ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ ಪದೋನ್ನತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಲು ನಾಗರಾಜ ಜುಮ್ಮನ್ನವರ ಆಗ್ರಹ

ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ ಪದೋನ್ನತಿಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಲು ನಾಗರಾಜ ಜುಮ್ಮನ್ನವರ ಆಗ್ರಹ Nagaraj Jumman's demand to correct the injustice being done to the employees of Kalyana Karnataka i

                          ಕೊಪ್ಪಳ 07 : ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ ಅನುಚ್ಛೇದ 371 ಜೆ ಅಡಿಯಲ್ಲಿ ವಿಶೇಷ ಸೌಲಭ್ಯ ಒದಗಿಸಲಾಗಿದ್ದು, ನೌಕರರು ಎದುರಿಸುತ್ತಿರುವ ಸಮಸ್ಯಗಳ ಬಗ್ಗೆ ಚರ್ಚಿಸಲು ದಿನಾಂಕ 07/12/2025 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯದ ಹಿರಿಯ ಉಪಾಧ್ಯಕ್ಷರು, ಕೊಪ್ಪಳ ಜಿಲ್ಲೆಯ ಅಧ್ಯಕ್ಷರು, ಹಾಗೂ 371 ಜೆ ಸಂಚಾಲಕರು ಆದ ನಾಗರಾಜ ಜುಮ್ಮನ್ನವರ ಇವರ ಅಧ್ಯಕ್ಷತೆಯಲ್ಲಿ ಕೊಪ್ಪಳದ ಪರೀವೀಕ್ಷಣಾ ಮಂದಿರದಲ್ಲಿ ಸಭೆಯನ್ನು ಏರಿ​‍್ಡಸಲಾಗಿತ್ತು. ಸಭೆಯಲ್ಲಿ ನಾಗರಾಜ ಜುಮ್ಮನ್ನವರ ಮಾತನಾಡುತ್ತಾ 371 ಜೆ ವಿಶೇಷ ಸೌಲಭ್ಯ ಕಲ್ಪಿಸಿದ ನಂತರ ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ ಪದೋನ್ನತಿ ನೀಡುವಾಗ ಜೇಷ್ಠತೆಯಲ್ಲಿ ಹಿರಿಯರಿದ್ದರೂ ಪದೋನ್ನತಿಯಿಂದ ವಂಚಿತರಾಗುತ್ತಿದ್ದಾರೆ.

                         ಹಾಗೂ ಜೇಷ್ಠತೆಯಲ್ಲಿ ಕಿರಿಯರಿದ್ದರೂ ಕಲ್ಯಾಣ ಕರ್ನಾಟಕ ಹೊರತುಪಡಿಸಿದ ನೌಕರರಿಗೆ ಪದೋನ್ನತಿ ನೀಡಲಾಗುತ್ತಿದ್ದು, ಹಿರಿಯ ನೌಕರರು ಕಿರಿಯ ನೌಕರರ ಕೆಳಗಡೆ ಕಾರ್ಯನಿರ್ವಹಿಸುವ ಅನಿವಾರ್ಯತೆ ಉಂಟಾಗುತ್ತಿದ್ದು, 371 ಜೆ ಕಾನೂನಿಗೆ ಸೂಕ್ತ ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ ನ್ಯಾಯ ಒದಗಿಸಲು ಆಗ್ರಹಿಸಿದರು. ಈ ಕುರಿತು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು, ಪದೋನ್ನತಿ ವಂಚಿತ ನೌಕರರು ಸವಿಸ್ತಾರವಾಗಿ ವಿಷಯವನ್ನು ಸಭೆಯಲ್ಲಿ ಮಂಡಿಸಿದರು. ಸಭೆಯು ಸುಧೀರ್ಘವಾಗಿ ಚರ್ಚಿಸಿ ಮುಂದಿನ ದಿನಮಾನಗಳಲ್ಲಿ ಸರ್ಕಾರದ ಗಮನಕ್ಕೆ ತಂದು ಸಮಸ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಲು ತೀರ್ಮಾನಿಸಲಾಯಿತು. ಮುಂದಿನ ಸಭೆಯನ್ನು ಜನೇವರಿ 2026 ರಲ್ಲಿ ರಾಯಚೂರಿನಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

                        ಸಭೆಯಲ್ಲಿ ಬೀದರ ಜಿಲ್ಲಾಧ್ಯಕ್ಷರಾದ ಸೋಮಶೇಖರ ಚಿದ್ರಿ, ರಾಯಚೂರು ಜಿಲ್ಲಾಧ್ಯಕ್ಷರಾದ ಕೃಷ್ಣ, ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಮ್‌.ಎ.ಆಸೀಫ್, ವಿಜಯನಗರ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನಗೌಡ, ಕಲಬುರ್ಗಿ ಜಿಲ್ಲಾ ಕಾರ್ಯಧ್ಯಕ್ಷರಾದ ಚಂದ್ರಕಾಂತ ಏರಿ, ಯಾದಗಿರಿ ಪದಾಧಿಕಾರಿಯಾದ ರಾಜಶೇಖರಗೌಡ, ಕಲಬುರ್ಗಿ ವಿಭಾಗದ ಉಪಾಧ್ಯಕ್ಷರಾದ ನಿಜಲಿಂಗಪ್ಪ ಕೊರ್ಲಳ್ಳಿ, ಜಿಲ್ಲಾ ಸಂಘದ ಕಾರ್ಯದರ್ಶಿ ಶಿವಪ್ಪ ಜೋಗಿ, ರಾಜ್ಯ ಪರಿಷತ್ ಸದಸ್ಯರಾದ ಮಹಮ್ಮದ ಆಸೀಪ್‌ಅಲಿ, ಗೌರವಾಧ್ಯಕ್ಷರಾದ ಸಿದ್ದಪ್ಪ ಮೇಳಿ, ಖಜಾಂಚಿಯಾದ ಜಯತೀರ್ಥ ದೇಸಾಯಿ, ರಾಜ್ಯ ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.