ಕೊಪ್ಪಳದ ಕವಿ ಸಮ್ಮೇಳನ ದಲ್ಲಿ ರಾಷ್ಟ್ರೀಯ ಕವಿ ನವ ದೆಹಲಿ ಅನಾ ದೆಹಲ್ವಿ ಯವರ ಪುಸ್ತಕ ಬಿಡುಗಡೆ
National Poet New Delhi Ana Dehalvi's book released at Koppal Poet's Conference
ಕೊಪ್ಪಳ 27 : ನಗರದ ಸಾಹಿತ್ಯ ಭವನದಲ್ಲಿ ಶನಿವಾರ ರಾತ್ರಿ ವೇಳೆಯಲ್ಲಿ ಫಿರ್ದೋಸ್ ಸಾಂಸ್ಕೃತಿಕ ಕ್ರೀಡಾ ಹಾಗೂ ತರಬೇತಿ ಸಂಸ್ಥೆ ಹಾಗೂ ಕರ್ನಾಟಕ ಉರ್ದು ಅಕಾಡೆಮಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಬೃಹತ್ ಕವಿ ಸಮ್ಮೇಳನ ಹಾಗೂ ಉರ್ದು ಮುಷಾಯರಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರ ಮಟ್ಟದ ಉರ್ದು ಹಿರಿಯ ಕವಿ ಸಾಹಿತಿಯಾದ ನವ ದೆಹಲಿಯ ಅನಾ ಡೆಹೆಲ್ವಿ ಬರೆದ ಬರಹಗಳು ಮತ್ತು ಕವಿತೆಗಳು ಪ್ರಕಟಗೊಂಡಿರುವ ಪುಸ್ತಕವನ್ನು ಕೊಪ್ಪಳದ ಕಾರ್ಯಕ್ರಮದಲ್ಲಿ ಕವಿ ಸಮೇಳನದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಸುರೇಂದ್ರ ಸಿಂಗ್ ಶಜರ್ ರವರು ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಹಿಂದಿ ಮತ್ತು ಉರ್ದು ಕವಿಗಳು ಪಾಲ್ಗೊಂಡು ಕವನ ವಾಚನ ಮಾಡಿದರು,ಅಂದು ರಾತ್ರಿ 10 ಗಂಟೆಗೆ ಪ್ರಾರಂಭಗೊಂಡ ಕವಿಗೋಷ್ಠಿ ಕಾರ್ಯಕ್ರಮ ಬೆಳಗಿನ ಜಾವ ದ ವರೆಗೆ ಯಶಸ್ವಿಯಾಗಿ ನಡೆಯಿತು, ಕಾರ್ಯಕ್ರಮದಲ್ಲಿ ನಮ್ಮ ದೇಶದ ಹಿರಿಯ ಕವಿ ಮತ್ತು ಸಾಹಿತಿಗಳಾದ ಶಕೀಲ್ ಅಹಮದ್ ಮುಂಬೈ, ನದೀಮ್ ಶಾದ್ ದೇವಬಂಧ ,ಅಬರಾರ ಕಾಶಿಫ್ ಅಮರಾವತಿ, ಅನಾ ದೆಹಲ್ವಿ ದೆಹಲಿ, ಹಾಮಿದ ಭೂಸಾವಲ್ಲಿ, ಚಾಚಾ ಪಾಲಠುರಿ ತೆಲಂಗಾಣ, ಚಾಂದನಿ ಪಾಂಡೆ ಕಾನ್ಪುರ್, ಸಿರಾಜ್ ಸೋಲಾಪುರಿ ಮುಂಬೈ, ಸುಹಾನಾ ನಾಜ್ ಮುಂಬೈ, ವೀನೀತ್ ಶಂಕರ್ ಪುಣೆ, ರಾಧಿಕಾ ಮಿತ್ತಲ್ ದೆಹಲಿ, ಮಡ್ಡಿ ಕ್ರಸ್ಟಿ ಪುಣೆ, ಹಾಗೂ ರಾಯಚೂರಿನ ಡಾ, ಇಫ್ತೆ ಕಾರ್ ಶಕೀಲ್, ಮತ್ತು ಸ್ಥಳೀಯ ಕೊಪ್ಪಳದ ಹಿರಿಯ ಸಾಹಿತಿ ಮತ್ತು ಕವಿಗಳಾದ ಅನ್ವರ್ ಹುಸೇನ್, ಹಾಗೂ ವಿಜಾರತ್ ಅಲಿ ತಾಯರ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ನಂತರ ಕವಿ ಸಮ್ಮೇಳನದಲ್ಲಿ ತಮ್ಮ ಕವನ ವಾಚನ ಮಾಡಿ ಜನ ಮನರಂಜಿಸಿದರು, ಇದರ ನಿರೂಪಣೆಯನ್ನು ಕೊಪ್ಪಳದ ಉರ್ದು ಸಾಹಿತಿ ಮೊಹಮ್ಮದ್ ಬದಿಯುದ್ದೀನ್ ಅಹಮದ್ ನವೀದ ರವರು ನೆರವೇರಿಸಿದರು, ಸಮದ ಸಿದ್ದೀಕಿ ಸಾಧಿಕ ಅಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದುಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ವಿವಿಧ ಗಣ್ಯರು , ಸದರಿ ಬೃಹತ್ ಮುಷಾಯರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 