ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ನಿಮಿತ್ತ ರಾಷ್ಟ್ರೀಯ ಯುವ ದಿನಾಚರಣೆ

ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ನಿಮಿತ್ತ ರಾಷ್ಟ್ರೀಯ ಯುವ ದಿನಾಚರಣೆ  National Youth Day celebrated on the occasion of Swami Vivekananda's birth anniversary

          ಯಮಕನಮರಡಿ 13 :  ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ನಿಮಿತ್ಯ  ರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮವನ್ನು ಪ್ರಾಚಾರ್ಯರಾದ ಶ್ರೀ.ಎಸ್‌.ಎ.ರಾಮನಕಟ್ಟಿ  ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.   ಕಾರ್ಯಕ್ರಮದ ಪೂರ್ವದಲ್ಲಿ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ಸಂದ್ಯಾ ನಾವಿ ಇವಳು ಇತ್ತಿಚಿಗೆ ಮೈಸೂರಿನಲ್ಲಿ ನಡೆದ ಕವಿಗೋಷ್ಠಿ ಮತ್ತು ಕನ್ನಡ ಹಬ್ಬ ದಲ್ಲಿ ಕವನ ರಚನೆ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ವರ್ಣಭೂಮಿ ಚಿತ್ತಾರ ಸ್ಟಾರ ಎಚಿವರ್ಸ ಅವಾರ್ಡ ಮತ್ತು ಭರವಸೆಯ ಬೆಳಕು ಎಂಬ ಪ್ರಶಸ್ತಿಗೆ ಭಾಜನಾರಾಗಿ ದ್ವಿತೀಯ ಸ್ಥಾನ ಪಡೆದಿದ್ದು ಕಾರಣ ವಿದ್ಯಾರ್ಥಿನಿಗೆ ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.  

 ರಾಷ್ಟ್ರೀಯ ಯುವ ದಿನದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿಶೇಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ. ಪ್ರಕಾಶ ಹೊಸಮನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ ವಿವೇಕಾನಂದರ ಆದರ್ಶ ತತ್ವ ಜೀವನವನ್ನು ವಿವರಿಸಿ ಯುವಕರೇ ದೇಶದ ಬೆನ್ನೆಲುಬು ಆಗಿದ್ದು ಇಂದಿನ ವಿದ್ಯಾರ್ಥಿಗಳೆ ನಾಳಿನ ಪ್ರಜೆಗಳಾಗಿದ್ದು  ಅದಕ್ಕಾಗಿ ನಾವೆಲ್ಲರೂ ವಿವೇಕಾನಂದರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌.ರಾಮನಕಟ್ಟಿ ಮಾತನಾಡಿ ವಿವೇಕಾನಂದರು ಅತೀ ಚಿಕ್ಕವಯಸಿನಲ್ಲೆ ಅಗಾಧ ಸಾಧನೆಮಾಡಿದ್ದು ನಮ್ಮ ದೇಶದ ಪರಂಪರೆ ಆದರ್ಶ ಆದ್ಯಾತ್ಮಿಕತೆ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ಮಹಾಚೇತನ ಎಂದು ಎಂದು ತಿಳಿಸಿದರು. ಎಸ್‌.ಆರ್‌.ತಬರಿ ಕಾರ್ಯಕ್ರಮವನ್ನು ನಿರೂಪಿಸುತ್ತ ಅವರ ಬಾಲ್ಯ ಜೀವನ ಹಾಗೂ ಸಾಧನೆಗಳ ಬಗ್ಗೆ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು. ಎನ್‌.ಎಸ್‌.ಎಸ್‌.ಕಾರ್ಯಕ್ರಮ ಅಧಿಕಾರಿ ಹಾಗೂ ಉಪನ್ಯಾಸಕರಾದ ಬಿ.ಬಿ.ಕೊಡ್ಲಿ ಕಾರ್ಯಕ್ರಮದ ಕೊನೆಯಲ್ಲಿ ವಂದನೆ ಸಲ್ಲಿಸಿದರು.