, 10   ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್  ಆರೋಗ್ಯ ತೀವ್ರ ಹದಗೆಟ್ಟಿದ್ದು, ಸಾವು  ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ .ಈ ಹಿನ್ನೆಲೆಯಲ್ಲಿ ಅವರನ್ನುಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ ಎನ್ನಲಾಗಿದೆ .

ಸದ್ಯ ಅವರು ಲಂಡನ್  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಯಾವ ಸುಧಾರಣೆಯೂ  ಕಂಡುಬಂದಿಲ್ಲ.ಲಾಹೋರ್ ಹೈಕೋರ್ಟ್ ಸದ್ಯದ  ಚಿಕಿತ್ಸೆಗಾಗಿ  ಅವರಿಗೆ ನಾಲ್ಕು ವಾರಗಳ ಕಾಲವಕಾಶ ನೀಡಿದ್ದು, ಈಗ ವೈದ್ಯರ ಸಲಹೆ ಮೇರೆಗೆ ಅದನ್ನು ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ .