ನವೀನ್ ಸಜ್ಜು ಎರಡನೇ ಹಾಡು ಬಿಡುಗಡೆ’ಲೋ ನವೀನ’ ಚಿತ್ರದ ಎರಡನೇ ಹಾಡು ಬಿಡುಗಡೆ
Naveen Sajju's second song released The second song of the movie 'Lo Naveen' has been released.
ತಂಡಕ್ಕೆ ಸಾಥ್ ನೀಡಿದ ನಟಿ ಸೋನಾಲ್ ಮೊಂತೆರೊ ಗಾಯಕನಾಗಿ ಜನಪ್ರಿಯರಾಗಿರುವ ನವೀನ್ ಸಜ್ಜು ನಾಯಕನಾಗಿ ನಟಿಸಿರುವ ಮೊದಲ ಚಿತ್ರ ’ಲೋ ನವೀನ’. ಈಗಾಗಲೇ ಈ ಚಿತ್ರದ ಜನಪದ ಶೈಲಿಯ ’ಕೋಣಾಣೆ ...’ ಹಾಡು ಬಿಡುಗಡೆಯಾಗಿ ಎಲ್ಲರ ಮನ ಗೆದ್ದಿದೆ. ಇತ್ತೀಚೆಗೆ ’ಲೋ ನವೀನ’ ಚಿತ್ರದ ’ಕೈ ತೊಳ್ಕೊಂಡ್ ಮುಟ್ಟಂಗವ್ಳೆ ನನ್ ಹುಡುಗಿ ...’ ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ನಟಿ ಸೋನಾಲ್ ಮೊಂತೆರೊ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಮಾಜಿ ಸಂಸದ ಪುಟ್ಟರಾಜು, ರಾಮಮೂರ್ತಿ, ಮಾದೇಶ್ ಮುಂತಾದ ಗಣ್ಯರು ಹಾಡು ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದು ಹಾರೈಸಿದರು. ಈ ಸಂದರ್ಭದಲ್ಲಿ ನಾಯಕ ಕಮ್ ಸಂಗೀತ ನಿರ್ದೇಶಕ ನವೀನ್ ಸಜ್ಜು ಮಾತನಾಡಿ, ’ನಾನು ಮೂಲತಃ ಮಳವಳ್ಳಿಯವನು. ಹಳ್ಳಿ ಪರಿಸರದಲ್ಲೇ ಬೆಳೆದವನು.
ಗಾಯಕನಾಗಿದ್ದ ನಾನು ಈ ಚಿತ್ರದ ಮೂಲಕ ನಾಯಕನಾಗಿದ್ದೇನೆ. ಇದಕ್ಕೆ ಕಾರಣರಾದವರು ನಮ್ಮ ಚಿತ್ರದ ನಿರ್ಮಾಪಕರಾದ ಬೆನ್ ಚಿಕ್ಕಸ್ವಾಮಿ ಹಾಗೂ ಕೀರ್ತಿಸ್ವಾಮಿ. ನಾನು ಕಾರ್ಯಕ್ರಮದ ನಿಮಿತ್ತ ಅಮೇರಿಕಾಗೆ ಹೋದಾಗ ಅವರನ್ನು ಮಾದೇಶ್ ಅವರು ಭೇಟಿ ಮಾಡಿಸಿದರು. ಗ್ರಾಮೀಣಾ ಸೊಗಡಿನ ಕಥೆ ಕೇಳಿ ಇಷ್ಟಪಟ್ಟ ಬೆನ್ ಚಿಕ್ಕಸ್ವಾಮಿ ಹಾಗೂ ಕೀರ್ತಿಸ್ವಾಮಿ ನಿರ್ಮಾಣಕ್ಕೆ ಮುಂದಾದರು. ಅವರಿಗೆ ನನ್ನ ಅನಂತ ಧನ್ಯವಾದ. ಇನ್ನೂ, ಈ ಚಿತ್ರಕ್ಕ ನಾನೇ ಸಂಗೀತ ನೀಡಿದ್ದೇನೆ. ಈಗಾಗಲೇ ಚಿತ್ರದ ಮೊದಲ ಹಾಡು ’ಕೋಣಾಣೆ’ ನೀರೀಕ್ಷೆಗೂ ಮೀರಿ ಜನಪ್ರಿಯವಾಗಿದೆ. ಏಳು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ಈಗ ಚಿತ್ರದ ಎರಡನೇ ಹಾಡು ’ಕೈ ತೊಳ್ಕೊಂಡ್ ಮುಟ್ಟಂಗವ್ಳೆ ನನ್ ಹುಡುಗಿ ...’ ಅನಾವರಣವಾಗಿದೆ. ಇದು ನಾಯಕಿಯನ್ನು ಪರಿಚಯಿಸುವ ಗೀತೆ ಕೂಡ. ಈ ಹಾಡನ್ನು ಜನಪ್ರಿಯ ನಾಯಕಿ ಸೋನಾಲ್ ಅವರು ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಅಂದಾನಿ ಅವರು ಹಾಡನ್ನು ಬರೆದಿದ್ದಾರೆ. ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಸಮಾರಂಭಕ್ಕೆ ಆಗಮಿಸಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ.
ಉಳಿದ ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ’ ಎಂದರು. ನಾನು ಮಳವಳ್ಳಿಯವನು. ಚಿಕ್ಕವಯಸ್ಸಿನಲ್ಲೇ ಗ್ರಾಮೀಣ ಜನಪದ ಹಾಡುಗಳನ್ನು ಕೇಳುತ್ತಾ ಬೆಳೆದವನು ಎಂದು ಮಾತನಾಡಿದ ನಿರ್ಮಾಪಕ ಬೆನ್ ಚಿಕ್ಕಸ್ವಾಮಿ, ’ನಲವತ್ತು ವರ್ಷಗಳಿಂದ ಅಮೇರಿಕಾದಲ್ಲಿದ್ದರೂ ಕನ್ನಡವನ್ನೇ ಮಾತನಾಡುತ್ತೇನೆ. ದಿನ ಮುದ್ದೆ , ಉಪ್ಸಾರು ತಿನ್ನುತ್ತೇನೆ. ನವೀನ್ ಸಜ್ಜು ಹೇಳಿದ ಗ್ರಾಮೀಣ ಸೊಗಡಿನ ಕಥೆ ಇಷ್ಚವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆವು’ ಎಂದರು. ’ಚಿಕ್ಕಂದಿನಿಂದಲೂ ನಟಿಯಾಗಬೇಕೆಂಬ ಕನಸು. ಆ ಕನಸು ಈಗ ನನಸಾಗಿದೆ. ಅವಕಾಶ ನೀಡಿದ ನವೀನ್ ಸಜ್ಜು ಅವರಿಗೆ, ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ’ ಎಂದರು ನಾಯಕಿ ವರ್ಷ. ’ಇದು ನನ್ನ ಮೊದಲ ನಿರ್ದೇಶನದ ಚಿತ್ರ. ’ಲೋ ನವೀನ’ ಚಿತ್ರ ಉತ್ತಮವಾಗಿ ಮೂಡಿಬರಲು ಚಿತ್ರತಂಡದ ಸಹಕಾರ ಅಪಾರ’ ಎಂದು ನಿರ್ದೇಶಕ ಧನುರ್ಧಾರಿ ಪವನ್ ತಿಳಿಸಿದರು. ಛಾಯಾಗ್ರಾಹಕ ರಿಷಿಕೇಶ್, ನೃತ್ಯ ನಿರ್ದೇಶಕ ವಿನಾಯಕ್ ಆಚಾರ್ಯ, ಗೀತರಚನೆಕಾರ ಅಂದಾನಿ ಮುಂತಾದ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 